Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಮದುವೆ ಮನೆ ರುಚಿಯಲ್ಲಿ ಅದ್ಭುತವಾಗಿ ಬೀಟ್ರೂಟ್ ಪಲ್ಯ ಮಾಡಿ..! ಸ್ಪೆಷಲ್ ಡಿಶ್ ರೆಸಿಪಿ
ಊಟಕ್ಕೆ ಒಂದು ಪಲ್ಯ ಇದ್ದರೆ ರುಚಿ ಚೆನ್ನಾಗಿರುತ್ತೆ. ಊಟ ಚೆನ್ನಾಗಿ ಸೇರುತ್ತೆ. ಹೀಗಾಗಿ ಎಲ್ಲರು ಯಾವುದಾದರು ತರಕಾರಿಯ ಪಲ್ಯ ಮಾಡಿಯೇ ಮಾಡುತ್ತಾರೆ. ಮಧ್ಯಾಹ್ನದ ಊಟ, ರಾತ್ರಿ ಊಟಕ್ಕೆ ಸೇರಿ ಒಂದು ಪಲ್ಯ ಮಾಡುವುದು ಸಾಮಾನ್ಯ. ಅದರಲ್ಲೂ ಅತ್ಯಂತ ರುಚಿಕರವಾಗಿ ಮಾಡುವಂತಹ ಬಿಟ್ರೂಟ್ ಪಲ್ಯವನ್ನು ನಾವಿಂದು ಮಾಡುವುದು ಹೇಗೆ ನೋಡೋಣ.
ಬೀಟ್ರೂಟ್ ಆರೋಗ್ಯಕ್ಕೆ ಬಹಳ ಉತ್ತಮ ತರಕಾರಿ, ಬೀಟ್ರೂಟ್ ರಸ ಕುಡಿಯುವುದು ರಕ್ತ ಹಾಗೂ ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ರಕ್ತ ಪರಿಚಲನೆಗೆ ಇದೊಂದು ಒಳ್ಳೆಯ ತರಕಾರಿಯಾಗಿದೆ. ಬೀಟ್ರೂಟ್ ನಲ್ಲಿ ವಿಟಮಿನ್ ಎ, ಬಿ 6, ಸಿ ಮತ್ತು ಖನಿಜಗಳು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫಾಸ್ಫರಸ್, ಮ್ಯಾಂಗನೀಸ್ ಹೊಂದಿದೆ. ಹೀಗಾಗಿ ಬೀಟ್ರೂಟ್ ಸೇವನೆ ದೇಹಕ್ಕೆ ಬಹಳ ಪ್ರಯೋಜನಕಾರಿ.

ಇನ್ನು ನಾವು ಬೀಟ್ರೂಟ್ ಪಲ್ಯವನ್ನು ಹೊಸ ಶೈಲಿಯಲ್ಲಿ ಮಾಡುವುದನ್ನು ತಿಳಿದುಕೊಳ್ಳೋಣ. ಬೀಟ್ರೂಟ್ ಪಲ್ಯವನ್ನು ಸಾಮಾನ್ಯವಾಗಿ ತೆಂಗಿನಕಾಯಿ ತುರಿ ಹಾಕಿ ಮಾಡುತ್ತೇವೆ. ಊಟಕ್ಕೆ ಬಹಳ ರುಚಿಯಾಗಿರುತ್ತೆ, ಆದ್ರೆ ನಾವಿಂದು ಸುಲಭವಾಗಿ ಮದುವೆ ಮನೆ ಶೈಲಿಯಲ್ಲಿ ಮಾಡುವುದನ್ನು ನೋಡೋಣ.
ಹಾಗಾದ್ರೆ ಮದುವೆ ಮನೆ ಶೈಲಿಯಲ್ಲಿ ಬೀಟ್ರೂಟ್ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯಬೇಕು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೀಟ್ರೂಟ್ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಬೀಟ್ರೂಟ್ - 2
- ಕಡಲೆ ಬೇಳೆ
- ಈರುಳ್ಳಿ 1
- ತೆಂಗಿನಕಾಯಿ ತುರಿ
- ಹಸಿಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಸಾಸಿವೆ
- ದನಿಯಾ ಕಾಳು ಅಥವಾ ಕೊತ್ತಂಬರಿ ಕಾಳು
- ಶುಂಠಿ
- ಬೆಳ್ಳುಳ್ಳಿ
- ಜೀರಿಗೆ
- ಅರಿಶಿನದ ಪುಡಿ
- ಹುಣಸೆಹಣ್ಣು
- ಬೆಲ್ಲ
- ಇಂಗು
- ಉಪ್ಪು
- ಎಣ್ಣೆ
ಬೀಟ್ರೂಟ್ ಪಲ್ಯ ಮಾಡುವುದ ಹೇಗೆ?
ಮೊದಲು ಕಡಲೆ ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ಈಗ ಕುಕ್ಕರ್ ತೆಗೆದುಕೊಂಡು ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಬೀಟ್ರೂಟ್ ಹಾಕಿ, ಹಾಗೆ ಕಡಲೆ ಬೇಳೆ ಸಹ ಹಾಕಿಕೊಂಡು 2 ಲೀಟರ್ ನೀರು ಹಾಕಿ. ಉಪ್ಪು ಹಾಕಿ ಒಂದು ಸೀಟಿ ಹೊಡೆಯಲು ಬಿಡಿ. ಒಂದು ಸೀಟಿಯ ಬಳಿಕ ಮುಚ್ಚಳ ತೆಗೆದು ಅದರ ನೀರು ಬಸಿದು ಇಟ್ಟುಕೊಳ್ಳಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಸಾಸಿವೆ, ಜೀರಿಗೆ, ಧನಿಯಾ ಕಾಳು, ಬೆಲ್ಲ, ಹುಣಸೆ ಹಣ್ಣು, ಅರಶಿನ ಪುಡಿ, ಕರಿಬೇವು ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಎಷ್ಟು ನುಣ್ಣಗೆ ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಸಾಸಿವೆ\, ಇಂಗು, ಕರಿಬೇವು, ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು 1 ನಿಮಿಷ ಹುರಿದುಕೊಳ್ಳಿ. ತದನಂತರ ಕುಕ್ಕರ್‌ನಲ್ಲಿ ಬೇಯಿಸಿಕೊಂಡ ಬೀಟ್ರೂಟ್ ಹಾಗೂ ಕಡಲೆ ಬೇಳೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 3 ನಿಮಿಷ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಂಡರೆ ನಿಮ್ಮ ಮುಂದೆ ಅದ್ಭುತ ರುಚಿಯ ಬೀಟ್ರೂಟ್ ಪಲ್ಯ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಇದರ ರುಚಿ ನೋಡಿದ್ರೆ ನೀವು ಮತ್ತೆ ಮತ್ತೆ ಮಾಡಿ ಸವಿಯುತ್ತೀರಿ.



Click it and Unblock the Notifications