Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸರಳ ಪೂರಿ ಅಲ್ಲ ಬ್ರೇಕ್ ಫಾಸ್ಟ್‌ಗೆ ಮಾಡಿ ವಿಶೇಷ ಮಸಾಲ ಪೂರಿ: ಈ ರುಚಿಗೆ ಫಿದಾ ಆಗದವರಿಲ್ಲ!
ನೀವೆಲ್ಲಾ ಪೂರಿ ಸವಿಯಲು ಇಷ್ಟಪಡುವ ಮಂದಿ ಆಗಿರಬಹುದು. ಅದ್ರಲ್ಲೂ ಹೋಟೆಲ್‌ನಲ್ಲಿ ನೀಡುವಂತಹ ರುಚಿ ರುಚಿಯ ಪೂರಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಮೃದುವಾದ ಪೇಪರ್‌ನಂತಹ ಪೂರಿಯನ್ನು ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯುತ್ತಿದ್ದರೆ ಅದರ ರುಚಿಗೆ ಎಲ್ಲರು ಫಿದಾ ಆಗುತ್ತಾರೆ. ಪೂರಿ ಮನೆಯಲ್ಲೂ ಕೂಡ ನೀವು ಮಾಡಿ ಸವಿದಿರುತ್ತೀರಿ.
ಆದ್ರೆ ಪೂರಿಯನ್ನು ಯಾವಾಗಲು ಒಂದೇ ರೀತಿ ಮಾಡುವಂತೆ ಸಾಧಾರಣ ಪೂರಿ ಮಾಡಬೇಡಿ, ಆದ್ರೆ ಇಂದು ಮಸಾಲ ಪೂರಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಮಸಾಲ ಪೂರಿ ಒಮ್ಮೆ ಸವಿದರೆ ನಿತ್ಯವೂ ಇದೇ ತಿಂಡಿ ಮಾಡಿ ಸವಿಯಲು ಮುಂದಾಗುವುದು ಖಚಿತ. ಹಾಗಾದ್ರೆ ಈ ರುಚಿ ರುಚಿಯ ಮಸಾಲ ಪೂರಿ ಮಾಡುವುದು ಹೇಗೆ ನೋಡಿ.

ಪೂರಿ ಮಾಡಲು ಗೋಧಿ ಅಥವಾ ಮೈದಾ ಹಿಟ್ಟು ಬಳಸುತ್ತಾರೆ. ಆದ್ರೆ ಈ ಮಸಾಲ ಪೂರಿಗೆ ಯಾವುದೇ ಚಟ್ನಿ, ಕುರ್ಮಾ ಯಾವುದೂ ಬೇಕಾಗಿಲ್ಲ. ಅದರ ರುಚಿಯನ್ನು ನೀವು ಹಾಗೆಯೇ ಸವಿಯಬಹುದು. ಹಾಗಾದ್ರೆ ಈ ಮಸಾಲ ಪೂರಿ ಮಾಡೋದು ಹೇಗೆ?, ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ಪೂರಿ ಮಾಡಲು ಅಗತ್ಯವಿರುವ ವಸ್ತುಗಳು
- ಗೋಧಿ ಹಿಟ್ಟು 1 ಕಪ್
- ಕಡಲೆ ಹಿಟ್ಟು 1 ಕಪ್
- ಚಿರೋಟಿ ಕಾಲು ಕಪ್
- ಕಸೂರಿ ಮೆಂತ್ಯ 1 ಟೇಬಲ್ ಸ್ಪೂನ್
- ಓಂಕಾಳು 1 ಟೀ ಸ್ಪೂನ್
- ಅಚ್ಚಕಾರದ ಪುಡಿ 1 ಟೀ ಸ್ಪೂನ್
- ಅರಿಶಿಣದ ಪುಡಿ ಅರ್ಧ ಟೀ ಸ್ಪೂನ್
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಎಣ್ಣೆ ಡೀಪ್ ಫ್ರೈ ಮಾಡಲು
- ಉಪ್ಪು ರುಚಿಗೆ ತಕ್ಕಷ್ಟು
ಮಸಾಲ ಪೂರಿ ಮಾಡುವ ಸುಲಭದ ವಿಧಾನವೇನು?
- ಪೂರಿ ಹಿಟ್ಟು ಕಲಸಿಕೊಳ್ಳಲು ಒಂದು ಬೌಲ್‌ಗೆ 1 ಕಪ್ ಗೋಧಿ ಹಿಟ್ಟು, 1 ಕಪ್ ಕಡಲೆ ಹಿಟ್ಟು, ಕಾಲು ಕಪ್ ಚಿರೋಟಿ ರವೆ, ಅರಶಿಣ ಪುಡಿ, ಖಾರದ ಪುಡಿ, ಉಪ್ಪು, ಕಸೂರಿ ಮೆಂತ್ಯ, ಓಂಕಾಳು ಹಾಕಿಕೊಂಡು ಒಮ್ಮೆ ಡ್ರೈ ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಕಪ್ ಅಳತೆಯ ನೀರು ತೆಗೆದುಕೊಂಡು ಸ್ವಲ್ಪ ಸ್ವಲ್ಪ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡುತ್ತಾ ಇರಬೇಕಾಗುತ್ತದೆ.
- ನೀರು ಹಾಕಿಕೊಂಡು ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ರೆಡಿ ಮಾಡಿಕೊಳ್ಳಿ. ನಂತರ ಹಿಟ್ಟಿನ ಮೇಲೆ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಹಾಗೆಯೆ ಬಿಡಿ. 10 ನಿಮಿಷ ಬಿಟ್ಟರೆ ಸಾಕಾಗುತ್ತದೆ.
- ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಈಗ 10 ನಿಮಿಷದ ಬಳಿಕ ಹಿಟ್ಟನ್ನು ಉಂಡೆ ಕಟ್ಟಿಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ. ಉಳಿದ ಎಲ್ಲಾ ಹಿಟ್ಟನ್ನು ಉಂಡೆ ಮಾಡಿಕೊಂಡು ಪೂರಿ ಲಟ್ಟಿಸಿ ಇಟ್ಟುಕೊಳ್ಳಿ.
- ಅನಂತರ ಒಂದೊಂದಾಗಿ ಬಾಣಲೆಯ ಎಣ್ಣೆಯಲ್ಲಿ ಇಳಿಬಿಟ್ಟು ಕರಿದುಕೊಳ್ಳಬೇಕು. ಎಣ್ಣೆಯಲ್ಲಿ ಎರಡೂ ಭಾಗವೂ ಚೆನ್ನಾಗಿ ಕರಿದುಕೊಳ್ಳಬೇಕು. ಇದೇ ರೀತಿ ಎಲ್ಲಾ ಪೂರಿಯನ್ನು ಕರಿದುಕೊಳ್ಳಬೇಕು.
- ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮಸಾಲೆ ಪೂರಿ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಬೆಳಗ್ಗಿನ ತಿಂಡಿಗೆ ಇದನ್ನು ಮಾಡಿ ನೋಡಿ. ಎಲ್ಲರಿಗೂ ಇದು ಇಷ್ಟವಾಗುತ್ತೆ.



Click it and Unblock the Notifications
