Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಹಬ್ಬದಲ್ಲಿ ಮಾಡಿ ಈ ಸ್ಪೆಷಲ್ ಕರ್ಜಿಕಾಯಿ..! ತಿಂಗಳ ಕಾಲ ಇಡಬಹುದು..!
ಹಿಂದೂಗಳ ಯಾವುದೇ ಹಬ್ಬ ಇರಲಿ. ಅಲ್ಲಿ ಒಂದು ಸಿಹಿ ತಿಂಡಿ ಅಂತು ಇದ್ದೇ ಇರುತ್ತೆ. ಮಕ್ಕಳ ಪಾಲಿಗೆ ಹಬ್ಬದಂದು ಸಿಹಿ ತಿಂಡಿ ಇದ್ದರೇನೆ ಆ ಹಬ್ಬಕ್ಕೆ ಕಳೆ ಬರುವುದು. ಅದರಲ್ಲೂ ಎಲ್ಲಾ ಹಬ್ಬದಲ್ಲೂ ತಿಂಡಿ ಮಾಡಿ ಪೂಜೆ ಸಲ್ಲಿಸಿ ಆದ ಬಳಿಕವೇ ಎಲ್ಲರು ತಿಂಡಿ ಸವಿಯುತ್ತಾರೆ. ಹೀಗಾಗಿ ಹಬ್ಬದಲ್ಲಿ ಅಚ್ಚುಮೆಚ್ಚಿನ ತಿಂಡಿ ಮಾಡಿಯೇ ಮಾಡುತ್ತಾರೆ.
ಹಬ್ಬದಲ್ಲಿ ತಿಂಡಿ ಮಾಡುವುದು ಅಂದ್ರೆ ಅಲ್ಲಿ ಹತ್ತಾರು ವಿಧಗಳಿವೆ. ಹತ್ತಾರು ರುಚಿಯ ತಿಂಡಿಗಳ ಮಾಡುವುದು ಸಹ ಉಂಟು. ಅದರಲ್ಲೂ ಹಬ್ಬದಲ್ಲಿ ಮನೆಗೆ ಬರುವ ಮಕ್ಕಳಿಗೆ, ಸಂಬಂಧಿಕರಿಗೆ ಮನೆಯಲ್ಲಿ ಮಾಡಿರುವ ಸಿಹಿ ತಿಂಡಿಯನ್ನು ಅವರ ಜೊತೆಗೆ ಕಳುಹಿಸುತ್ತಾರೆ. ಇದಕ್ಕಾಗಿಯೇ ಬಹಳ ದಿನ ಇಟ್ಟು ಸವಿಯಬಹುದಾದ ತಿಂಡಿಗಳ ಮಾಡುತ್ತಾರೆ.

ಹೀಗಾಗಿ ಹೆಚ್ಚು ದಿನ ಇಟ್ಟು ಸವಿಯಬಹುದಾದ ಕರ್ಜಿಕಾಯಿ ಎಲ್ಲರ ಮನೆಯ ಸಿಹಿ ತಿಂಡಿ ಆಗಿರುತ್ತೆ. ಆದರೆ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯ ಕರ್ಜಿಕಾಯಿ ಮಾಡಬಹುದು, ಹಾಗೆ ನಾವಿಂದು ಸ್ಪೆಷಲ್ ರುಚಿಯಲ್ಲಿ ಕರ್ಜಿಕಾಯಿ ಮಾಡುವ ಕುರಿತು ತಿಳಿದುಕೊಳ್ಳೋಣ. ಹಾಗೆ ಈ ಸ್ಪೆಷಲ್ ಕರ್ಜಿಕಾಯಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟಯ ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸ್ಪೆಷಲ್ ಕರ್ಜಿಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೈದಾ ಹಿಟ್ಟು
- ಚಿರೋಟಿ ರವೆ
- ಉಪ್ಪು
- ಸಕ್ಕರೆ ಅಥವಾ ಬೆಲ್ಲ
- ತುಪ್ಪ
- ಎಣ್ಣೆ
- ಕೊಬ್ಬರಿ ತುರಿ
- ಏಲಕ್ಕಿ ಪುಡಿ
- ಬಿಳಿ ಎಳ್ಳು
ಸ್ಪೆಷಲ್ ಕರ್ಜಿಕಾಯಿ ಮಾಡುವುದು ಹೇಗೆ?
ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಚಿರೋಟಿ ರವೆ ಹಾಕಿಕೊಳ್ಳಿ, ಇದಕ್ಕೆ ಉಪ್ಪು, 2 ಸ್ಪೂನ್ ತುಪ್ಪ ಅಥವಾ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿನಂತೆ ಮೃದುವಾಗಿ ನಾದಿಕೊಳ್ಳಬೇಕು. ನಿಧಾನವಾಗಿ ಹಿಟ್ಟು ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿ ಇಡಿ.
ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಚಿರೋಟಿ ರವೆ ಹಾಕಿ ಹುರಿದುಕೊಳ್ಳಬೇಕು. ಇದಕ್ಕೆ 2 ಚಮಚ ಹಾಕಿ ಹುರಿದುಕೊಳ್ಳಿ. ಬಳಿಕ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಇದೇ ಪಾತ್ರೆಗೆ ಬಿಳಿ ಎಳ್ಳು ಹಾಕಿ ಕೆಂಪಗೆ ಆಗುವವರೆಗೂ ಹುರಿದು ರವೆಗೆ ಮಿಕ್ಸ್ ಮಾಡಿ. ನಂತರ ಇದಕ್ಕೆ ಒಂದೂವರೆ ಕಪ್‌ನಷ್ಟು ಕೊಬ್ಬರಿ ತುರಿ ಹಾಕಿಕೊಳ್ಳಿ.
ಈಗ ಒಂದು ಕಪ್ ಸಕ್ಕರೆ ತೆಗದುಕೊಂಡು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಸಕ್ಕರೆ ಬದಲಿಗೆ ನೀವು ಬೆಲ್ಲ ಸಹ ಬಳಸಬಹುದು. ಸಕ್ಕರೆ ಅಥವಾ ಬೆಲ್ಲ ಪುಡಿ ಮಾಡುವಾಗ ರುಚಿಗೆ ತಕ್ಕಷ್ಟು ಏಲಕ್ಕಿ ಸಹ ಹಾಕಿ ಪುಡಿ ಮಾಡಿ ಹುರಿದ ರವೆ ಬೌಲ್‌ಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಹೂರ್ಣ ರೆಡಿಯಾಗುತ್ತದೆ.
ಈಗ ಹಿಟ್ಟನ್ನು ಮತ್ತೆ ನಾದಿಕೊಂಡು ಈಗ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದುಕೊಂಡು ಉಂಡೆ ಮಾಡಿ ಪೂರಿಯಂತೆ ಲಟ್ಟಿಸಿಕೊಳ್ಳಿ. ಮೈದಾ ಹಿಟ್ಟು ಹಾಕಿ ಲಟ್ಟಿಸಿಕೊಳ್ಳಿ. ಅಂಗೈಗಿಂತ ಸ್ವಲ್ಪ ದೊಡ್ಡದಾಗಿದ್ದರೆ ಸಾಕು. ನಿಮ್ಮಲ್ಲಿ ಕರ್ಜಿಕಾಯಿ ಅಚ್ಚು ಇದ್ದರೆ ಇನ್ನಷ್ಟು ಸುಲಭವಾಗುತ್ತೆ. ಇಲ್ಲದಿದ್ದರೆ ಹೂರ್ಣವನ್ನು ಮಧ್ಯದಲ್ಲಿ ಇಟ್ಟು ಒಂದು ಬದಿಯಿಂದ ಮಡಚಿಕೊಂಡು ತುದಿಯನ್ನು ಸ್ವಲ್ಪ ಒತ್ತಿ ಗಮ್ ಮಾಡಿಕೊಂಡರೆ ಆಯಿತು. ಹೀಗೆ ಎಲ್ಲಾ ಕರ್ಜಿಕಾಯಿ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಇಟ್ಟುರುವ ಪಾತ್ರೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಒಂದೊಂದೇ ಎಣ್ಣೆಗೆ ಬಿಟ್ಟು ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸ್ಪೆಷಲ್ ರುಚಿಯ ಕರ್ಜಿಕಾಯಿ ರೆಡಿಯಾಗುತ್ತೆ.



Click it and Unblock the Notifications