Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಹೋಟೆಲ್ ರುಚಿಯ ಸ್ಪೆಷಲ್ ರವೆ ಇಡ್ಲಿ ಮನೆಯಲ್ಲೇ ಮಾಡಿ..! ಇಲ್ಲಿದೆ ರೆಸಿಪಿ
ಬೆಳಗ್ಗೆ ತಿಂಡಿಗೆ ಇಡ್ಲಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ,. ಕಡಿಮೆ ಎಣ್ಣೆ ಹಾಕಿ ಮಾಡುವ ಈ ತಿಂಡಿ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಬೆಳಗ್ಗೆ ಇಡ್ಲಿ ಸೇವಿಸಿದ್ರೆ ಆರೋಗ್ಯಕ್ಕೆ ಬಹಳ ಉತ್ತಮ ಜೊತೆಗೆ ನಮ್ಮ ಕರುಳು ಹಾಗೂ ಹೊಟ್ಟೆಗೆ ಇದು ಕಡಿಮೆ ಕೆಲಸ ಕೊಡುವ ಖಾದ್ಯವಂತೆ, ಸುಲಭವಾಗಿ ಜೀರ್ಣಕ್ರಿಯೆಯಾಗುವ ಆಹಾರ ಪದಾರ್ಥಗಳಲ್ಲಿ ಇಡ್ಲಿ ಮುಂದು.
ಹೀಗಾಗಿಯೇ ಅನಾರೋಗ್ಯಕ್ಕೆ ಒಳಗಾದಗೆಲ್ಲ ವೈದ್ಯರು ಇಡ್ಲಿ ಸವಿಯುವಂತೆ ಸಲಹೆ ನೀಡುತ್ತಾರೆ. ಆದ್ರೆ ಕೆಲವರಿಗೆ ಮನೆಯಲ್ಲಿ ಮಾಡುವ ಇಡ್ಲಿ ಅಂದರೆ ಹಿಡಿಸುವುದಿಲ್ಲ. ಅದೇ ಹೋಟೆಲ್ ಇಡ್ಲಿ ಎಂದರೆ ಇನ್ನೂ ಒಂದು ಹೆಚ್ಚು ಸವಿಯುತ್ತಾರೆ. ಇಡ್ಲಿ ಹೋಟೆಲ್‌ನಂತೆ ಮೃದುವಾಗಿ ಬರಬೇಕು ಅಂದರೆ ಅದಕ್ಕೆ ಹಿಟ್ಟು ಮಾಡಿಕೊಳ್ಳುವಾಗ ಜಾಣತನ ತೋರಬೇಕಿರುತ್ತೆ.

ಆದ್ರೆ ನಾವಿಂದು ಹೋಟೆಲ್‌ನಲ್ಲಿ ನೀಡುವ ಸ್ಪೆಷಲ್ ರವೆ ಇಡ್ಲಿ ಮಾಡುವ ಕುರಿತು ತಿಳಿದುಕೊಳ್ಳೋಣ. ಹೋಟೆಲ್‌ಗಳಲ್ಲಿ ವಿಶೇಷವಾಗ ಗ್ರಾಹಕರ ಸೆಳೆಯಲೆಂದೆ ತರಕಾರಿ, ರವೆ ಮಿಶ್ರಿತ ಮೃದುವಾಗ ಇಡ್ಲಿ ಮಾಡುತ್ತಾರೆ. ನಾವಿಂದು ಇದನ್ನು ಮನೆಯಲ್ಲಿ ಮಾಡಿ ನೋಡೋಣ.
ಸ್ಪೆಷಲ್ ರವೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಇದಕ್ಕೆ ಹಿಟ್ಟು ಮಾಡಿಕೊಳ್ಳುವಾಗ ಯಾವೆಲ್ಲಾ ಕ್ರಮ ಅನುಸರಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸ್ಪೆಷಲ್ ರವೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ರವೆ - 2 ಕಪ್
- ಉದ್ದಿನ ಬೇಳೆ
- ಕಡಲೆ ಬೇಳೆ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಅಡುಗೆ ಸೋಡಾ
- ಮೊಸರು
- ಎಣ್ಣೆ
- ಉಪ್ಪು
- ತೆಂಗಿನಕಾಯಿ
- ಕ್ಯಾರೆಟ್
ಸ್ಪೆಷಲ್ ರವೆ ಇಡ್ಲಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಹಸಿ ಮೆಣಸು, ಕರುಬೇವು ಹಾಕಿ ಫ್ರೈ ಮಾಡಿಕೊಳ್ಳಿ.
ಇದಾದ ಬಳಿಕ 2 ಕಪ್ ರವೆಯನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ರವೆ ಗರಿ ಗರಿಯಾಗುವಂತೆ ಫ್ರೈ ಮಾಡಿಕೊಳ್ಳಿ. ಬರಿ 1 ನಿಮಿಷ ಫ್ರೈ ಮಾಡಿದರೆ ಸಾಕು. ಬಳಿಕ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ . ತಣ್ಣಗಾದ ಬಳಿಕ 2 ಕಪ್ ಮೊಸರು ಹಾಕಿಕೊಳ್ಳಿ. ಜೊತೆಗೆ 1 ಕಪ್ ನೀರು, ಕೊತ್ತಂಬರಿ ಸೊಪ್ಪು, ತೆಂಗಿನ ಕಾಯಿ, ಕ್ಯಾರೆಟ್, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಬಳಿಕ ಹಿಟ್ಟನ್ನು ಅರ್ಧ ಗಂಟೆ ಬಿಡಬೇಕು. ಒಂದು ಕಡೆ ಮುಚ್ಚಳ ಮುಚ್ಚಿ ಇಡಬೇಕು. ಅರ್ಧ ಗಂಟೆಯ ಬಳಿಕ ಹಿಟ್ಟಿಗೆ ಅಡುಗೆ ಸೋಡಾ ಹಾಗೂ ಸ್ವಲ್ಪ ನೀರು ಹಾಕಿಕೊಂಡಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಇಡ್ಲಿ ಹಿಟ್ಟು ರೆಡಿಯಾಗುತ್ತದೆ.
ಈಗ ಇಡ್ಲಿ ಅಚ್ಚು ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿಕೊಳ್ಳಿ. ಬಳಿಕ ಅದಕ್ಕೆ ಗೋಡಂಬಿ ಇಟ್ಟುಕೊಂಡು ಅದಕ್ಕೆ ಇಡ್ಲಿ ಹಿಟ್ಟು ಹಾಕಿಕೊಳ್ಳಿ. ಎಲ್ಲಾ ಅಚ್ಚಿಗೂ ಹಾಕಿಕೊಂಡು ಇಡ್ಲಿ ಕುಕ್ಕರ್‌ನಲ್ಲಿ ಬೇಯಲು ಇಡಿ. ಸುಮಾರು 15 ನಿಮಿಷ ಬೇಯಿಸಿದರೆ ರುಚಿ ರುಚಿಯ ಮೃದುವಾದ ಸ್ಪೆಷಲ್ ಇಡ್ಲಿ ಸವಿಯಲು ರೆಡಿಯಾಗಿರುತ್ತದೆ. ಇಡ್ಲಿಯನ್ನು ಮೂರು ನಿಮಿಷ ಬಿಟ್ಟು ತೆಗೆದರೆ ಪಾತ್ರೆಗೆ ಅಂಟಿಕೊಳ್ಳುವುದಿಲ್ಲ.
ಈ ಇಡ್ಲಿ ಹೋಟೆಲ್‌ನಲ್ಲಿ ಕೊಡುವ ಮೃದುವಾದ ಇಡ್ಲಿಯಂತೆಯೇ ಬರಲಿದೆ. ಒಮ್ಮೆ ಮಾಡಿ ಸವಿದರೆ ನೀವು ಪದೆ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ. ಇದಕ್ಕೆ ತರಕಾರಿ ಸಾಂಬಾರ್ ಅಥವಾ ತೆಂಗಿನ ಕಾಯಿ ಚಟ್ನಿ ಮತ್ತಷ್ಟು ರುಚಿ ಹೆಚ್ಚಿಸಲಿದೆ.



Click it and Unblock the Notifications