Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೆಳಗ್ಗೆ ತಿಂಡಿಗೆ ಈ ಹೆಸರು ಬೇಳೆ ಇಡ್ಲಿ ಮಾಡಿ..! ಸ್ಪೆಷಲ್ ಬ್ರೇಕ್‌ಫಾಸ್ಟ್ ಮಾಡಿದ್ದೀರಾ?
ಮನೆಯಲ್ಲಿ ಬೆಳಗ್ಗೆ ತಿಂಡಿಗೆ ನೀವು ಎಷ್ಟೊಂದು ವಿಧವಾದ ಖಾದ್ಯ ಮಾಡಿರುತ್ತೀರಿ. ಅದೇ ರೀತಿ ಹಲವು ಖಾದ್ಯಗಳ ಮಾಡಿ ಸವಿಯುವುದು ಕಾಮನ್. ಬೆಳಗ್ಗೆ ಅತ್ಯುತ್ತಮ ತಿಂಡಿ ಸವಿದರೆ ಇಡೀ ದಿನ ಚೆನ್ನಾಗಿರುತ್ತೆ. ಇಂತಹ ಖಾದ್ಯಗಳ ಪೈಕಿ ಇಡ್ಲಿ ಕೂಡ ಒಂದು. ದಕ್ಷಿಣ ಭಾರತದ ಬಹುತೇಕ ಮನೆಗಳಲ್ಲಿ ವಾರದಲ್ಲಿ ಒಮ್ಮೆಯಾದರು ಈ ಇಡ್ಲಿ ಸವಿಯುತ್ತಾರೆ.
ಇಡ್ಲಿಯಲ್ಲಿ ಒಂದಲ್ಲಾ ಹತ್ತಾರು ಬಗೆ ಮಾಡಬಹುದು. ಒಂದೊಂದು ಕೂಡ ಒಂದೊಂದು ರುಚಿ ನೀಡಲಿದೆ. ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ಮಸಾಲೆ ಇಡ್ಲಿ ಹೀಗೆ ಹಲವು ರೀತಿಯ ಇಡ್ಲಿ ನಾವು ಮಾಡಿ ಸವಿದಿರುತ್ತೇವೆ. ಈ ಎಲ್ಲಾ ಬಗೆಯ ಇಡ್ಲಿ ಮಾಡುವುದು ಕೂಡ ಒಂದೇ ವಿಧಾನವಾಗಿದೆ. ಆದ್ರೆ ಹೊಸ ರೀತಿಯ ಇಡ್ಲಿಯನ್ನು ನಾವಿಂದು ಮಾಡೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಹೀಗಾಗಿ ನಾವಿಂದು ವಿಶೇಷವಾಗಿ ಅಕ್ಕಿಯನ್ನೇ ಬಳಸದೆ ಮಾಡುವಂತಹ ಸ್ಪೆಷಲ್ ಇಡ್ಲಿ ಕುರಿತು ತಿಳಿದುಕೊಳ್ಳೋಣ. ಈ ಇಡ್ಲಿಯನ್ನು ನೀವು ಒಮ್ಮೆ ಮಾಡಿ ಸವಿದರೆ ಮತ್ತೆ ಮತ್ತೆ ಮಾಡುವುದು ಖಚಿತ. ಹಾಗಾದ್ರೆ ಈ ಸ್ಪೆಷಲ್ ಇಡ್ಲಿ ಮಾಡೋದು ಹೇಗೆ? ಇಂದು ಬರಿ ಹೆಸರು ಬೇಳೆಯನ್ನು ಬಳಸಿಕೊಂಡು ಮಾಡುವಂತಹ ಇಡ್ಲಿಯ ಕುರಿತು ತಿಳಿಯೋಣ.
ಹೆಸರು ಬೇಳೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹೆಸರು ಬೇಳೆ ಇಡ್ಲಿ ಮಾಡುವ ವಿಧಾನವೇನು? ಹಿಟ್ಟು ಹೇಗೆ ಮಾಡಿಕೊಳ್ಳಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹೆಸರು ಬೇಳೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹೆಸರು ಬೇಳೆ - 1 ಕಪ್
- ಶುಂಠಿ
- ಮೊಸರು
- ಹಸಿರು ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕ್ಯಾರೆಟ್
- ಕರಿಬೇವು
- ಇಂಗು
- ಸಾಸಿವೆ
- ಅರಿಶಿನ ಪುಡಿ
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಹೆಸರು ಬೇಳೆ ಇಡ್ಲಿ ಮಾಡುವ ವಿಧಾನವೇನು?
ಮೊದಲು 1 ಕಪ್ ಹೆಸರು ವೇಳೆಯನ್ನು ಚೆನ್ನಾಗಿ ತೊಳೆದುಕೊಂಡು ಬೌಲ್‌ಗೆ ಹಾಕಿ 2 ಗಂಟೆಗಳ ಕಾಲ ನೆನೆಸಿಡಬೇಕು. ಈಗ ಮಿಕ್ಸಿ ಜಾರ್‌ಗೆ ಈ ಹೆಸರು ಬೇಳೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಳ್ಳುವ ಬದಲು ಸ್ವಲ್ಪ ತರಿತರಿಯಾಗಿ ಈ ಹಿಟ್ಟು ಇರಲಿ. ನಂತರ ಈ ಹಿಟ್ಟಿಗೆ 2 ಸ್ಪೂನ್ ಮೊಸರು, ಕೊತ್ತಂಬರಿ ಸೊಪ್ಪು, ಶುಂಠಿ, ತುರಿದುಕೊಂಡಿರುವ ಕ್ಯಾರೆಟ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನೀವು ಬೇಕಾದರೆ ಇದಕ್ಕೆ ಒಂದು ಸ್ಪೂನ್ ಅಷ್ಟು ಸೋಡಾ ಪುಡಿ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬಹುದು. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ನಂತರ ಸಾಸಿವೆ, ಇಂಗು ಹಾಕಿ ಫ್ರೈ ಮಾಡಿ ಕರಿಬೇವು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಈಗ ಈ ಒಗ್ಗರಣೆಯನ್ನು ಹಿಟ್ಟಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಉಪ್ಪು ಹಾಕಿ ಮಿಕ್ಸ್ ಮಾಡಿ ಹಿಟ್ಟು ರೆಡಿ ಮಾಡಿಕೊಳ್ಳಿ.
ಈಗ ಇಡ್ಲಿ ಪ್ಲೇಟ್‌ಗೆ ಎಣ್ಣೆ ಹಚ್ಚಿಕೊಂಡು ಈ ಹಿಟ್ಟನ್ನು ಅದಕ್ಕೆ ಹಾಕಿಕೊಳ್ಳಬೇಕು. ಅನಂತರ ಇಡ್ಲಿ ಕುಕ್ಕರ್ ಒಲೆ ಮೇಲೆ ಇಟ್ಟು ಬೇಯಲು ಹಿಡಿ. 10 ನಿಮಿಷ ಬೇಯಿಸಿಕೊಂಡೆರೆ ಸಾಕಾಗುತ್ತದೆ. ನಂತರ ಇದಕ್ಕೊಂದು ಯಾವುದಾದರು ಚಟ್ನಿ ಇದ್ದರೆ ಅದನ್ನು ಮಾಡಿಕೊಂಡು ಸವಿಯಲು ನೀಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹೆಸರು ಬೇಳೆ ಇಡ್ಲಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯ ಸ್ಪೆಷಲ್ ಇಡ್ಲಿ ಮಾಡಿ ನೋಡಿ.



Click it and Unblock the Notifications
