Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಚಪಾತಿ, ಇಡ್ಲಿ, ದೋಸೆ, ಊಟಕ್ಕೂ ಈ ಕೊಲ್ಲಾಪುರ ಸ್ಪೆಷಲ್ ಮಿಕ್ಸ್ ವೆಜ್ ಕರಿ ಮಾಡಿ!
ಬೆಳಗ್ಗೆ ತಿಂಡಿ ಸಮಯದಲ್ಲಿ ಸವಿಯಲು ರುಚಿ ರುಚಿಯ ಖಾದ್ಯದೊಂದಿಗೆ ಚಟ್ನಿ, ಪಲ್ಯ, ಸಾಂಬಾರ್ ಸೇರಿದಂತೆ ಹಲವು ರೀತಿ ಖಾದ್ಯ ಮಾಡುವುದು ಕಾಮನ್. ಅದ್ರಲ್ಲೂ ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನದ ಊಟಕ್ಕೆ ಎರಡಕ್ಕೂ ಸೇರಿಸಿ ಮಾಡುವ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಸಮಯವೂ ಉಳಿತಾಯವಾಗುತ್ತೆ.
ಸಮಯ ಉಳಿಸುವ ದೃಷ್ಟಿಯಿಂದ ಈ ರೀತಿ ಎರಡು ಹೊತ್ತಿಗೂ ಸಾಕಾಗುವಂತಹ ಖಾದ್ಯವನ್ನು ಮಾಡುವುದು ಸಾಮಾನ್ಯ. ಊಟದೊಂದಿಗೆ ಸವಿಯಲು ನಾವಿಂದು ರುಚಿ ರುಚಿಯಾದ ಮಹಾರಾಷ್ಟ್ರ ಸ್ಪೆಷಲ್ ಮಿಕ್ಸ್ ಸಾಂಬಾರ್ ಖಾದ್ಯ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಮಾಹಾರಾಷ್ಟ್ರವು ಹಲವು ರೀತಿ ಖಾದ್ಯಗಳಿಗೆ ಬಹಳ ಫೇಮಸ್ ಅದ್ರಲ್ಲೂ ಈ ಕೊಲ್ಲಾಪುರ ಪ್ರದೇಶದಲ್ಲಿ ರುಚಿ ರುಚಿಯಾಗಿ ಮಾಡುವ ಮಿಶ್ರ ತರಕಾರಿಯ ರೆಸಿಪಿ ಬಹಳ ರುಚಿ ನೀಡಲಿದೆ.

ಕೊಲ್ಲಾಪುರ ಇಂತಹ ಹಲವು ಖಾದ್ಯಗಳಿಗೆ ಫೇಮಸ್ ಆಗಿದೆ. ಅಲ್ಲಿನ ಪ್ರತಿಯೊಂದು ಖಾದ್ಯಗಳು ಕೂಡ ಬಹಳ ರುಚಿ ನೀಡಲಿದೆ. ಹಾಗೆ ಈ ಮಿಕ್ಸ್ ತರಕಾರಿ ರೆಸಿಪಿಯು ಎಲ್ಲಾ ಖಾದ್ಯಗಳೊಂದಿಗೆ ರುಚಿ ಹೆಚ್ಚಿಸಲಿದೆ. ಊಟದೊಂದಿಗೂ ಕೂಡ ಈ ಮಿಶ್ರ ತರಕಾರಿಯ ಖಾದ್ಯವು ರುಚಿ ತರಲಿದೆ. ಹಾಗೆ ಇದನ್ನು ಮಾಡುವುದು ಕೂಡ ಬಹಳ ಸುಲಭ.
ಹೀಗಾಗಿ ನಾವಿಂದು ಕೊಲ್ಲಾಪುರದ ಫೇಮಸ್ ಮಿಶ್ರ ತರಕಾರಿ ರೆಸಿಪಿಯನ್ನು ಮಾಡಿ ಸವಿಯುವ ಕುರಿತು ತಿಳಿಯೋಣ. ಹಾಗಾದ್ರೆ ಈ ಮಿಕ್ಸ್ ತರಕಾರಿ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಿಕ್ಸ್ ತರಕಾರಿ ಸಾಂಬಾರ್ ಮಾಡುವ ವಿಧಾನವೇನು? ಮಿಕ್ಸ್ ತರಕಾರಿ ಸಾಂಬಾರ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕೊಲ್ಲಾಪುರ ಸ್ಪೆಷಲ್ ಮಿಕ್ಸ್ ತರಕಾರಿ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು
ಬೇಕು?
- ಪನೀರ್
- ಕ್ಯಾರೆಟ್
- ಹೂಕೋಸು
- ಬೀನ್ಸ್
- ಈರುಳ್ಳಿ
- ಟೊಮೆಟೋ
- ಬೆಳ್ಳುಳ್ಳಿ
- ಹಸಿ ಶುಂಠಿ
- ಜೀರಿಗೆ ಕರಿಬೇವು
- ಇಂಗು
- ಲವಂಗ
- ಏಲಕ್ಕಿ
- ದಾಲ್ಚಿನ್ನಿ
- ಬಟಾಣಿ
- ಕ್ಯಾಪ್ಸಿಕಂ
- ಪಲಾವ್ ಎಲೆ
- ಕಾಳು ಮೆಣಸು
- ರುಚಿಗೆ ತಕ್ಕಷ್ಟು ಉಪ್ಪು
- ಕೊತಂಬರಿ ಸೊಪ್ಪು
- ಖಾರದ ಪುಡಿ
- ಧನಿಯಾ ಪುಡಿ
- ಗರಂ ಮಸಾಲ
- ಅರಶಿಣ
- ಕಸೂರಿ ಮೇಥಿ
ಕೊಲ್ಲಾಪುರ ಸ್ಪೆಷಲ್ ಮಿಕ್ಸ್ ತರಕಾರಿ ಸಾಂಬಾರ್ ಮಾಡುವ ಸುಲಭದ ವಿಧಾನವೇನು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಳಿಕ ಜೀರಿಗೆ, ಲವಂಗ, ಕಾಳು ಮೆಣಸು, ದಾಲ್ಚಿನ್ನಿ, ಪಲಾವ್ ಎಲೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಇದಕ್ಕೆ ಇಂಗು ಸಹ ಹಾಕಿಕೊಳ್ಳಿ ಈಗ ದೊಡ್ಡ ಗಾತ್ರದ ಒಂದು ಈರುಳ್ಳಿ ಹೆಚ್ಚಿಕೊಂಡು ಹಾಕಿ.
ಜೊತೆಗೆ ಇದಕ್ಕೆ ಶುಂಠಿ ಬೆಳ್ಳುಳ್ಳಿ ಹಾಕಿಕೊಳ್ಳಿ. ನಂತರ ಹಸಿ ಮೆಣಸು, ಕರಿಬೇವು, ಟೊಮೆಟೋ, ಅರಶಿಣ, ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ. 2ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಿ.
ಈಗ ಎಲ್ಲಾ ಹುರಿದ ಪದಾರ್ಥಗಳ ತೆಗೆದು ಒಂದು ಬೌಲ್‌ಗೆ ಹಾಕಿ ತಣ್ಣಗಾಗಲು ಬಿಟ್ಟು ಅದೇ ಬಾಣಲೆಗೆ ಮತ್ತೆ ಎಣ್ಣೆ ಹಾಕಿಕೊಳ್ಳಿ. ಈಗ ಈ ಎಣ್ಣೆ ಹೆಚ್ಚಿಕೊಂಡಿರುವ ಎಲ್ಲಾ ತರಕಾರಿಗಳನ್ನು ಹಾಕಿಕೊಳ್ಳಿ. ಚೆನ್ನಾಗಿ 2 ನಿಮಿಷ ಹುರಿದುಕೊಳ್ಳಿ. ಈಗ ತರಕಾರಿ ಕೆಳಗಿಳಿಸಿಕೊಳ್ಳಿ. ಈ ಮೊದಲು ಹುರಿದುಕೊಂಡ ಮಸಾಲೆಗಳು ತಣ್ಣಗಾಗಿದ್ದರೆ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ.
ಇದಕ್ಕೆ ನೀರು ಹಾಕದೆಯೇ ನುಣ್ಣಗೆ ರುಬ್ಬಿಕೊಳ್ಳಿ. ಈಗ ಮತ್ತೆ ಬಾಣಲೆಯನ್ನು ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ. ಇದಕ್ಕೆ ಖಾರದ ಪುಡಿ ಹಾಕಿ ಮಿಶ್ರಣ ಮಾಡಿ. ಹಾಗೆ ಇದಕ್ಕೆ ರುಬ್ಬಿಕೊಂಡಿದ್ದ ಮಸಾಲೆ ಪೇಸ್ಟ್ ಅನ್ನು ಹಾಕಿ ಮಿಕ್ಸ್ ಮಾಡಿ. ಧನಿಯಾ ಪುಡಿ, ಅರಶಿಣ, ಗರಂ ಮಸಾಲ, ಕಸೂರಿ ಮೇಥಿ, ಉಪ್ಪು ಹಾಕಿಕೊಂಡು 1 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಹಾಕಿ ಮುಚ್ಚಳ ಮುಚ್ಚಿ ಕುದಿಬರಲು ಬಿಡಿ.
ಈಗ ಹುರಿದುಕೊಂಡಿದ್ದ ತರಕಾರಿ ಹಾಗೂ ಹೆಚ್ಚಿಕೊಂಡಿದ್ದ ಪನೀರ್ ಅನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಗಟ್ಟಿಯಾಗಿದ್ದರೆ ಬಿಸಿ ನೀರು ಹಾಕಿಕೊಂಡಿ ಕೊತ್ತಂಬರಿ ಸೊಪ್ಪು ಹಾಕಿ 5 ನಿಮಿಷ ಕುದಿಬರಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮಿಕ್ಸ್ ತರಕಾರಿ ಸಾಂಬಾರ್ ರೆಸಿಪಿ ಸಿದ್ದವಾಗುತ್ತೆ. ನೀವು ಕೂಡ ಮಾಡಿ ಸವಿದು ನೋಡಿ.



Click it and Unblock the Notifications
