Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ಶೀತ, ಕೆಮ್ಮು ಇದ್ರೆ ಜಸ್ಟ್ ಈ ಸೂಪ್ ಸಾಕು.! ಎಲ್ಲಾ ಸಮಸ್ಯೆಗೂ ಬೀಳುತ್ತೆ ಅಂತ್ಯ!
ಮಳೆಗಾಲ ಅಂತ್ಯದತ್ತ ಬಂದಿದೆ. ಕೆಲ ದಿನದಲ್ಲಿ ಬಹುತೇಕ ಭಾಗದಲ್ಲಿ ಮಳೆ ಕಡಿಮೆಯಾಗಿ ಚಳಿ ಹೆಚ್ಛಾಗುವ ಸಮಯವಿದು. ಈ ಸಮಯದಲ್ಲೇ ವಾತಾವರಣದಲ್ಲಿನ ಬದಲಾವಣೆಗಳು ಹಲವು ರೀತಿಯ ಅನಾರೋಗ್ಯ ತರಬಹುದು. ವಾತಾವರಣದಲ್ಲಿನ ಬದಲಾವಣೆಯು ಹಲವರಲ್ಲಿ ಹಲವು ರೀತಿಯ ಅನಾರೋಗ್ಯ ತರಬಹುದು. ಹವಾಮಾನದಲ್ಲಿನ ಬದಲಾವಣೆಯ ಕಾರಣದಿಂದ ಹಲವರಿಗೆ ಸಣ್ಣ ಪುಟ್ಟ ಅನಾರೋಗ್ಯ ಉಂಟಾಗುವುದು ನೋಡಬಹುದು.
ಅದ್ರಲ್ಲೂ ಕೆಮ್ಮು, ಶೀತ, ತಲೆನೋವು ಹಾಗೆ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳು ಎದುರಾಗುವುದು ನೋಡಬಹುದು. ಇಂತಹ ಸಮಯದಲ್ಲಿ ನೀವು ಹಲವು ರೀತಿಯಲ್ಲಿ ಪರಿಹಾರ ಮಾಡಬಹುದು. ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲಿ ಮಾಡುವಂತಹ ಸೂಪ್ ಕುರಿತಾಗಿ ತಿಳಿದುಕೊಳ್ಳೋಣ. ಶೀತ, ಕೆಮ್ಮು, ಗಂಟಲು ನೋವು ಇದ್ದರೆ ಮನೆಯಲ್ಲೇ ಪರಿಹಾರ ಮಾಡಬಹುದು.

ಮನೆಯಲ್ಲಿ ಇಂತಹ ಸಣ್ಣ ಪುಟ್ಟ ಸಮಸ್ಯೆಗೆ ಸೂಪ್ ಮಾಡಿ ಸವಿಯಬಹುದು. ಅದ್ರಲ್ಲೂ ಕೆಮ್ಮು, ಶೀತ, ಗಂಟಲು ನೋವು ಇದ್ದರೆ ಈ ಸುಲಭದ ಸೂಪ್ ಮಾಡಿ ಸವಿದರೆ ಸಾಕಾಗುತ್ತದೆ. ಅದ್ರಲ್ಲೂ ವಾತಾವರಣದಲ್ಲಿನ ಬದಲಾವಣೆಯ ಕಾರಣಕ್ಕೆ ಈ ರೀತಿಯ ಸಮಸ್ಯೆಗಳು ಎದುರಾಗುವುದು ನೋಡಬಹುದು. ಹಾಗೆ ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿ ಉಂಟಾಗುವುದು ಸಹ ನೋಡಬಹುದು.
ಆದ್ರೆ ಮನೆಯಲ್ಲೇ ನೀವು ಸುಲಭದ ರೆಮಿಡಿ ಮೂಲಕ ಈ ಸಮಸ್ಯೆಗಳ ಬಗೆಹರಿಸಿಕೊಳ್ಳಬಹುದು. ಅದ್ರಲ್ಲೂ ಕೆಮ್ಮು, ಶೀತ, ಗಂಟಲು ನೋವನ್ನು ಕೂಡ ನಿವಾರಣೆ ಮಾಡಿಕೊಳ್ಳಲು ಈ ಸೂಪ್ ಮಾಡಿ ಸವಿದು ನೋಡಿ ಅದ್ರಲ್ಲೂ ಈ ಸೂಪ್ ನಿಮ್ಮ ಎಲ್ಲಾ ಅನಾರೋಗ್ಯ ನಿವಾರಿಸಬಹುದು. ಹಾಗಾದ್ರೆ ಈ ಸೂಪ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ಶೀತ, ಕೆಮ್ಮು ಇದ್ದರೆ ಸೂಪ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ತುಪ್ಪ
- ಅಕ್ಕಿ
- ಕಾಳು ಮೆಣಸು
- ತೆಂಗಿನ ಕಾಯಿ
- ಜೀರಿಗೆ
- ಕೊತ್ತಂಬರಿ ಕಾಳು
- ಬೆಳ್ಳುಳ್ಳಿ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಒಣ ಶುಂಠಿ
- ಉಪ್ಪು
ಶೀತ, ಕೆಮ್ಮು ಇದ್ದರೆ ಸೂಪ್ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ 1 ಸ್ಪೂನ್ ತುಪ್ಪ ಹಾಕಿ ಬಳಿಕ ಜೀರಿಗೆ, ಕಾಳು ಮೆಣಸು, ಉದ್ದಿನ ಬೇಳೆ, 1 ಸ್ಪೂನ್ ಅಕ್ಕಿ, 1 ಸ್ಪೂನ್ ಕೊತ್ತಂಬರಿ ಕಾಳು, ಕತ್ತರಿಸಿಕೊಂಡ ಬೆಳ್ಳುಳ್ಳಿ, ಕರಿಬೇವು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. 1ರಿಂದ 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಕತ್ತರಿಸಿಕೊಂಡಿರುವ ತೆಂಗಿನಕಾಯಿ ಹಾಕಿ 1 ನಿಮಿಷ ಬಿಡಿ.
ಈಗ ಒಲೆ ಆಫ್ ಮಾಡಿಕೊಂಡು ಸ್ವಲ್ಪ ತಣ್ಣಗಾಗಲು ಬಿಟ್ಟು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಈ ಎಲ್ಲಾ ಪದಾರ್ಥಗಳನ್ನು ಅದಕ್ಕೆ ಹಾಕಿ. ನಂತರ ಇದಕ್ಕೆ ಸ್ವಲ್ಪ ಒಣ ಶುಂಠಿ ಪುಡಿ ಹಾಕಿ, ಶುಂಠಿ ಪುಡಿ ಇಲ್ಲದಿದ್ದರೆ ಹಸಿ ಶುಂಠಿಯನ್ನು ಕತ್ತರಿಸಿಕೊಂಡು ಮೊದಲು ಬಾಣಲೆಯಲ್ಲಿ ಹುರಿಯುವಾಗಲೇ ಹಾಕಿಕೊಳ್ಳಬೇಕು. ಈಗ ರುಚಿಗೆ ತಕ್ಕಷ್ಟು ಉಪ್ಪು ಕೂಡ ಸೇರಿಸಿಕೊಂಡು ಸ್ವಲ್ಪ ನೀರು ಸಹ ಸೇರಿಸಿ ರುಬ್ಬಿಕೊಳ್ಳಬೇಕು.
ಪೂರ್ಣ ನುಣ್ಣಗೆ ರುಬ್ಬಿದ ಬಳಿಕ ಬದಿಗಿಟ್ಟು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಷ್ಟು ಜನರಿಗೆ ಬೇಕೋ ಅಷ್ಟು ನೀರು ಇಟ್ಟು ಬಿಸಿಯಾದಾಗ ಈದ ರುಬ್ಬಿಕೊಂಡಿದ್ದ ವಸ್ತುಗಳನ್ನೇಲ್ಲ ಈ ನೀರಿಗೆ ಸೇರಿಸಿಕೊಳ್ಳಿ. ಹಾಗೆ ಕುದಿಬರಲು ಬಿಡಬೇಕು. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು, 1 ಸ್ಪೂನ್ ತುಪ್ಪ ಹಾಕಿಕೊಂಡಿ ಮಿಕ್ಸ್ ಮಾಡಿಕೊಂಡು ಇಳಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಸೂಪ್ ರೆಡಿಯಾಗುತ್ತದೆ. ಇದನ್ನು ಬಿಸಿ ಬಿಸಿ ಇದ್ದಾಗಲೇ ಕುಡಿಯಬೇಕು. ಇದು ನಿಮ್ಮ ಶೀತ, ಕೆಮ್ಮು, ಗಂಟಲು ನೋವು ನಿವಾರಣೆಗೆ ಸಹಕಾರಿಯಾಗಲಿದೆ.



Click it and Unblock the Notifications
