Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹುಡಿ ಹುಡಿಯಾದ ನಿಂಬೆ ಹಣ್ಣಿನ ಚಿತ್ರಾನ್ನ ಮಾಡಿ ನೋಡಿ..! 5 ನಿಮಿಷ ಸಾಕು!
ಬೆಳಗ್ಗೆ ತಿಂಡಿಗೆ ನೀವು ಚಿತ್ರಾನ್ನ ಮಾಡಿ ಸವಿಯೋದು ಸಾಮಾನ್ಯ. ಅತ್ಯಂತ ಸುಲಭವಾಗಿ ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದಾದ ತಿಂಡಿ ಆಗಿರೋದ್ರಿಂದ ಎಲ್ಲರಿಗೂ ಈ ತಿಂಡಿ ಮಾಡಿ ಸವಿಯುವುದು ಇಷ್ಟದ ಕಾರ್ಯವಾಗಿರುತ್ತೆ. ಏಕೆಂದರೆ ಬೆಳಗ್ಗೆಯ ಗಡಿ ಬಿಡಿಯಲ್ಲಿ ಸುಲಭವಾಗಿ ಈ ಚಿತ್ರಾನ್ನ ಮಾಡಿಬಿಡಬಹುದು. ಹಾಗೆ ಚಿತ್ರಾನ್ನದಲ್ಲು ಹತ್ತಾರು ವಿಧಗಳಿವೆ.
ಒಂದೊಂದು ಚಿತ್ರಾನ್ನವು ಒಂದೊಂದು ರುಚಿಗೆ ಫೇಮಸ್ ಆಗಿದೆ. ಕೆಲವರಿಗೆ ಚಿತ್ರಾನ್ನ ಅಂದ್ರೆ ಬಹಳ ಇಷ್ಟವಾಗುತ್ತೆ. ಹುಡಿ ಹುಡಿಯಾಗಿ ರುಚಿಯಾಗಿ ಮಾಡಬಹುದು. ಕೆಲವೊಂದು ವಿಧಾನವಂತು ಬೇರೆ ಯಾವುದೇ ಖಾದ್ಯಕ್ಕಿಂತಲೂ ಫಸ್ಟ್ ಕ್ಲಾಸ್ ರುಚಿ ನೀಡಲಿದೆ. ಹೋಟೆಲ್‌ನಲ್ಲಿ ಅಥವಾ ಶುಭ ಸಮಾರಂಭದಲ್ಲಿ ಮಾಡುವಂತಹ ರುಚಿಯಲ್ಲಿಯೂ ಇದನ್ನು ಮಾಡಬಹುದು.

ಆದ್ರೆ ನಾವಿಂದು ಸ್ಪೆಷಲ್ ಆಗಿ ನಿಂಬೆ ಹಣ್ಣಿನಿಂದ ಮಾಡುವಂತಹ ವಿಶೇಷ ಬಗೆಯ ಚಿತ್ರಾನ್ನವನ್ನು ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಈ ನಿಂಬೆ ಹಣ್ಣಿನ ಚಿತ್ರಾನ್ನ ನಾಲಿಗೆಗೆ ಹುಳಿ ಹುಳಿಯಾಗಿ ಅದ್ಭುತ ರುಚಿ ನೀಡಲಿದೆ, ನಿಮಗೆ ಚಿತ್ರಾನ್ನ ಇಷ್ಟವಿಲ್ಲ ಅಂದರೂ ಈ ರುಚಿ ಸವಿದರೆ ನಿತ್ಯ ಈ ಚಿತ್ರಾನ್ನ ಸವಿಯಲು ಮುಂದಾಗೋದು ಖಚಿತ.
ಹಾಗಾದ್ರೆ ಈ ರುಚಿ ರುಚಿಯ ನಿಂಬೆ ಹಣ್ಣಿನ ಚಿತ್ರಾನ್ನ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿಯೋಣ. ಈ ನಿಂಬೆ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನಿಂಬೆ ಹಣ್ಣಿನ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಅನ್ನ- 1 ಬೌಲ್
ಕೊತ್ತಂಬರಿ
ಕಡಲೆ ಬೀಜ
ಕಡಲೆ ಬೇಳೆ
ಕರಿಬೇವು
ಸಾಸಿವೆ
ಒಣ ಮೆಣಸು
ಅರಶಿಣ
ಈರುಳ್ಳಿ- 2ರಿಂದ 3
ನಿಂಬೆ ಹಣ್ಣು
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ನಿಂಬೆ ಹಣ್ಣಿನ ಚಿತ್ರಾನ್ನ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ನೀವು ಇದಕ್ಕೆ ಸಾಸಿವೆ, ಕಡಲೆ ಬೀಜ, ಕಡಲೆ ಬೇಳೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಸೀಳಿಕೊಂಡ ಹಸಿ ಮೆಣಸನ್ನು ಹಾಕಿ. ಅನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿ 3ರಿಂದ 4 ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಕರಿಬೇವು, ಉಪ್ಪು ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಅರಶಿಣ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ಹಣ್ಣಿನ ರಸ ಮಾತ್ರ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಅನಂತರ ಈ ಚಿತ್ರಾನ್ನದ ಗೊಜ್ಜು ರೆಡಿಯಾಗುತ್ತದೆ. ನಿಮಗೆ ಎಷ್ಟು ಬೇಕೋ ಅಷ್ಟು ಗೊಜ್ಜು ಎತ್ತಿಟ್ಟುಕೊಳ್ಳಿ.
ಈಗ ಮೊದಲೇ ಮಾಡಿಟ್ಟಿರುವ ಉದುರು ಉದುರಾದ ಅನ್ನವನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಮಸಾಲೆ ಅನ್ನಕ್ಕೆ ಚೆನ್ನಾಗಿ ಹಿಡಿಯುವಂತೆ ಮಿಶ್ರಣ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ನಿಂಬೆ ಹಣ್ಣಿನ ಚಿತ್ರಾನ್ನ ರೆಡಿಯಾಗುತ್ತದೆ. ಇದು ಅತ್ಯಂತ ಸುಲಭವಾಗಿ ಮಾಡಬಹುದಾದ ಚಿತ್ರಾನ್ನದ ವಿಧಾನವಾಗಿದೆ. ಹಾಗೆ ಹುಡಿ ಹುಡಿಯಾಗಿ ಬರಲಿದೆ. ಇದರ ಜೊತೆಗೆ ನೀವು ಚಟ್ನಿ ಕೂಡ ಮಾಡಿಕೊಂಡು ಅದರ ಜೊತೆಗೂ ಸವಿಯಬಹುದು.



Click it and Unblock the Notifications
