Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸ್ಪೆಷಲ್ ಮೈಸೂರು ಪಾಕ್: ಬಾಯಲ್ಲಿ ಇಟ್ಟರೆ ಕರಗುವಂತಹ ಸಿಹಿ ಮಾಡಿ..!
ದಕ್ಷಿಣ ಭಾರತದಲ್ಲಿ ಹತ್ತಾರು ಬಗೆಯ ತಿಂಡಿ ತಿನಿಸುಗಳು ಫೇಮಸ್ ಆಗಿರುವುದು ಸಾಮಾನ್ಯ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಖಾದ್ಯ ಫೇಮಸ್ ಆಗಿರುವುದು ಸಾಮಾನ್ಯ. ಅದೇ ರೀತಿ ನಾವು ಮೈಸೂರು ಪಾಕ್ ಅನ್ನು ಸಹ ನೋಡಬಹುದು. ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಮೈಸೂರು ಪಾಕ್ ಫೇಮಸ್, ನಮ್ಮ ರಾಜ್ಯದ ಹೆಮ್ಮೆಯ ಸಿಹಿ ಅಂತಲೂ ಹೇಳಬಹುದು.
ಮೈಸೂರು ಪಾಕ್ ಆರಂಭವಾಗಿದ್ದಕ್ಕೂ ಕೂಡ ಒಂದು ದೊಡ್ಡ ಇತಿಹಾಸವಿದೆ. ಇದರ ಹಿಂದೆ ದೊಡ್ಡ ಕಥೆ ಕೂಡ ಇದೆ. ನೀವಿಂದು ಯಾವುದೇ ಬೇಕರಿಗೆ ಹೋದರು ಮೈಸೂರು ಪಾಕ್ ಸಾಮಾನ್ಯವಾಗಿ ಇದ್ದೇ ಇರುತ್ತೆ. ಆದ್ರೆ ಇತ್ತೀಚಿಗೆ ಈ ಮೈಸೂರು ಪಾಕ್ನಲ್ಲಿ ವಿಭಿನ್ನ ರುಚಿಯ ಖಾದ್ಯ ಮಾಡುವುದು ನಾವು ನೋಡಬಹುದು.

ಅದರಲ್ಲೂ ಐತಿಹಾಸಿಕ ಕಥೆ ಇರುವ ಈ ಮೈಸೂರು ಪಾಕ್ ಮದುವೆ, ಶುಭ ಕಾರ್ಯಕ್ಕಂತು ಸಿಕ್ಕಾಪಟ್ಟೆ ಫೇಮಸ್, ಇದರಲ್ಲಿ ಸ್ಪೆಷಲ್ ಮೈಸೂರು ಪಾಕ್ ಖಾದ್ಯ ನೀವು ಸಹ ಸವಿದಿರಬಹುದು. ಇದು ಸಾಮಾನ್ಯ ಮೈಸೂರು ಪಾಕ್ಗಿಂತ ರುಚಿಯಲ್ಲಿ ದುಪ್ಪಟ್ಟಾಗಿ ತುಪ್ಪದ ಸುವಾಸನೆಯಿಂದ ಕೂಡಿರುತ್ತೆ, ಈ ರುಚಿಗೆ ಮಾರು ಹೋಗದಿರುವವರೆ ಇಲ್ಲ. ಇನ್ನು ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರು ಕೂಡ ಈ ಮೈಸೂರು ಪಾಕ್ ಸವಿಯುತ್ತಾರೆ.
ಹಾಗಾದ್ರೆ ನಾವಿಂದು ಈ ಮೈಸೂರು ಪಾಕ್ ಮಾಡುವ ಕುರಿತು ತಿಳಿದುಕೊಳ್ಳೋಣ. ಸ್ಪೆಷಲ್ ಮೈಸೂರು ಪಾಕ್ ಮಾಡುವುದು ಹೇಗೆ, ಮೈಸೂರು ಪಾಕ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸೂಕ್ತ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸ್ಪೆಷಲ್ ಮೈಸೂರು ಪಾಕ್ ಮಾಡಲು ಬೇಕಾಗುವ ಪದಾರ್ಥಗಳು
ಕಡಲೆ ಹಿಟ್ಟು
ಸಕ್ಕರೆ
ತುಪ್ಪ
ಎಣ್ಣೆ
ಸ್ಪೆಷಲ್ ಮೈಸೂರು ಪಾಕ್ ಮಾಡುವ ವಿಧಾನವೇನು?
ಮೊದಲು ಸಕ್ಕರೆ ಪಾಕ ಮಾಡಿಕೊಳ್ಳಬೇಕು. ಈಗ ಒಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಕಪ್ ಸಕ್ಕರೆ ಹಾಕಿ ಮುಕ್ಕಾಲು ಕಪ್ ನೀರು ಹಾಕಿಕೊಳ್ಳಬೇಕು. ಅಳತೆ ಸರಿಯಾಗಿ ಇಟ್ಟುಕೊಳ್ಳಬೇಕು. ಈಗ ಒಂದು ಟ್ರೇ ಅಥವಾ ಪ್ಲೇಟ್ಗೆ ತುಪ್ಪ ಸವರಿ ಇಟ್ಟುಕೊಳ್ಳಬೇಕು.
ಈಗ ಒಂದು ಎಳೆಯ ಪಾಕ ರೆಡಿಯಾದ ಬಳಿಕ ಇದಕ್ಕೆ ಜರಡಿ ಹಿಡಿದುಕೊಂಡ ಕಡಲೆ ಹಿಟ್ಟನ್ನು ಹಾಕಿಕೊಳ್ಳಿ. ನಿಧಾನವಾಗಿ ಕಲಸಿಕೊಳ್ಳಿ. ಗಂಟು ಇಲ್ಲದಂತೆ ಕಲಸಿಕೊಳ್ಳಬೇಕು. 15 ರಿಂದ 20 ನಿಮಿಷ ಕಲಸಿಕೊಳ್ಳಬೇಕು. ಸಣ್ಣ ಗಂಟು ಉಳಿದರೆ ಸಮಸ್ಯೆಯಿಲ್ಲ.
ಬಳಿಕ ಇದಕ್ಕೆ ಬೆಚ್ಚಗೆ ಮಾಡಿರುವ ತುಪ್ಪ ಹಾಕಿಕೊಂಡು ಕಲಸಿಕೊಳ್ಳಬೇಕು. ಸ್ವಲ್ಪ ಸ್ವಲ್ಪ ತುಪ್ಪ ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಹೀಗೆ ತುಪ್ಪ ಹಾಕಿ ನಿಧಾನವಾಗಿ ಕಲಸಿಕೊಳ್ಳುವುದರಿಂದ ಗಂಟು ಒಡೆಯುತ್ತದೆ. ಈಗ ಒಂದು ಕಡೆ ಬಿಸಿ ಮಾಡಲು ಎಣ್ಣೆ ಇಟ್ಟು ಉಗುರು ಬೆಚ್ಚಗೆ ಆದ ತಕ್ಷ ಆ ಎಣ್ಣೆಯನ್ನು ಈ ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ. ಹಿಟ್ಟು ಚೆನ್ನಾಗಿ ಕುದಿಬರಬೇಕು. ಎಣ್ಣೆ ಹಾಗೂ ತುಪ್ಪ ಒಂದೇ ಅಳತೆಯಲ್ಲಿ ತೆಗೆದುಕೊಳ್ಳಿ.
ಈ ಹಿಟ್ಟನ್ನು ಕಲಸುವುದನ್ನು ನಿಲ್ಲಿಸಬೇಡಿ. ತಳ ಬೇಗ ಹಿಡಿಯುತ್ತದೆ. ಬ್ರೇಕ್ ನೀಡದೆ ತಿರುಗಿಸುತ್ತಾ ಇರಬೇಕು. ಹಿಟ್ಟು ಎಣ್ಣೆ ಬಿಡುತ್ತಿದೆ, ದಪ್ಪ ಆಗುತ್ತಿದೆ ಎಂದು ಅನಿಸಿದಾಗ ಒಲೆ ಆಫ್ ಮಾಡಿಕೊಂಡು ಇದನ್ನು ತುಪ್ಪ ಸವರಿಕೊಂಡಿರುವ ಟ್ರೇ ಅಥವಾ ತಟ್ಟೆಗೆ ಈ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ 40 ನಿಮಿಷ ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಪೂರ್ತಿ ಗಟ್ಟಿಯಾದ ಮೇಲೆ ಕತ್ತರಿಸಿಕೊಳ್ಳಲು ಹೋಗಬೇಡಿ, ಬಿಸಿ ಬಿಸಿ ಇದ್ದಾಗ ಕತ್ತರಿಸಿಕೊಳ್ಳುವುದು ಉತ್ತಮ.
ಇಷ್ಟಾದರೆ ನಿಮ್ಮ ಮುಂದೆ ಸ್ಪೆಷಲ್ ಮೈಸೂರು ಪಾಕ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
