Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಹೊಸ ರೀತಿ ಹೊಸ ರುಚಿಯ ಪೂರಿ ಮಾಡಿ ನೋಡಿ..! ಖಂಡಿತ ಇಷ್ಟವಾಗುತ್ತೆ!
ಬೆಳಗ್ಗೆ ಎದ್ದಾಗ ಎಲ್ಲರ ಮನೆಯಲ್ಲೂ ತಿಂಡಿಗೆ ಏನು ಮಾಡಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿರುತ್ತೆ. ಅಂದ್ರೆ ತಿಂಡಿಗೆ ಯಾವ ಖಾದ್ಯ ಹೆಚ್ಚು ರುಚಿ ನೀಡಲಿದೆ ಎಂಬುದು ಚಿಂತೆಗೀಡು ಮಾಡುತ್ತೆ. ಅದೇ ರೀತಿ ನಾವು ಬೆಳಗ್ಗೆ ತಿಂಡಿಗೆ ಪೂರಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಪೂರಿ ಸಾಮಾನ್ಯವಾಗಿ ವಿಶೇಷ ತಿಂಡಿಯೇ. ಎಣ್ಣೆಯಲ್ಲಿ ಕರಿದು ಮಾಡುವುದರಿಂದಾಗಿ ಕೆಲವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಪೂರಿ ಅತ್ಯಂತ ರುಚಿಕರ ತಿಂಡಿಯಲ್ಲಿ ಒಂದು. ಪೂರಿ ಜೊತೆ ಚಟ್ನಿ ಇಲ್ಲವೆ ಕುರ್ಮ ಇದ್ದರೆ ಅದರ ರುಚಿಯೇ ಬೇರೆ. ಹೀಗಾಗಿ ಪೂರಿ ಕೆಲವರ ಮನೆಯ ನಿತ್ಯದ ಖಾದ್ಯವೂ ಹೌದು.

ಈ ಪೂರಿಯನ್ನು ಹಲವು ರೀತಿಯಾಗಿ ಮಾಡಬಹುದು. ಹೌದು ಗೋಧಿ ಹಿಟ್ಟಿನಿಂದ ಪೂರಿ ಮಾಡುತ್ತಾರೆ ಆದರೆ ವಿಶೇಷವಾಗಿ ಪೂರಿ ಮಾಡುವಾಗ ಕೆಲವೊಂದು ವಸ್ತುಗಳ ಬಳಸಲಾಗುತ್ತದೆ. ಇದರಿಂದ ಪೂರಿಯ ರುಚಿಯೇ ಭಿನ್ನವಾಗುತ್ತದೆ. ಹೀಗಾಗಿ ನಾವಿಂದು ವಿಶೇಷ ರುಚಿಯ ಪೂರಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಪೂರಿ ಮಾಡಲು ಬೇಕಾಗಿವ ಪದಾರ್ಥಗಳೇನು? ಪೂರಿ ಮಾಡುವಾಗ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು?, ಪೂರಿ ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪೂರಿ ಮಾಡಲು ಬೇಕಾಗುವ ಪದಾರ್ಥಗಳು
- ಗೋಧಿ ಹಿಟ್ಟು - 2 ಕಪ್
- ಉದ್ದಿನಬೇಳೆ - 1 ಕಪ್
- ಜೀರಿಗೆ - 2 ಟೀಸ್ಪೂನ್
- ಕಸೂರಿ ಮೇಥಿ - 2 ಚಮಚ
- ಅಜ್ವೈನ್ - 1 ಟೀಸ್ಪೂನ್
- ಸೋಂಕಾಳಿನ ಪುಡಿ - 1 ಟೀಸ್ಪೂನ್
- ಖಾರದ ಪುಡಿ - 1 ಟೀಸ್ಪೂನ್
- ಅರಿಶಿನ ಪುಡಿ - 1/4 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 2
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ವಿಶೇಷ ಪೂರಿ ಮಾರುವ ವಿಧಾನ ಏನು?
ಮೊದಲು ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು ನೆನೆಸಿಡಬೇಕು ಸುಮಾರು 4 ಗಂಟೆ ಕಾಲ ನೆನೆಸಿಟ್ಟರೆ ಸಾಕಾಗುತ್ತದೆ. ಬಳಿಕ ಒಂದು ಮಿಕ್ಸಿಜಾರ್ ತೆಗೆದುಕೊಂಡು ಅದಕ್ಕೆ ನೆನೆಸಿಟ್ಟ ಉದ್ದಿನ ಬೇಳೆ, ಜೀರಿಗೆ, ಹಸಿ ಮೆಣಸು ಹಾಕಿಕೊಂಡು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಒಂದು ಬೌಲ್ಗೆ ಗೋಧಿ ಹಿಟ್ಟು ಹಾಕಿಕೊಳ್ಳಿ. ಬಳಿಕ ಇದಕ್ಕೆ ಕಸೂರಿ ಮೇಥಿ, ಸೋಂಕಾಳಿನ ಪುಡಿ, ಓಂಕಾಳು, ಅರಶಿನ ಪುಡಿ, ಖಾರದ ಪುಡಿ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ. ಇದಕ್ಕೆ ರುಬ್ಬಿಕೊಂಡಿರುವ ಉದ್ದಿನ ಬೇಳೆ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಸ್ವಲ್ಪ ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಹಿಟ್ಟು ಕಲಸುವಾಗ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ, ಪೂರಿ ಹಿಟ್ಟು ಚಪಾತಿ ಹಿಟ್ಟಿನಂತೆ ಮೃದುವಾಗಿ ಬರುವಂತೆ ಮಾಡಿಕೊಳ್ಳಬೇಕು. ಈಗ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳಾಗಿದೆ ಮಾಡಿಟ್ಟುಕೊಳ್ಳಿ.
ಈಗ ಹಿಟ್ಟಿನ ಉಂಡೆಗಳ ತೆಗೆದುಕೊಂಡು ಲಟ್ಟಣಿಗೆ ಮೂಲಕ ಸಣ್ಣಗೆ ಲಟ್ಟಿಸಿಕೊಳ್ಳಿ. ಈ ಗಾತ್ರ ಚಪಾತಿಗಿಂತ ಕಡಿಮೆಯಾಗಿರಲಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಲಟ್ಟಿಸಿಕೊಂಡ ಪೂರಿಯನ್ನು ಎಣ್ಣೆಗೆ ಬಿಡಬೇಕು. ಸಣ್ಣ ಉರಿಯಲ್ಲಿ ಕಾಯಿಸಿದಾಗ ಪೂರಿ ಚೆನ್ನಾಗಿ ಊದಿಕೊಳ್ಳುತ್ತದೆ.
ಈ ಪೂರಿ ಅತ್ಯಂತ ಮೃದುವಾಗಿ ವಿಶೇಷ ರುಚಿ ನೀಡಲಿದೆ. ನೀವು ಸಾಮಾನ್ಯವಾಗಿ ಮಾಡುವ ಪೂರಿಗಿಂತಲೂ ಇದು ವಿಶೇಷ ರುಚಿ ನೀಡಲಿದೆ. ಈ ಪೂರಿ ಜೊತೆಗೆ ತೆಂಗಿನ ಕಾಯಿ ಚಟ್ನಿ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತದೆ.



Click it and Unblock the Notifications