Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಘಮ ಘಮ ಎನ್ನುವಂತಹ ಹೆಸರು ಬೇಳೆ ಕಿಚಡಿ ಇದು..! ಹಬ್ಬದ ವಾತಾವರಣ ಸೃಷ್ಟಿ ಮಾಡಿ!
ಊಟದ ಜೊತೆಗೆ ಅಥವಾ ಬೆಳಗ್ಗೆ ತಿಂಡಿ ಸಮಯದಲ್ಲಿ ಸವಿಯಲು ಬೆಸ್ಟ್ ಖಾದ್ಯ ಯಾವುದು ಅಂದ್ರೆ ಹತ್ತಾರು ಬಗೆ ನಿಮ್ಮ ಕಣ್ಣ ಮುಂದೆ ಬರಬಹುದು. ಹಾಗೆ ನಾವು ತಿಂಡಿ ಹಾಗೂ ಊಟದ ಜೊಗತೆಗೆ ಸವಿಯಲು ಉತ್ತರ ಭಾರತ ಶೈಲಿಯ ಕಿಚಡಿಯನ್ನು ನೀವು ಕೂಡ ಮಾಡಿರಬಹುದು. ಕಿಚಡಿ ಎಲ್ಲರು ಇಷ್ಟಪಡುವ ಖಾದ್ಯ. ಹಾಗೆ ಆರೋಗ್ಯಕ್ಕೂ ಕಿಚಡಿ ಬಹಳ ಉತ್ತಮ.
ಈ ಕಿಚಡಿಯನ್ನು ಹತ್ತಾರು ಬಗೆಯಲ್ಲಿ ಮಾಡಬಹುದು. ಸಮಯ ಉಳಿತಾಯ ಮಾಡಲು ಕೂಡ ಇದು ಅತ್ಯುತ್ತಮ ಖಾದ್ಯ, ಹಾಗಾದ್ರೆ ನಾವಿಂದು ಈ ಹೆಸರು ಬೇಳೆ ಕಿಚಡಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ಕಿಚಡಿ ಊಟದ ಜೊತೆಗೆ, ಬೆಳಗ್ಗೆ ತಿಂಡಿಗೂ ಸವಿಯಬಹುದು. ಅದ್ಭುತವಾಗಿ ರುಚಿಯಲ್ಲಿ ಬಿಸಿ ಬಿಸಿಯಾದ ಕಿಚಡಿ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯೋದು ಖಚಿತ.

ಕಿಚಡಿಯು ಬೆಳಗ್ಗೆ ಬ್ರೇಕ್ ಫಾಸ್ಟ್ಗೆ ಸವಿದರೆ ಅತ್ಯುತ್ತಮ. ಹಾಗಾದ್ರೆ ಬೆಳಗ್ಗೆ ತಿಂಡಿಗೆ ಈ ಹೆಸರು ಬೇಳೆ ಕಿಚಡಿ ಮಾಡುವುದು ಹೇಗೆ? ಈ ಕಿಚಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಬೇಳೆ ಕಿಚಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ - 1/2 ಕಪ್
- ಹೆಸರು ಬೇಳೆ - 1/2 ಕಪ್
- ಈರುಳ್ಳಿ
- ಶುಂಠಿ
- ಬೆಳ್ಳುಳ್ಳಿ
- ಕರಿಬೇವು
- ಒಣ ಮೆಣಸಿನಕಾಯಿ
- ಜೀರಿಗೆ ಪುಡಿ
- ಕೊತ್ತಂಬರಿ ಪುಡಿ
- ಗರಂ ಮಸಾಲ
- ಟೊಮೆಟೊ
- ಇಂಗು
- ಜೀರಿಗೆ
- ಅರಿಶಿನ ಪುಡಿ
- ಹಸಿರು ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ತುಪ್ಪ
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಹೆಸರು ಬೇಳೆ ಕಿಚಡಿ ಮಾಡುವುದು ಹೇಗೆ?
ಮೊದಲು ಒಂದು ಕಪ್ ಅಳತೆಗೆ ತೆಗೆದುಕೊಳ್ಳಿ. ಒಂದೇ ಕಪ್ನಲ್ಲಿ ಒಂದೇ ಅಳತೆಯ ಅಕ್ಕಿ ಹಾಗೂ ಹೆಸರು ಬೇಳೆ ಹಾಕಿ ಚೆನ್ನಾಗಿ ತೊಳೆದುಕೊಂಡು ನಂತರ ಎರಡಲ್ಲೂ ಒಂದು ಕುಕ್ಕರ್ಗೆ ಹಾಕಿ ಉಪ್ಪು ಹಾಕಿಕೊಳ್ಳಿ. ಖಾರದ ಪುಡಿ ಹಾಕಿ ನೀವು ಯಾವ ಕಪ್ನಲ್ಲಿ ಅಕ್ಕಿ ಹಾಗೂ ಬೇಳೆ ಹಾಕಿದರೆ ಒಂದು ಕಪ್ ಆಗುತ್ತೋ ಅದೇ ಕಪ್ನಲ್ಲಿ ಮೂರುವರೆ ಕಪ್ ನೀರು ಹಾಕಿ.
1 ಕಪ್ಗೆ ಎರಡು ಕಪ್ ನೀರು ಹಾಕುವುದು ಸಾಮಾನ್ಯ. ಆದ್ರೆ ಇದು ಕಿಚಡಿ ಆಗಿರೋದ್ರಿಂದ ನೀರು ಸ್ವಲ್ಪ ಜಾಸ್ತಿ ಬಳಸಬೇಕು. ಹೀಗೆ ನೀರು ಹಾಕಿದ ಬಳಿಕ ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಸಿಕೊಂಡು ಒಲೆ ಆಫ್ ಮಾಡಿಕೊಳ್ಳಿ. 3 ಸೀಟಿ ಬಳಿಕ ಮುಚ್ಚಳ ತೆಗೆದು ಗಟ್ಟಿಯಾಗಿದ್ದರೆ ಮತ್ತೆ ನೀರು ಹಾಕಿಕೊಳ್ಳಿ. ಈಗ ಒಲೆ ಮೇಲೆ ಇಂದು ಬಾಣಲೆ ಇಟ್ಟು ಒಗ್ಗರಣೆ ಮಾಡಿ.
ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಜೀರಿಗೆ, ಇಂಗು, ಕಡಲೆ ಬೇಳೆ, ಶುಂಠಿ, ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಹಸಿ ಮೆಣಸು, ಕರಿಬೇವು, ಒಣ ಮೆಣಸು ಒಂದು ಟೊಮೆಟೋ ಕೂಡ ಹಾಕಿ 3ರಿಂದ 4 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಧನಿಯಾ, ಖಾರದ ಪುಡಿ, ಅರಶಿಣ, ಗರಂ ಮಸಾಲೆ, ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ಕುಕ್ಕರ್ನಲ್ಲಿರುವ ಬೇಳೆಗೆ ಹಾಕಿಕೊಂಡು ಮಿಕ್ಸ್ ಮಾಡಿ, ನಂತರ 1 ನಿಮಿಷ ಒಲೆ ಮೇಲೆ ಕುಕ್ಕರ್ ಹಾಗೆಯೇ ಬಿಡಿ. ನಂತರ ಒಳೆ ಆಫ್ ಮಾಡಿಕೊಂಡು ತುಪ್ಪ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದರೆ ನಿಮ್ಮ ಮುಂದೆ ಘಮ ಘಮ ಎನ್ನುವ ಕಿಚಡಿ ಸಿದ್ಧವಾಗುತ್ತೆ. ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
