Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಾರ್ಮಲ್ ಮೊಸರನ್ನ ಅಲ್ಲ ಸುಲಭದ ಮಸಾಲೆ ಮೊಸರನ್ನ ಮಾಡಿ!
ನೀವು ಬೇಸಿಗೆಯ ಸಮಯದಲ್ಲಿ ಅಥವಾ ಬಿಸಿಲಿನ ಸಮಯದಲ್ಲಿ ತಂಪಾದ ಆಹಾರ ಸೇವನೆಗೆ ನೀವು ಹೆಚ್ಚು ಒತ್ತು ನೀಡಬಹುದು. ಅದ್ರಲ್ಲೂ ಮಧ್ಯಾಹ್ನದ ಸಮಯದಲ್ಲಿ ಮೊಸರನ್ನ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಮೊಸರನ್ನ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಆಹಾರವಾಗಿದೆ. ದೇಹಕ್ಕೆ ತಂಪು ತರುವ ಜೊತೆಗೆ ಕರುಳಿನ ಆರೋಗ್ಯಕ್ಕೂ ಸಹ ಇದು ಬಹಳ ಉತ್ತಮವಾಗಿರಲಿದೆ.
ಹಾಗೆ ಮೊಸರನ್ನವನ್ನು ಸವಿಯಲು ಎಲ್ಲರು ಇಷ್ಟಪಡುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರು ಸಹ ಮೊಸರನ್ನ ಸವಿಯಬಹುದು. ಅದ್ರಲ್ಲೂ ಹಲವು ರೀತಿಯ, ಬಗೆಯ ಮೊಸರನ್ನ ಮಾಡಿ ಸವಿಯೋದು ಸಹ ನೋಡಿರಬಹುದು. ಹಾಗೆ ಮೊಸರನ್ನ ಕೆಲವೇ ನಿಮಿಷದಲ್ಲಿಯೂ ಕಡಿಮೆ ವಸ್ತುಗಳ ಮಾಡಿ ಮುಗಿಸಬಹುದು. ಹೀಗಾಗಿ ಸಮಯ ಇಲ್ಲದಾಗಲೂ ಈ ಖಾದ್ಯ ಮಾಡಿ ಸವಿಯುವುದು ನೋಡಬಹುದು.

ಹಾಗಾದ್ರೆ ಈ ರುಚಿ ರುಚಿಯ ಮೊಸರನ್ನದ ಪೈಕಿ ನಾವಿಂದು ಮಸಾಲೆ ಭರಿತ ಮೊಸರನ್ನ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಒಗ್ಗರಣೆ ಬಳಸಿ ಮಾಡುವ ಮೊಸರನ್ನ ಮಾಡಿರುತ್ತೀರಿ. ಅದ್ರಲ್ಲೂ ಹಲವು ವಸ್ತುಗಳ ಹಾಕಿ ಮಾಡುವ ಮೊಸರನ್ನ ರುಚಿಯಲ್ಲೂ ಅದ್ಭುತವಾಗಿರಲಿದೆ. ನಾವಿಂದು ಮಸಾಲೆ ಮೊಸರನ್ನ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮಸಾಲೆ ಮೊಸರನ್ನ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ಮಸಾಲೆ ಮೊಸರನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಮೊಸರು
- ಕರಿಬೇವು
- ಉಪ್ಪು
- ಹಸಿ ಮೆಣಸು- 2ರಿಂದ 4
- ಶುಂಠಿ
- ಕೊತ್ತಂಬರಿ ಸೊಪ್ಪು
- ಎಣ್ಣೆ - 1 ಚಮಚ
- ಸಾಸಿವೆ
- ಉದ್ದಿನ ಬೇಳೆ - 1 ಚಮಚ
- ಕೆಂಪು ಮೆಣಸಿನಕಾಯಿ - 2
- ಈರುಳ್ಳಿ - 1/2
- ಹಾಲು - 1/2 ಕಪ್
ಮಸಾಲೆ ಮೊಸರನ್ನ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಶುಂಠಿ, ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ರುಬ್ಬಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬೀಳಿಕ ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಪಾತ್ರೆಯಲ್ಲಿ ಅನ್ನವನ್ನು ತೆಗೆದುಕೊಳ್ಳಿ. ಈ ಅನ್ನ ಸ್ವಲ್ಪ ಮೆದುವಾಗಿ ಇರಲಿ. ಅನ್ನವನ್ನು ಸ್ವಲ್ಪ ಮೃದುವಾಗಿ ಬರಲು ಮಿಕ್ಸ್ ಮಾಡಿಕೊಳ್ಳಿ. ಈಗ ತಣ್ಣಗಿರುವ ಅನ್ನಕ್ಕೆ ಒಗ್ಗರಣೆ, ಹಸಿ ಈರುಳ್ಳಿ, 1 ಕಪ್ ಗಟ್ಟಿ ಮೊಸರು, ಅರ್ಧ ಕಪ್ ಹಾಲು, ಉಪ್ಪು ಹಾಗೆ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲೆ ಪೇಸ್ಟ್ ಅನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ.
ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ. ಇದು ಗಟ್ಟಿ ಎನಿಸಿದರೆ ಮೊಸರು ಹಾಕಿಕೊಳ್ಳಿ. ಹೀಗೆ ಮಿಶ್ರಣ ಮಾಡುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಮಸಾಲೆ ಮೊಸರನ್ನ ಸಿದ್ದವಾಗುತ್ತೆ. ಇದು ಮಧ್ಯಾಹ್ನದ ಊಟದಲ್ಲಿ ರುಚಿ ನೀಡಲಿದೆ. ಹಾಗೆ ಬಾಕ್ಸ್ಗೂ ಕೂಡ ಇದು ಅದ್ಭುತ ರುಚಿ ನೀಡುವ ರೆಸಿಪಿ ಆಗಿರಲಿದೆ. ನೀವು ಸಹ ಮನೆಯಲ್ಲಿ ನಾರ್ಮಲ್ ಮೊಸರನ್ನ ಮಾಡುವುದಕ್ಕಿಂತ ಈ ರೀತಿ ವಿಭಿನ್ನ ರುಚಿಯ ಮಸಾಲೆ ಮೊಸರನ್ನ ಮಾಡುವುದು ಉತ್ತಮ. ಈ ಮೊಸರನ್ನಕ್ಕೆ ನೀವು ಬೇಕಿದ್ದರೆ ದಾಳಿಂಬೆ, ದ್ರಾಕ್ಷಿ ಸೇರಿಸಬಹುದು. ಹಾಕದೆ ಇದ್ದರೂ ಸಹ ರುಚಿ ಚೆನ್ನಾಗಿ ಬರಲಿದೆ.



Click it and Unblock the Notifications
