Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಉದ್ದಿನ ಬೇಳೆ ನೆನೆಸದೆ ವಡೆ ಮಾಡಬಹುದು..! ಇಲ್ಲಿದೆ ಸ್ಪೆಷಲ್ ರೆಸಿಪಿ
ಬ್ರೇಕ್‌ಫಾಸ್ಟ್‌ಗೆ ನೀವು ಉದ್ದಿನ ಬೇಳೆಯ ವಡೆ ಮಾಡಿರುತ್ತೀರಿ. ಹಲವರಿಗೆ ಇದು ಫೇವರಿಟ್ ತಿಂಡಿಯೂ ಕೂಡ ಹೌದು. ಏಕೆಂದರೆ ಹೋಟೆಲ್‌ನಲ್ಲಿ ನೀವು ತೂತು ವಡೆಯನ್ನು ಬಾಯಿ ಚಪ್ಪರಿಸಿ ಅದಕ್ಕೆ ಸಾಂಬಾರ್ ಹಾಕಿಸಿಕೊಂಡು ಸವಿದಿರುತ್ತೇವೆ. ವಡೆ ಅಂದರೆ ಅಲ್ಲ ವರ್ಗದವರು ಇಷ್ಟಪಡುವ ಒಂದು ಖಾದ್ಯ. ಹೀಗಾಗಿ ಮನೆಯಲ್ಲೂ ಕೂಡ ನಾವು ಬೆಳಗ್ಗೆ ತಿಂಡಿಗೆ ಊಟದ ಜೊತೆಗೆ ಸವಿಯಲು ವಡೆ ಮಾಡುವುದು ಸಾಮಾನ್ಯ.
ಆದ್ರೆ ವಡೆ ಮಾಡಲು ಬಹಳ ತಯಾರಿ ಮಾಡಬೇಕಾಗುತ್ತದೆ. ವಡೆ ಮಾಡಬೇಕಾದ್ರೆ ಹಿಂದಿನ ದಿನವೇ ಉದ್ದಿನ ಬೇಳೆ ನೆನೆಸಿಟ್ಟು ಅದನ್ನು ಚೆನ್ನಾಗಿ ರುಬ್ಬಿ ಹಿಟ್ಟು ಹದ ಆಗಲು ಒಂದು ರಾತ್ರಿ ಬಿಡಬೇಕಾಗುತ್ತದೆ. ಕೆಲವೊಂದು ವಿಧಾನದಲ್ಲಿ ಉದ್ದಿನ ಬೇಳೆ ನೆನೆಸುವುದೇ ಬೇಡ. ಹೌದು ವಡೆ ಮಾಡುವ ದಿನವೇ ಬೇಳೆಯನ್ನು ಹದ ಮಾಡಿಕೊಂಡು ವಡೆ ಮಾಡಬಹುದು.

ಆದ್ರೆ ನಾವಿಂದು ಉದ್ದಿನ ವೇಳೆ ನೆನೆಸದೆ 10 ನಿಮಿಷದಲ್ಲಿ ಹಿಟ್ಟು ಮಾಡಿಕೊಂಡು ಈ ವಡೆ ಮಾಡುವ ಹೊಸ ವಿಧಾನದ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ನಾವಿಂದು ಹೇಳಲಿದ್ದೇವೆ. ಹಾಗಾದ್ರೆ ಈ ವಡೆ ಮಾಡುವುದಾದರು ಹೇಗೆ? 10 ನಿಮಿಷದಲ್ಲಿ ಹೇಗೆ ವಡೆ ಮಾಡಬಹುದು ಎಂಬುದನ್ನು ಇಲ್ಲಿ ನೋಡಿ. ಈ ರೀತಿ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉದ್ದು ನೆನೆಸದೆ ವಡೆ ಮಾಡಲು ಯಾವೆಲ್ಲಾ ವಸ್ತು ಬೇಕು?
ಉದ್ದಿನ ಬೇಳೆ
ಈರುಳ್ಳಿ
ಹಸಿರು ಮೆಣಸಿನಕಾಯಿ
ಅಡುಗೆ ಸೋಡಾ
ಕರಿಬೇವಿನ ಎಲೆಗಳು
ಕೊತ್ತಂಬರಿ ಸೊಪ್ಪು
ಉಪ್ಪು ಎಣ್ಣೆ
ಉದ್ದಿನ ಬೇಳೆ ನೆನೆಸದೆ ವಡೆ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ನಲ್ಲಿ ಒಂದು ಕಪ್ ಉದ್ದಿನ ಬೇಳೆ ಹಾಕಿಕೊಂಡು ಅದನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. 4ರಿಂದ 5 ಬಾರಿ ಆದರು ಉದ್ದಿನ ಬೇಳೆ ತೊಳೆದುಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದು ಬಿಸಿಯಾದಾಗ ತೊಳೆದುಕೊಂಡಿರುವ ಉದ್ದಿನ ಬೇಳೆ ಹಾಕಿ ಹುರಿದುಕೊಳ್ಳಬೇಕು. ಅದು ಗರಿ ಗರಿಯಾಗುವಂತೆ ಹುರಿದುಕೊಳ್ಳಿ. 4 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ.
ನಂತರ ಉದ್ದಿನ ಬೇಳೆ ತಣ್ಣಗಾಗಲು ಬಿಡಬೇಕು. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ಪುಡಿ ಮಾಡಿಕೊಳ್ಳಬೇಕು. ನುಣ್ಣಗೆ ಪುಡಿ ಮಾಡಿಕೊಂಡ ಬಳಿಕ ಅದಕ್ಕೆ ಒಂದು ಕಪ್ ಮೊಸರು, ಸ್ವಲ್ಪ ನೀರು ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಬೇಕು. ನುಣ್ಣಗೆ ಹಿಟ್ಟು ಬರುವಂತೆ ರುಬ್ಬಿಕೊಳ್ಳಬೇಕು. ಈಗ ಹಿಟ್ಟನ್ನು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ.
ನಂತರ ಈ ಹಿಟ್ಟಿಗೆ ಚಿಕ್ಕದಾಗಿ ಹೆಚ್ಚಿರುವ ಹಸಿ ಮೆಣಸು, ಶುಂಠಿ, ಈರುಳ್ಳಿ, ಕೊತ್ತಂಬರಿ, ಕರಿಬೇವಿನ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ನಂತರ ಚಿಟಿಕೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾಗಿರಬೇಕು ನೀರು ಆಗಿರಬಾರದು.
ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾಗಲು ಬಿಡಿ. ಈಗ ಹಿಟ್ಟನ್ನು ಕೈಯಲ್ಲಿ ತೆಗೆದುಕೊಳ್ಳುವ ಮುನ್ನ ಕೈಯನ್ನು ನೀರಿಗೆ ಅದ್ದಿಕೊಂಡು ಹಿಟ್ಟು ತೆಗೆದುಕೊಂಡು ನಿಮ್ಮ ಹೆಬ್ಬೆರಳ ಮೂಲಕ ತೂತು ಮಾಡಿ ಎಣ್ಣೆಗೆ ಬಿಡಿ. ಎರಡೂ ಕಡೆ ವಡೆ ಬೇಯುವಂತೆ ನೋಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ವಡೆ ರೆಡಿಯಾಗುತ್ತದೆ. ಮಾಡುವುದು ತುಂಬಾನೆ ಸುಲಭ, ಹಾಗೆ ಉದ್ದು ನೆನೆಸಿಟ್ಟು ಮಾಡುವ ಸಮಸ್ಯೆ ಇರುವುದಿಲ್ಲ.



Click it and Unblock the Notifications
