Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಹಬ್ಬದ ಸಂಭ್ರಮ ಹೆಚ್ಚಿಸುವ ಬಾದುಷಾ..! ಕೆಲವೇ ನಿಮಿಷದಲ್ಲಿ ಮಾಡಿ ಸವಿಯಬಹುದು!!
ಹಬ್ಬದ ಸಮಯದಲ್ಲಿ ನೀವು ಕೂಡ ಅದ್ಭುತ ರುಚಿ ನೀಡುವಂತಹ ಸಿಹಿಯನ್ನು ಮಾಡಿರುತ್ತೀರಿ. ಸಿಹಿ ಇದ್ದರೇನೆ ಹಬ್ಬದ ಸಂಭ್ರಮ ಹೆಚ್ಚಾಗುತ್ತೆ. ಹಾಗೆ ಈ ಸಂಭ್ರಮಕ್ಕಾಗಿ ನಾವು ಒಂದಲ್ಲಾ ಒಂದು ರೀತಿಯ ಸಿಹಿ ಮಾಡುವುದು ಸಾಮಾನ್ಯ. ಮನೆಗೆ ಯಾರಾದರು ಸಂಬಂಧಿಕರು ಬರುವಾದರೆ ಹಾಗೆ ಶುಭ ಕಾರ್ಯವಿದ್ದಾಗಲು ಸಿಹಿ ತಿಂಡಿ ಮಾಡುವುದು ಕಾಮನ್. ಇನ್ನು ಹಬ್ಬದಲ್ಲಂತು ಸಿಹಿ ಇರಲೇಬೇಕು.
ಈಗ ಶಿವರಾತ್ರಿ ಹಬ್ಬ ಹತ್ತಿರವಾಗುತ್ತಿದೆ. ಹೀಗಾಗಿ ಈ ಸಮಯದಲ್ಲಿ ನಾವು ಹೊಸ ಹೊಸ ಸಿಹಿ ತಿಂಡಿಗಳ ಕುರಿತಂತೆ ತಿಳಿದುಕೊಳ್ಳೋಣ. ಈ ಮೊದಲು ಶಿವರಾತ್ರಿಗೆ ಮಾಡಬಹುದಾದ ಹಲವು ಸಿಹಿಯನ್ನು ನಾವು ತಿಳಿಸಿದ್ದೇವೆ. ಈಗ ಹಬ್ಬದಂದು ರುಚಿ ರುಚಿ ಬಾದುಷಾ ಮಾಡುವ ಕುರಿತು ತಿಳಿದುಕೊಳ್ಳೋಣ. ಸಿಹಿ ಸಿಹಿಯ ಬಾದುಷಾ ಎಲ್ಲರಿಗೂ ಇಷ್ಟವಾಗುವ ಸಿಹಿ ತಿಂಡಿಯಾಗಿದೆ.

ಸಕ್ಕರೆ ಪಾಕದಲ್ಲಿ ಹಾಕಿರುವ ಈ ಬಾದುಷಾ ಸವಿಯುವುದು ಅದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹೀಗಾಗಿ ಹಬ್ಬದ ಸಮಯದಲ್ಲಿ ಎಲ್ಲರೂ ಈ ಸಿಹಿ ತಿಂಡಿ ಮಾಡಿ ಸವಿಯಲು ಮುಂದಾಗುತ್ತಾರೆ. ಹಾಗೆ ನೈವೇದ್ಯಕ್ಕೂ ಕೂಡ ಈ ಸಿಹಿ ಬಳಸುವುದು ನೋಡಬಹುದು. ಹಾಗಾದ್ರೆ ನಾವಿಂದು ಈ ಬಾದುಷಾ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.
ಬಾದುಷಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾದುಷಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೈದಾ ಹಿಟ್ಟು - 1 ಕಪ್
- ಅಡುಗೆ ಸೋಡಾ - 1/4 ಚಮಚ
- ಮೊಸರು - 2 ಚಮಚ
- ತುಪ್ಪ - 1 1/2 ಚಮಚ
- ಸಕ್ಕರೆ - 3/4 ಕಪ್
- ನೀರು - 1/2 ಕಪ್
- ಏಲಕ್ಕಿ - 3
- ಅಡುಗೆ ಎಣ್ಣೆ
- ಉಪ್ಪು
ಬಾದುಷಾ ಮಾಡುವ ವಿಧಾನವೇನು?
ಮೊದಲು ಬೌಲ್‌ಗೆ ಮೈದಾ ಹಾಗೂ ಉಪ್ಪು, ಅಡುಗೆ ಸೋಡಾ, ಮೊಸರು, ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ, ಕೈಯಿಂದ ಚೆನ್ನಾಗಿ ಕಲಸಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಹದ ಮಾಡಿಕೊಳ್ಳಿ. ಚಪಾತಿ ಹಿಟ್ಟಿನಂತೆ ಗಟ್ಟಿಯಾಗಿ ಬರಬೇಕು. ನಂತರ ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಇಟ್ಟು ಮುಚ್ಚಳ ಮುಚ್ಚಿ 15 ನಿಮಿಷ ಬಿಡಬೇಕು.
ಈಗ ಬಾಣಲೆಯಲ್ಲಿ ಸಕ್ಕರೆಯಲ್ಲಿ ನೀರು ಹಾಕಿ ಪಾಕ ರೆಡಿ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಹಾಕಿ ಮಿಕ್ಸ್ ಮಾಡಿ ಒಂದು ಎಳೆ ಬರುವವರೆಗೂ ಪಾಕ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಕುದಿಸಿ ಸಣ್ಣದಾಗಿ ಅಂಟು ಬಂದಾಗ ಒಲೆ ಆಫ್ ಮಾಡಿ.
ಈಗ ಹಿಟ್ಟನ್ನು ಮತ್ತೊಮ್ಮೆ ಹದ ಮಾಡಿಕೊಂಡು ಸಣ್ಣದಾಗಿ ಗೋಲಿ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಂಡು ಇಟ್ಟುಕೊಳ್ಳಿ. ಎಲ್ಲಾ ಹಿಟ್ಟನ್ನು ಉಂಡೆ ಮಾಡಿಕೊಂಡು ಇಟ್ಟುಕೊಳ್ಳಿ. ಮಧ್ಯದಲ್ಲಿ ಪ್ರೆಸ್ ಮಾಡಿ ಸ್ವಲ್ಪ ಕುಳಿಯಂತೆ ಮಾಡಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಈ ಉಂಡೆಗಳನ್ನು ಎಣ್ಣೆಗೆ ಹಾಕಿ ಕುದಿಯಲು ಬಿಡಿ. ಗೋಲ್ಡನ್ ಕಲರ್‌ಗೆ ಬಂದಾಗ ಎಣ್ಣೆಯಿಂದ ತೆಗೆದು ಸಕ್ಕರೆ ಪಾಕದಲ್ಲಿ ಹಾಕಿಡಿ.
ಉಂಡೆಗಳಿಗೆ ಚೆನ್ನಾಗಿ ಪಾಕ ಹಿಡಿಯುವಂತೆ ಮಾಡಿಕೊಳ್ಳಿ. 5 ನಿಮಿಷ ಪಾಕದಲ್ಲಿಯೇ ಇಟ್ಟು ಬಳಿಕ ಎತ್ತಿಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬಾದುಷಾ ರೆಡಿಯಾಗುತ್ತೆ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಅತ್ಯಂತ ರುಚಿಕರ ಸಿಹಿ ಇದಾಗಿದೆ. ಹಬ್ಬದಂದು ನೀವು ಕೂಡ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
