Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
50 ವರ್ಷದ ಹಿಂದೆ ಹೀಗೆಯೇ ಮೊಟ್ಟೆ ಸಾಂಬಾರ್ ಮಾಡುತ್ತಿದ್ರು..! ಇಲ್ಲಿದೆ ಸ್ಪೆಷಲ್ ರೆಸಿಪಿ
ಸಾಮಾನ್ಯವಾಗಿ ಅನ್ನದ ಜೊತೆಗೆ ಯಾವುದಾದರೊಂದು ಸಾಂಬಾರ್ ಮಾಡಿಯೇ ಮಾಡುತ್ತೇವೆ. ಅದರಲ್ಲೂ ಊಟದ ಜೊತೆಗೆ ಅದ್ಭುತ ರುಚಿಯಲ್ಲಿ ಒಂದು ಮಸಾಲೆ ಹಾಕಿರುವ ಸಾಂಬಾರ್ ಮಾಡಿದ್ರೆ ಊಟದ ರುಚಿ ದುಪ್ಪಟ್ಟಾಗುತ್ತೆ. ಇಂತಹ ರುಚಿಕರ ಸಾಂಬಾರ್ನಲ್ಲಿ ನಾವಿಂದು ಮೊಟ್ಟೆ ಬಳಸಿ ಮಾಡುವಂತಹ ಸಾಂಬಾರ್ ಕುರಿತು ಹೇಳುತ್ತಿದ್ದೇವೆ.
ನೀವು ಕೂಡ ಈ ರೀತಿ ಮೊಟ್ಟೆಗಳ ಬಳಸಿ ಹಲವು ಬಾರಿ ಸಾಂಬಾರ್ ಮಾಡಿರಬಹುದು. ಆದ್ರೆ ಎಂದಾದ್ರು 50 ವರ್ಷದ ಹಿಂದೆ ಮಾಡುತ್ತಿದ್ದಂತಹ ವಿಭಿನ್ನ ಮಸಾಲೆಗಳ, ವಿಭಿನ್ನ ರುಚಿಯ ಮೊಟ್ಟೆ ಸಾಂಬಾರ್ ಮಾಡಿದ್ದೀರಾ? ಈಗ ನಾವು ಹಲವು ರೀತಿಯಲ್ಲಿ ಸಾಂಬಾರ್ ಮಾಡುತ್ತಿರುತ್ತೇವೆ. ನಿತ್ಯ ಪ್ರಯೋಗಗಳನ್ನೂ ಮಾಡುತ್ತೇವೆ, ಆದರೆ ಹಿಂದೆಲ್ಲಾ ಹೇಗೆ ರುಚಿ ರುಚಿಯಾದ ಅಡುಗೆ ಮಾಡುತ್ತಿದ್ದರು ಎಂಧು ಕುತೂಹಲವಂತು ಇದೆ.

ಹಾಗೆ ಸುಮಾರು 50 ವರ್ಷಗಳ ಹಿಂದೆ ಯಾವ ರೀತಿಯಾಗಿ ಈ ರುಚಿಕರ ಮೊಟ್ಟೆ ಸಾಂಬಾರ್ ಮಾಡುತ್ತಿದ್ದರು ಎಂಬುದು ನಿಮಗೆ ಗೊತ್ತಾ? ಹೌದು ಈ ರೀತಿಯ ಸಾಂಬಾರ್ ಅನ್ನು ನೀವೊಮ್ಮೆ ಸವಿದರೆ ನಿತ್ಯವೂ ಇದೇ ರೀತಿ ಮಾಡಿ ಸವಿಯಲು ಮುಂದಾಗುತ್ತೀರಿ. ಹಾಗಾದ್ರೆ ಈ ಮೊಟ್ಟೆ ಸಾಂಬಾರ್ ಮಾಡುವುದು ಹೇಗೆ? ಅದರ ರೆಸಿಪಿ ಏನು? ಯಾವೆಲ್ಲಾ ವಸ್ತುಗಳು ಬೇಕಿವೆ? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಟ್ಟೆ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು
- ಮೊಟ್ಟೆ
- ಕೊತ್ತಂಬರಿ ಸೊಪ್ಪು
- ತೆಂಗಿನಕಾಯಿ
- ಈರುಳ್ಳಿ
- ಟೊಮೆಟೋ
- ಹಸಿ ಮೆಣಸು
- ಖಾರದ ಪುಡಿ
- ಚಕ್ಕೆ
- ಲವಂಗ
- ಏಲಕ್ಕಿ
- ಸೋಂಕಾಳು
- ಹುರಿಗಡಲೆ
- ಅರಶಿಣ
- ಧನಿಯಾ ಪುಡಿ
- ಕರಿಬೇವು
ಮೊಟ್ಟೆ ಸಾಂಬಾರ್ ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರ್ಗೆ ಸ್ವಲ್ಪ ತೆಂಗಿನಕಾಯಿ ಹಾಕಿ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೆಟೋ, ಏಲಕ್ಕಿ, ಚಕ್ಕೆ, ಕಾಳು ಮೆಣಸು, ಲವಂಗ, ಸೋಂಕಾಳು ಹಾಕಿ, ಹುರಿಗಡಲೆ, ಅರಶಿಣ, ಖಾರದ ಪುಡಿ, ಧನಿಯಾ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಇದಕ್ಕೆ ಹಸಿ ಮೆಣಸು, ಕರಿವೇವು, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಅರ್ಧ ನಿಮಿಷದ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆಗಳನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ನೀರು ಹಾಕಿಕೊಳ್ಳಿ. 2 ನಿಮಿಷಗಳ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಕುದಿಯಲು ಬಿಡಿ.
5 ನಿಮಿಷದ ಬಳಿಕ ಮುಚ್ಚಳ ತೆರೆದು ಮಿಕ್ಸ್ ಮಾಡಿ ಮತ್ತೆ ಸ್ವಲ್ಪ ನೀರು ಹಾಕಿಕೊಳ್ಳಿ. ಇದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಮತ್ತೆ ಕುದಿಯಲು ಬಿಡಬೇಕು. ಮುಚ್ಚಳ ಮುಚ್ಚಿ ಕುದಿ ಬರಲು ಬಿಡಿ. 6 ನಿಮಿಷ ಬಿಟ್ಟು ಈಗ ಮೊಟ್ಟೆಯನ್ನು ಒಡೆದು ಒಂದೊಂದಾಗಿ ಸಾಂಬಾರ್ಗೆ ಹಾಕಿಕೊಳ್ಳಿ. ಮಿಕ್ಸ್ ಮಾಡಬೇಡಿ. ಹಾಗೆ ಕುದಿಯಲು ಬಿಡಿ.
ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬಿಡಿ. 5 ನಿಮಿಷದ ಬಳಿಕ ಒಮ್ಮೆ ನಿಧಾನವಾಗಿ ಮಿಕ್ಸ್ ಮಾಡಿ ಮತ್ತೆ 5 ನಿಮಿಷ ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸ್ಪೆಷಲ್ ಮೊಟ್ಟೆ ಸಾಂಬಾರ್ ರೆಡಿಯಾಗುತ್ತೆ. ನೀವು ಕೂಡ ಒಮ್ಮೆಯಾದರು ಮನೆಯಲ್ಲಿ ಇದನ್ನು ಟ್ರೈ ಮಾಡಿ .



Click it and Unblock the Notifications
