Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೋಸೆ, ಇಡ್ಲಿ, ಊಟಕ್ಕೆ ಈ ಮಶ್ರೂಮ್ ಚಟ್ನಿ ಮಾಡಿ..! ಬಹಳ ಸುಲಭ ರುಚಿ ಅದ್ಭುತ
ಪ್ರತಿಯೊಬ್ಬರ ಮನೆಯಲ್ಲೂ ಮಶ್ರೂಮ್‌ನಿಂದ ಮಾಡುವ ವಿವಿಧ ಬಗೆಯ ಖಾದ್ಯಗಳ ಮಾಡಿಯೇ ಮಾಡಿರುತ್ತಾರೆ. ಅದ್ರಲ್ಲೂ ಮಶ್ರೂಮ್ ಗ್ರೇವಿ, ಮಶ್ರೂಮ್ ಮಸಾಲೆ, ಮಶ್ರೂಮ್ ಬಿರಿಯಾನಿ ಹೀಗೆ ರುಚಿ ರುಚಿಯ ಖಾದ್ಯಗಳ ಸವಿಯುವುದು ಕಾಮನ್. ಹಾಗೆ ಮಶ್ರೂಮ್ ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ ಆಹಾರವಾಗಿದೆ. ಇದರಲ್ಲಿನ ಹಲವು ವಿಟಮಿನ್‌ಗಳು ನಮ್ಮ ದೇಹಕ್ಕೆ ಬಹಳ ಮುಖ್ಯ.
ಹಾಗೆ ನಾವಿಂದು ಈ ಮಶ್ರೂಮ್‌ನಿಂದ ಮಾಡುವಂತಹ ಅದ್ಭುತ ರುಚಿಯ ಚಟ್ನಿ ಕುರಿತಾಗಿ ತಿಳಿದುಕೊಳ್ಳೋಣ. ಮಶ್ರೂಮ್‌ನಿಂದ ಮಾಡುವ ಈ ಚಟ್ನಿ ಬಹಳ ರುಚಿಕರ ಹಾಗೆ ಎಲ್ಲರಿಗೂ ಇಷ್ಟವಾಗುತ್ತೆ. ನೀವು ಕೂಡ ಮನೆಯಲ್ಲಿ ದೋಸೆ, ಇಡ್ಲಿ ಹಾಗೆ ಯಾವುದೇ ತಿಂಡಿ ಮಾಡಿದಾಗಲು ಈ ಚಟ್ನಿ ಮಾಡಿ ಸವಿಯಬಹುದು.

ಈ ಚಟ್ನಿ ಇದ್ದರೆ ದೋಸೆ, ಇಡ್ಲಿ ಸವಿಯಲು ಇಷ್ಟಪಡದ ಮಂದಿ ಕೂಡ ಬಹಳ ಇಷ್ಟಪಟ್ಟು ಸವಿಯಲು ಮುಂದಾಗುತ್ತಾರೆ. ಹಾಗಾದ್ರೆ ನಾವಿಂದು ಈ ರುಚಿ ರುಚಿಯ ಮಶ್ರೂಮ್ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಶ್ರೂಮ್ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮಶ್ರೂಮ್
- ಈರುಳ್ಳಿ
- ಒಣ ಮೆಣಸು
- ಎಣ್ಣೆ
- ಬೆಳ್ಳುಳ್ಳಿ
- ಶುಂಠಿ
- ಹುಣಸೆ ಹುಳಿ
- ಉಪ್ಪು
- ತೆಂಗಿನಕಾಯಿ
- ಸಾಸಿವೆ
- ಕಡಲೆ ಹಿಟ್ಟು
- ಅರಿಶಿಣ
- ಕರಿಬೇವು
ಮಶ್ರೂಮ್ ಚಟ್ನಿ ಮಾಡುವ ವಿಧಾನವೇನು?
ಮೊದಲು ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಕ್ಲೀನ್ ಮಾಡಿಕೊಳ್ಳಿ. ಚಟ್ನಿ ಮಾಡಲು ಫ್ರೆಶ್ ಆಗಿರುವ ಮಶ್ರೂಮ್ ಅನ್ನೇ ಬಳಸಿ. ಏಕೆಂದರೆ ಶೇಖರಿಸಿಟ್ಟ ಮಶ್ರೂಮ್ ಬಹುಬೇಗ ಕೆಡಬಹುದು. ಹಾಗೆ ಕತ್ತರಿಸಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು 1 ಸ್ಪೂನ್ ಎಣ್ಣೆ ಹಾಕಿಕೊಂಡು ಒಣ ಮೆಣಸು, ಕತ್ತರಿಸಿಕೊಂಡ ಈರುಳ್ಳಿ ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ಕತ್ತರಿಸಿಕೊಂಡಿರುವ ಮಶ್ರೂಮ್ ಅನ್ನು ಸಹ ಹಾಕಿಕೊಂಡು ಬೆರೆಸಿಕೊಳ್ಳಿ.
ಹಾಗೆ ಅದರ ಜೊತೆಗೆ ಬೆಳ್ಳುಳ್ಳಿ, ಶುಂಠಿ ಹಾಗೆ ಹುಣಸೆ ಹುಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಕೊನೆಯಲ್ಲಿ ಉಪ್ಪು ಸಹ ಸೇರಿಸಿಕೊಳ್ಳಿ. ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಇಟ್ಟುಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತಣ್ಣಗಾದ ಮಸಾಲೆಗಳ ಹಾಕಿಕೊಳ್ಳಿ.
ಹಾಗೆ ಅದೇ ಜಾರ್‌ಗೆ ತೆಂಗಿನಕಾಯಿ ಸಹ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಈಗ ಈ ಚಟ್ನಿಯನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಸಾಸಿವೆ, ಕರಿಬೇವು, ಅರಶಿಣ ಪುಡಿ, ದನಿಯ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಒಗ್ಗರಣೆಯನ್ನು ಬೌಲ್‌ನಲ್ಲಿರುವ ಚಟ್ನಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ಮಶ್ರೂಮ್ ಚಟ್ನಿ ಸಿದ್ದವಾಗುತ್ತದೆ.
ನೀವು ಸಹ ಒಮ್ಮೆ ಈ ಚಟ್ನಿ ಸವಿದು ನೋಡಿ. ಇದು ದೋಸೆ, ಇಡ್ಲಿ ಮಾತ್ರವಲ್ಲ ಊಟದ ಜೊತೆಗೂ ಕೂಡ ಅದ್ಭುತ ರುಚಿ ನೀಡಲಿದೆ. ಮಾಡೋದು ಕೂಡ ಬಹಳ ಸುಲಭ. ಹಾಗೆ ಮಶ್ರೂಮ್‌ನಿಂದ ಮಾಡಿದ ಈ ಚಟ್ನಿ ಫ್ರಿಡ್ಜ್‌ನಲ್ಲಿ ವಾರಗಳ ಕಾಲ ಇಟ್ಟು ಸವಿಯಬಹುದು. ಮಕ್ಕಳಿಗೂ ಇದು ಬಹಳ ಇಷ್ಟವಾಗುತ್ತೆ. ನೀವು ಸಹ ಮಾಡಿ.



Click it and Unblock the Notifications
