Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಚಪಾತಿ, ಊಟಕ್ಕೆ ಸ್ಪೆಷಲ್ ಮಸಾಲ ಎಗ್ ಬುರ್ಜಿ..! ಸಖತ್ ಟೇಸ್ಟಿ..!
ಚಪಾತಿ, ಪರೋಟ ಮಾಡಿದಾಗ ಅವರ ಜೊತೆಗೆ ಸವಿಯಲು ನಾವು ಆಲೂ ಪಲ್ಯ, ಅಥವಾ ಯಾವುದಾದರು ಚಟ್ನಿ, ಇಲ್ಲವೆ ತರಕಾರಿಯ ಪಲ್ಯ ಮಾಡುತ್ತೇವೆ. ಹೀಗೆ ಯಾವುದಾದರು ಖಾದ್ಯ ಮಾಡಿದರೆ ಮಾತ್ರವೇ ಚಪಾತಿ, ಇಡ್ಲಿ ದೋಸೆ, ಪರೋಟ ಹೇಗೆ ಯಾವುದೇ ಖಾದ್ಯ ರುಚಿಯಾಗಿ ಸೇರುತ್ತದೆ. ಇನ್ನು ಚಪಾತಿ ಪರೋಟಕ್ಕೆ ಮೊಟ್ಟಯ ಬುರ್ಜಿ ನೀಡುವಷ್ಟು ರುಚಿ ಮತ್ಯಾವ ಖಾದ್ಯವು ನೀಡಲು ಸಾಧ್ಯವಿಲ್ಲ.
ಹೌದು ಹಸಿ ಮೆಣಸು, ಈರುಳ್ಳಿ ಹಾಕಿ ಮಾಡುವಂತಹ ಮೊಟ್ಟೆ ಬುರ್ಜಿ ಸಿಕ್ಕಾಪಟ್ಟೆ ರುಚಿಯಾಗಿರುತ್ತೆ, ನಾವಿದನ್ನು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟದ ನಡುವೆಯೂ ಸವಿಯಬಹುದು. ಮೊಟ್ಟೆ ಬುರ್ಜಿಯನ್ನು ಈ ರೀತಿಯ ವಿಧಾನದಲ್ಲಿ ಮಾಡಿದರೆ ಚಪಾತಿ ಜೊತೆಗೆ ಸವಿಯುವಾಗ ನಿಮ್ಮ ಬಾಯಲ್ಲಿ ನೀರು ಬರುವುದು ಖಚಿತ. ಹಾಗೆ 3 ಚಪಾತಿ ಸವಿಯುವ ಮಂದಿ 5 ಅಥವಾ 6 ಚಪಾತಿ ಸವಿಯೋದು ನೋಡಬಹುದು.

ಇನ್ನು ಮೊಟ್ಟೆ ಯಾವುದೇ ಖಾದ್ಯದ ಜೊತೆಗೂ ರುಚಿಕರವಾಗಿರುತ್ತದೆ. ಹಾಗೆ ಆರೋಗ್ಯಕ್ಕೂ ಕೂಡ ಬಹಳ ಉತ್ತಮ. ಹೀಗಾಗಿ ನಾವಿಂದು ಈ ಮೊಟ್ಟೆ ಬುರ್ಜಿ ಮಾಡುವ ಕುರಿತು ತಿಳಿದುಕೊಳ್ಳೋಣ.
ಮೊಟ್ಟೆ ಬುರ್ಜಿ ಮಾಡುವ ಸರಿಯಾದ ವಿಧಾನವೇನು?, ಯಾವೆಲ್ಲಾ ಮಸಾಲೆ ಹಾಕಬೇಕು? ಮಾಡುವ ವಿಧಾನವೇನು? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಟ್ಟೆ ಬುರ್ಜಿ ಮಾಡಲು ಬೇಕಾಗುವ ವಸ್ತುಗಳು
- ಮೊಟ್ಟೆ-4
- ಕ್ಯಾರೆಟ್
- ಟೊಮೆಟೋ
- ಈರುಳ್ಳಿ
- ಕ್ಯಾಪ್ಸಿಕಂ
- ಖಾರದ ಪುಡಿ
- ಗರಂ ಮಸಾಲೆ
- ಮೊಟ್ಟೆ ಮಸಾಲೆ
- ಉಪ್ಪು
- ಅರಶಿಣ
- ಎಣ್ಣೆ
- ಬಟಾಣಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಧನಿಯಾ ಪುಡಿ
ಮೊಟ್ಟೆ ಬುರ್ಜಿ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಕರಿಬೇವು, ಕ್ಯಾಪ್ಸಿಕಂ, ಹಸಿ ಮೆಣಸು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಅನಂತರ ಹಸಿ ಬಟಾಣಿ, ಚಿಕ್ಕದಾಗಿ ಕತ್ತರಿಸಿಕೊಂಡಿರುವ ಈರುಳ್ಳು ಹಾಕಿ 2 ನಿಮಿಷ ಫ್ರೈ ಮಾಡಿ.
ಅನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಕ್ಕದಾಗಿ ಕತ್ತರಿಸಿಕೊಂಡ ಟೊಮೆಟೋ, ಕ್ಯಾರೆಟ್, ಉಪ್ಪು ಹಾಕಿ ಒಟ್ಟಿಗೆ ಮಿಕ್ಸ್ ಮಾಡಿಕೊಳ್ಳುತ್ತಾ 3 ನಿಮಿಷ ಫ್ರೈ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಖಾರದ ಪುಡಿ ಸಹ ಹಾಕಿ ಮಿಕ್ಸ್ ಮಾಡಿ.
ಈಗ ಧನಿಯಾ ಪುಡಿ, ಗರಂ ಮಸಾಲ, ಅರಶಿಣ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡುತ್ತಾ 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಮೊಟ್ಟೆಗಳನ್ನು ಒಡೆದು ಹಾಕಿಕೊಳ್ಳಬೇಕು. 4 ಮೊಟ್ಟೆ ಹಾಕಿಕೊಂಡು ಮೊದಲು ಮಿಕ್ಸ್ ಮಾಡಬೇಡಿ. 30 ಸೆಕೆಂಡ್ ಕಾಲ ಹಾಗೆಯೇ ಬಿಟ್ಟು ಅನಂತರ ಮಿಕ್ಸ್ ಮಾಡಲು ಆರಂಭಿಸಿ. ಹೀಗೆ ಮಾಡಿದಾಗ ಮೊಟ್ಟೆ ಪುಡಿ ಪುಡಿಯಾಗುವುದಿಲ್ಲ.
ಮೊಟ್ಟೆಗೆ ಬೇಕಾದರೆ ನೀವು ಮೊಟ್ಟೆ ಮಸಾಲೆ ಅಥವಾ ಚಿಕನ್ ಮಸಾಲೆಯನ್ನು ಅರ್ಧ ಸ್ಪೂನ್ ಹಾಕಿಕೊಂಡು ಫ್ರೈ ಮಾಡಬಹುದು. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿದರೆ ನಿಮ್ಮ ಮುಂದೆ ಮೊಟ್ಟೆ ಬುರ್ಜಿ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಚಪಾತಿಗೆ ಇದು ಹೇಳಿ ಮಾಡಿಸಿದ ಖಾದ್ಯ.



Click it and Unblock the Notifications
