Latest Updates
-
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಸ್ಪೆಷಲ್ ರುಚಿಯ ಒಗ್ಗರಣೆ ಅವಲಕ್ಕಿ ಮಾಡೋದು ಹೇಗೆ? ಯಾವೆಲ್ಲಾ ವಸ್ತು ಹಾಕಬೇಕು?
ನಾವು ಬೆಳಗ್ಗೆ ತಿಂಡಿ ಮಾಡುವಾಗ ಹಲವು ಬಾರಿ ಅಲವಲ್ಲಿ ಸವಿದಿರುತ್ತೇವೆ. ಏಕೆಂದರೆ ಮಾಡೋದು ಸಿಕ್ಕಾಪಟ್ಟೆ ಸುಲಭ ಹಾಗೂ ಎಲ್ಲಿಯಾದರು ಇದನ್ನು ತೆಗೆದುಕೊಂಡು ಹೋಗೋಕೆ ತುಂಬಾನೆ ಸುಲಭವಾದ ತಿಂಡಿ. ಪೇಪರ್ ಅವಲಕ್ಕಿ ಹೆಸರಿಗೆ ತಕ್ಕಂತೆ ಹಗುರವಾಗಿರುತ್ತೆ ಹೀಗಾಗಿ ಎಲ್ಲರಿಗೂ ಇಷ್ಟವಾಗುತ್ತೆ. ದೇವಸ್ಥಾನದಲ್ಲಿ, ಹೋಟೆಲ್ನಲ್ಲಿ, ಸಣ್ಣ ಪುಟ್ಟ ಸಭೆ ಸಮಾರಂಭಗಳಲ್ಲಿ ಪೇಪರ್ ಅವಲಕ್ಕಿ ಮಾಡೋದನ್ನು ನಾವು ನೋಡಿರಬಹುದು.
ಪೇಪರ್ ಅವಲಕ್ಕಿಯನ್ನು ಬೆಳಗ್ಗೆ ಗಡಿಬಿಡಿಯಲ್ಲಿ ಮಾಡುವವರೇ ಹೆಚ್ಚು. ಇದಕ್ಕೆ ಕೆಲವೇ ಸಮಯದ ತಯಾರಿ ಸಾಕಾಗುತ್ತದೆ. ಹೀಗಾಗಿ ಅರ್ಜೆಂಟ್ ಮನೆಯ ತಿಂಡಿಯಲ್ಲಿ ಅವಲಕ್ಕಿಗೆ ಮೊದಲ ಸ್ಥಾನ. ಆದ್ರೆ ಈ ಅವಲಕ್ಕಿಗೆ ಒಳ್ಳೆಯ ಒಗ್ಗರಣೆ ಬಿದ್ದರೆ ಮಾತ್ರವೆ ಸವಿಯಲು ಇಷ್ಟವಾಗುತ್ತದೆ. ಇಲ್ಲಿದ್ದರೆ ಅದರ ರುಚಿ ಹಿಡಿಸುವುದಿಲ್ಲ.

ಈ ಪೇಪರ್ ಅವಲಕ್ಕಿಯನ್ನ ಬೆಳಗ್ಗೆ ತಿಂಡಿಗೆ ಮಾತ್ರವಲ್ಲ ಸಂಜೆ ಸ್ನ್ಯಾಕ್ಸ್ಗೂ ಸಹ ಮಾಡಬಹುದು. ಹಾಗಾದ್ರೆ ಈ ಪೇಪರ್ ಅವಲಕ್ಕಿ ರುಚಿಕರವಾಗಿ ಮಾಡುವುದು ಹೇಗೆ ಎಂಬುದನ್ನು ನಾವು ನೋಡೋಣ. ಪೇಪರ್ ಅವಲಕ್ಕಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯುತ್ತದೆ ಎಂಬ ಎಲ್ಲಾ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಒಗ್ಗರಣೆ ಪೇಪರ್ ಅವಲಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
- ಪೇಪರ್ ಅವಲಕ್ಕಿ
- ಕಡಲೆ ಬೀಜ
- ಹುರಿಗಡಲೆ
- ಎಣ್ಣೆ
- ಬಾದಾಮಿ
- ಗೋಡಂಬಿ
- ಒಣ ದ್ರಾಕ್ಷಿ
- ಒಣ ಕೊಬ್ಬರಿ
- ಹಸಿ ಮೆಣಸಿನಕಾಯಿ
- ಕರಿಬೇವಿನ ಸೊಪ್ಪು
- ಸಾಸಿವೆ
- ಇಂಗು
- ಅರಿಶಿನದ ಪುಡಿ
- ಸಕ್ಕರೆ ಪುಡಿ
- ಉಪ್ಪು
ಒಗ್ಗರಣೆ ಪೇಪರ್ ಅವಲಕ್ಕಿ ಮಾಡುವುದು ಹೇಗೆ?
ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಪೇಪರ್ ಅವಲಕ್ಕಿ ಹಾಕಿ ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ 5 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ. ಚೆನ್ನಾಗಿ ಫ್ರೈ ಮಾಡಿಕೊಂಡ ಬಳಿಕ ತೆಗೆದು ಬೌಲ್ಗೆ ಹಾಕಿಟ್ಟಕೊಳ್ಳಿ. ಈಗ ಒಗ್ಗರಣೆ ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳಿ.
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಇದಕ್ಕೆ ಕಡಲೆ ಬೀಜ ಹಾಕಿ 2 ನಿಮಿಷ ಫ್ರೈ ಮಾಡಿ. ಬಳಿಕ ಇದಕ್ಕೆ ಕತ್ತರಿಸಿಕೊಂಡ ಬಾದಾಮಿ ಹಾಕಿಕೊಳ್ಳಿ. ಬಾದಾಮಿ ಇಲ್ಲದೆಯೂ ಇದನ್ನು ಮಾಡಬಹುದು, ಇದ್ದರೆ ರುಚಿ ಹೆಚ್ಚಾಗುತ್ತದೆ. ಬಳಿಕ ಗೋಡಂಬಿ, ಒಣ ದ್ರಾಕ್ಷಿಯನ್ನು ಸಹ ಹಾಕಿ ಫ್ರೈ ಮಾಡಿ.
ಈಗ ಒಣ ಕೊಬ್ಬರಿ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಇದಕ್ಕೆ ಹುರಿಗಡಲೆ ಹಾಕಿಕೊಂಡು ಫ್ರೈ ಮಾಡಿ ಒಲೆ ಆಫ್ ಮಾಡಿಕೊಂಡು ಎಲ್ಲಾ ಪದಾರ್ಥವನ್ನು ಜರಡಿ ಹಿಡಿದು ಮತ್ತೊಂದು ಕಪ್ಗೆ ಹಾಕಿಟ್ಟುಕೊಳ್ಳಿ. ನಂತರ ಅದೇ ಪಾತ್ರೆಯಲ್ಲಿ ಎಣ್ಣೆ ಹಾಕಿ ಮತ್ತೆ ಒಗ್ಗರಣೆ ಹಾಕಲು ತಯಾರಿ ಮಾಡಿ.
ಈಗ ಬಾಣಲೆಗೆ ಸಾಸಿವೆ, ಇಂಗು, ಹಸಿ ಮೆಣಸು, ಒಣ ಮೆಣಸು (ಕತ್ತರಿಸಿಕೊಂಡಿರುವುದು), ಕರಿಬೇವಿನ ಸೊಪ್ಪು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಉಪ್ಪು, ಅರಶಿನ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಾದ ಬಳಿಕ ಈ ಒಗ್ಗರಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿರುವ ಅವಲಕ್ಕಿಗೆ ಸೇರಿಸಿಕೊಂಡು ಕಲಸಿಕೊಳ್ಳಿ. ಹಾಗೆ ಮೊದಲು ಹುರಿದುಕೊಂಡಿರುವ ಗೋಡಂಬಿ, ಬಾದಾಮಿ, ಕಡಲೆ ಬೀಜದ ಪ್ರೈ ಅನ್ನು ಸಹ ಇದೇ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಕೊನೆಯದಾಗಿ ಸಕ್ಕೆರೆ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಎಲ್ಲಾ ಅಂಶ ಬೆರೆತುಕೊಳ್ಳುವಂತೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಒಗ್ಗರಣೆ ಭರಿತ ಅದ್ಭುತ ರುಚಿಯ ಅವಲಕ್ಕಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications