Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ನಿಮಿಷದಲ್ಲಿ ಮಾಡಿ ಸ್ಪೆಷಲ್ ರುಚಿಯ ಮೊಟ್ಟೆ ಸಾರು! ಇಲ್ಲಿದೆ ರೆಸಿಪಿ
ನಾನ್ ವೆಜ್ ಹಾಗೂ ವೆಜ್ ಪ್ರಿಯರು ಇಬ್ಬರು ಇಷ್ಟಪಡುವ ಖಾದ್ಯ ಅಂದ್ರೆ ಅದು ಮೊಟ್ಟೆ. ಏಕೆಂದರೆ ಕೆಲವು ಮಾಂಸ ಸೇವಿಸದವರು ಸಹ ಮೊಟ್ಟೆ ಸವಿಯುತ್ತಾರೆ. ಹಾಗೆ ಅದರ ರುಚಿ ಸಹ ಅಷ್ಟೆ ಚೆನ್ನಾಗಿರುತ್ತದೆ. ಆರೋಗ್ಯಕ್ಕೆ ಮೊಟ್ಟೆ ತುಂಬಾನೆ ಒಳ್ಳೆಯದು. ಯಾವ ಫುಡ್‌ನಲ್ಲಿ ಸಿಗದ ಪ್ರೋಟೀನ್ ಅತೀ ಕಡಿಮೆ ಬೆಲೆಗೆ ಸಿಗುವುದು ಮೊಟ್ಟೆಯಲ್ಲೇ.
ಹೀಗಾಗಿ ನಿಮ್ಮ ನಿತ್ಯದ ಊಟ ತಿಂಡಿಯಲ್ಲಿ ಮೊಟ್ಟೆಯನ್ನ ಸೇರಿಸಿಕೊಳ್ಳಿ. ಮೊಟ್ಟೆಯಿಂದ ಹಲವಾರು ರೀತಿಯ ಖಾದ್ಯ ಮಾಡಬಹುದು. ಅದರಲ್ಲು ಮೊಟ್ಟೆ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಬಹಳ ಉತ್ತಮ. ಅದೇ ರೀತಿ ಮೊಟ್ಟೆಯಿಂದ ಹಲವು ರೀತಿಯ ರುಚಿಕರ ಖಾದ್ಯ ಮಾಡಬಹುದು. ಮೊಟ್ಟೆ ಬಿರಿಯಾನಿ, ಮೊಟ್ಟೆ ಫ್ರೈ, ಆಮ್ಲೆಟ್, ಕರಿ, ಸಾಂಬಾರ್, ಫ್ರೈ, ಆಫ್ ಬಾಯಿಲ್ ಹೀಗೆ ಹತ್ತಾರು ರೀತಿ ಖಾದ್ಯಘಳ ಸವಿಯಬಹುದು.

ಆದ್ರೆ ನೀವು ಮೊಟ್ಟೆಯಲ್ಲಿ ಒಂದೇ ರೀತಿಯ ಕರಿ ಅಥವಾ ಸಾರು ಮಾಡು ಸವಿದಿರುತ್ತೀರಿ. ಮೊಟ್ಟೆಯನ್ನ ಬೇಯಿಸಿವ ಮೂಲಕ ಸಾರು ಮಾಡಬಹುದು, ಆದ್ರೆ ನಾವಿಂದು ವಿಶೇಷ ರುಚಿಯ ಮೊಟ್ಟೆ ಸಾರು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಹಾಗಾದ್ರೆ ಈ ಸ್ಪೆಷಲ್ ಮೊಟ್ಟೆ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಟ್ಟೆ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಮೊಟ್ಟೆ -5
- ಎಣ್ಣೆ - 2 ಟೀಸ್ಪೂನ್
- ಕರಿಬೇವು
- ಈರುಳ್ಳಿ - 1
- ಟೊಮೆಟೋ - 1
- ತೆಂಗಿನ ಕಾಯಿ ತುರಿ- 1 ಕಪ್
- ಲವಂಗ - 6
- ಚಕ್ಕೆ
- ಶುಂಠಿ
- ಬೆಳ್ಳುಳ್ಳಿ - 1
- ಮೆಣಸಿನ ಪುಡಿ - 1 tbs
- ಧನಿಯಾ ಪುಡಿ - 1 tbs
- ಅರಿಶಿನ ಪುಡಿ - 1/4 ಟೀಸ್ಪೂನ್
- ರುಚಿಗೆ ಉಪ್ಪು
- ಕೊತ್ತಂಬರಿ ಸೊಪ್ಪು
ಮೊಟ್ಟೆ ಸಾರು ಮಾಡುವ ವಿಧಾನ
ಮೊದಲು 5 ಮೊಟ್ಟೆಗಳನ್ನು ಬೇಯಿಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಅದಕ್ಕೆ ಕರಿಬೇವು, ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಬಳಿಕ ಇದಕ್ಕೆ ಟೊಮೆಟೋ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು, ತೆಂಗಿನ ತುರಿ, ಶುಂಠಿ, ಚಕ್ಕೆ, ಲವಂಗ, ಬೆಳ್ಳುಳ್ಳಿ, ಖಾರದ ಪುಡಿ, ಧನಿಯಾ ಪುಡಿ, ಅರಶಿಣ, ಕಾಳು ಮೆಣಸು, ನೀರು ಹಾಕಿಕೊಂಡು ಚೆನ್ನಾಗಿ ನುಣ್ಣಗೆ ಆಗುವವರೆಗು ರುಬ್ಬಿಕೊಳ್ಳಿ.
ಈ ರುಬ್ಬಿಕೊಂಡ ಮಸಾಲೆಯನ್ನು ಒಲೆ ಮೇಲೆ ಇಟ್ಟ ಪಾತ್ರೆಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಮುಚ್ಚಳ ಮುಚ್ಚಿ 3 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಈಗ ಮುಚ್ಚಳ ತೆಗೆದು ಎಲ್ಲಾ ಮೊಟ್ಟೆಗಳನ್ನು ಸಾರಿನಲ್ಲಿ ಬಿಡಿ. ಮೊಟ್ಟೆಯನ್ನ ಇಡಿಯಾಗಿ ಹಾಕಬಹುದು, ಇಲ್ಲವೆ ಕತ್ತರಿಸಿಯೂ ಹಾಕಬಹುದು.
ಹೀಗೆ ಹಾಕಿದ ಬಳಿಕ 5ರಿಂದ 6 ನಿಮಿಷ ಮುಚ್ಚಳ ಮುಚ್ಚಿ ಕುದಿಸಿಕೊಳ್ಳಿ. ಬಳಿಕ ಮುಚ್ಚಳ ತೆಗೆದು ಕೈ ಆಡಿಸಿ, ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಕಲಸಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸ್ಪೆಷಲ್ ರುಚಿಯ ಮೊಟ್ಟೆ ಸಾರು ಸವಿಯಲು ಸಿದ್ಧವಾಗುತ್ತೆ. ನೀವು ಸಹ ಮೊಟ್ಟೆ ಪ್ರೇಮಿಗಳಾಗಿದ್ದರೆ ಈ ರುಚಿಯ ಸಾರು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
