Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈ ರೀತಿ ಅದ್ಭುತ ರುಚಿಯ ಮಶ್ರೂಮ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ಸುಲಭದ ವಿಧಾನ!
ನೀವು ವೆಜ್ ಬಿರಿಯಾನಿಯನ್ನು ಯಾವಾಗಲು ಮಾಡಿ ಸವಿದಿರುತ್ತೀರಿ, ಅದರಲ್ಲೂ ಬರಿ ತರಕಾರಿ ಹಾಕಿಯೂ ಬಿರಿಯಾನಿ ಮಾಡುತ್ತಾರೆ, ಹಾಗೆ ಯಾವುದೇ ತರಕಾರಿ ಬಳಸದೆ ವೆಜ್ ಕುಷ್ಕ ಸಹ ಮಾಡುತ್ತಾರೆ. ಹಾಗೆ ನಾವು ಹೆಚ್ಚಾಗಿ ವೆಜ್ ಬಿರಿಯಾನಿ ಅಂದ ಕೂಡಲೇ ನೆನಪಾಗುವುದು ಅಂದ್ರೆ ಮಶ್ರೂಮ್ ಬಿರಿಯಾನಿ ಆಗಿದೆ. ಸುಲಭವಾಗಿ ಬಿರಿಯಾನಿ ಟೇಸ್ಟ್ ಸಿಗಬೇಕು ಅಂದ್ರೆ ಎಲ್ಲರು ಈ ಮಶ್ರೂಮ್ ಬಿರಿಯಾನಿ ಮಾಡಲು ಮುಂದಾಗುವುದು ಸಾಮಾನ್ಯ.
ಮಶ್ರೂಮ್ ಬಿರಿಯಾನಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ, ಮಕ್ಕಳಿಗೂ ಕೂಡ ಇಷ್ಟವಾಗುತ್ತೆ. ಮಶ್ರೂಮ್ ಆರೋಗ್ಯದ ದೃಷ್ಟಿಯಲ್ಲೂ ಒಳ್ಳೆಯದು. ಇದನ್ನು ಮನೆಯಲ್ಲೇ ಮಾಡಿ ಸವಿಯುವುದು ಬಹಳ ಸುಲಭದ ರೆಸಿಪಿಯಾಗಿಯೂ ಎಲ್ಲರು ಮಾಡಲು ಬಯಸುತ್ತಾರೆ. ಹಾಗೆ ವೆಜ್ ಪ್ರಿಯರಿಗೆ ಇದೊಂದು ಅದ್ಭುತ ರುಚಿ ನೀಡುವ ಖಾದ್ಯ ಅಂತೂ ಹೌದು.

ಆದ್ರೆ ನಾವು ಯಾವಾಗಲು ಮಾಡುವಂತಹ ಶೈಲಿಯನ್ನು ಬಿಟ್ಟು ಹೊಸ ರೀತಿಯಲ್ಲಿ ಮಶ್ರೂಮ್ ಬಿರಿಯಾನಿ ಮಾಡಿದರೆ ಹೇಗೆ? ನಾವಿಂದು ಈ ಮಶ್ರೂಮ್ ಬಿರಿಯಾನಿ ಮಾಡುವುದು ಹೇಗೆ? ಎಂಬುದನ್ನು ಇಲ್ಲಿ ನೋಡೋಣ. ಈ ವಿಶೇಷ ರುಚಿಯ ಮಶ್ರೂಮ್ ಬಿರಿಯಾನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಶ್ರೂಮ್ ಬಿರಿಯಾನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮಶ್ರೂಮ್ - 200 ಗ್ರಾಂ
- ಅಕ್ಕಿ - 500 ಗ್ರಾಂ
- ಪಲಾವ್ ಎಲೆ
- ಮರಾಠಿ ಮೊಗ್ಗು
- ಏಲಕ್ಕಿ
- ದಾಲ್ಚಿನ್ನಿ
- ಲವಂಗ
- ಸೋಂಪು ಕಾಳು
- ಚಕ್ರ ಮೊಗ್ಗು
- ಕಸೂರಿ ಮೇಥಿ
- ಈರುಳ್ಳಿ
- ಟೊಮೆಟೊ
- ಶುಂಠಿ
- ಬೆಳ್ಳುಳ್ಳಿ
- ಕೊತ್ತಂಬರಿ ಸೊಪ್ಪು
- ಪುದೀನ ಎಲೆಗಳು
- ಹಸಿರು ಮೆಣಸಿನಕಾಯಿ
- ಮೊಸರು
- ಅರಿಶಿನ ಪುಡಿ
- ಗರಂ ಮಸಾಲಾ ಪುಡಿ
- ತುಪ್ಪ
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಮಶ್ರೂಮ್ ಬಿರಿಯಾನಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ 3 ಸ್ಪೂನ್ ಎಣ್ಣೆ ಹಾಗೂ ತುಪ್ಪ ಹಾಕಿಕೊಳ್ಳಿ, ನಂತರ ಇದಕ್ಕೆ ಪಲಾವ್ ಎಲೆ, ಸೋಂಕಾಳು, ಮರಾಠಿ ಮೊಗ್ಗು, ಚಕ್ಕೆ, ಲವಂಗ, ಏಲಕ್ಕಿ, ಚಕ್ರ ಮೊಗ್ಗು ಹಾಕಿಕೊಂಡು ಅದಕ್ಕೆ ಕಸೂರಿ ಮೇಥಿ ಹಾಕಿ ಬಳಿಕ ಒಂದು ಈರುಳ್ಳಿ ಕತ್ತರಿಸಿಕೊಂಡು ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಮಶ್ರೂಮ್ ಅನ್ನು ಹಾಕಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಶುಂಠಿ, ಹಸಿ ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಪುದಿನ ತೆಗೆದುಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಇದಕ್ಕೆ ಕಲ್ಲು ಉಪ್ಪು ಇದ್ದರೆ ಹಾಕಿಕೊಂಡು ರುಬ್ಬಿಕೊಳ್ಳಿ. ನಂತರ ಇದನ್ನು ಒಲೆ ಮೇಲೆ ಬೇಯುತ್ತಿರುವ ಮಶ್ರೂಮ್ಗೆ ಹಾಕಿಕೊಂಡು ಮೀಶ್ರಣ ಮಾಡಿ.
ನಂತರ ಅರಶಿಣ, ಗರಂ ಮಸಾಲೆ ಸಹ ಹಾಕಿಕೊಂಡು ಚೆನ್ನಾಗಿ ಕಲಸಿಕೊಂಡು ಕುದಿಯಲು ಬಿಡಿ. ಈಗ ಮತ್ತೆ ಮಿಕ್ಸಿ ಜಾರ್ ತೆಗೆದುಕೊಂಡು 2 ಟೊಮೆಟೋವನ್ನು ಹಾಕಿ ರುಬ್ಬಿಕೊಳ್ಳಬೇಕು. ಈ ಪೇಸ್ಟ್ ಅನ್ನು ಒಲೆ ಮೇಲೆ ಬೇಯುತ್ತಿರುವ ಮಸಾಲೆಗೆ ಹಾಕಿ ಸ್ವಲ್ಪ ಮೊಸರು ಕೂಡ ಹಾಕಿಕೊಂಡು ಮುಚ್ಚಳ ಮುಚ್ಚಿ 5 ನಿಮಿಷ ಕುದಿಯಲು ಬಿಡಿ.
ಈಗ ಅಕ್ಕಿ ತೆಗೆದುಕೊಂಡಿರುವ ಗ್ಲಾಸ್ನ ಅಳೆಯಲ್ಲಿ ಒಂದು ಗ್ಲಾಸ್ ಹೆಚ್ಚು ನೀರು ತೆಗೆದುಕೊಳ್ಳಬೇಕು. 2 ಗ್ಲಾಸ್ ಅಕ್ಕಿ ತೆಗೆದುಕೊಂಡರೆ ಮೂರು ಗ್ಲಾಸ್ ನೀರು ಹಾಕಿಕೊಳ್ಳಿ. ನೀರು ಹಾಕಿದ ಬಳಿಕ ಮತ್ತೆ ಉಪ್ಪು ಹಾಕಿ ಮಿಕ್ಸ್ ಮಾಡಿ. ನೀವು ಯಾವ ಅಕ್ಕಿಯನ್ನಾದರು ಬಳಸಿ ಮಾಡಬಹುದು. ನೀರು ಕುದಿಬರುವಾಗ ಮೊದಲೇ ತೊಳೆದು ನೆನೆಸಿಟ್ಟಿರುವ ಅಕ್ಕಿಯನ್ನು ಹಾಕಿಕೊಳ್ಳಿ. ಅಕ್ಕಿ 15 ನಿಮಿಷ ನೆನೆಸಿದರೆ ಸಾಕು.
5 ನಿಮಿಷದ ಬಳಿಕ ಮುಚ್ಚಳ ತೆಗೆದು ಒಮ್ಮೆ ಕಲಸಿಕೊಳ್ಳಿ. ಕುಕ್ಕರ್ನಲ್ಲಿ ಆದರೆ 2 ಗ್ಲಾಸ್ ಅಕ್ಕಿಗೆ 4 ಗ್ಲಾಸ್ ನೀರು ಹಾಕಿಕೊಳ್ಳಿ. ಪಾತ್ರೆಯಲ್ಲಾದರೆ 15 ನಿಮಿಷದಲ್ಲಿ ಅಕ್ಕಿ ಬೇಯುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮಶ್ರೂಮ್ ಬಿರಿಯಾನಿ ರೆಡಿಯಾಗುತ್ತದೆ. ಇದಕ್ಕೊಂದು ಮೊಸರು ಬಜ್ಜಿ ಮಾಡಿಕೊಂಡರೆ ಅದ್ಭುತ ರುಚಿ ನೀಡಲಿದೆ.



Click it and Unblock the Notifications
