Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ಮೂರೇ ಮೂರು ವಸ್ತು ಇದ್ರೆ ಈ ಕಜ್ಜಾಯ ರೆಡಿಯಾಗುತ್ತೆ..! ಅದ್ಭುತ ರುಚಿ ಇರುತ್ತೆ!
ಮನೆಯಲ್ಲಿ ಏನಾದರು ಶುಭ ಕಾರ್ಯ ಅಥವಾ ಹಬ್ಬ ಇದ್ದರೆ ಯಾವುದಾದರೊಂದು ಸಿಹಿ ತಿಂಡಿ ಮಾಡುತ್ತೇವೆ. ಇನ್ನು ದೀಪಾವಳಿಯಲ್ಲಿ ಸಿಹಿ ಮಾಡದೆ ಇರಲು ಸಾಧ್ಯವೇ ಇಲ್ಲ. ಮನೆ ಮಂದಿಯಲ್ಲ ಕುಳಿತು ಸವಿಯುವಂತಹ ತಿಂಡಿ ಅಂದ್ರೆ ಅದು ಕಜ್ಜಾಯ. ಮಕ್ಕಳಿಂದ ಹಿಡಿದು ಹಿರಿಯರು ಕೂಡ ಕಜ್ಜಾಯ ಸವಿಯಲು ಇಷ್ಟಪಡುತ್ತಾರೆ.
ಈ ದೀಪಾವಳಿಯಲ್ಲಿ ಮನೆಯಲ್ಲಿ ಕಜ್ಜಾಯ ಮಾಡಿ ನೋಡಿ. ಆದ್ರೆ ಯವಾಗಲು ಮಾಡುವಂತೆ ಸಿಂಪಲ್ ಕಜ್ಜಾಯದ ಬದಲು ಸ್ಪೆಷಲ್ ರುಚಿಯಲ್ಲಿ ಮಾಡುವಂತಹ ಕಜ್ಜಾಯವನ್ನ ಒಮ್ಮೆ ಟ್ರೈ ಮಾಡಿ. ಈ ದೀಪಾವಳಿಯ ಸಮಯದಲ್ಲಿ ನೀವು ಅದ್ಭುತ ರುಚಿಯ ಕಜ್ಜಾಯ ನಿಮ್ಮ ಹಬ್ಬದ ಸಡಗರ ದುಪ್ಪಟ್ಟಾಗಿಸಲಿದೆ.

ಹಾಗೆ ಈ ಕಜ್ಜಾಯ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸ್ಪೆಷಲ್ ಕಜ್ಜಾಯ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಬೆಲ್ಲ
- ಗಸೆಗಸೆ
- ಏಲಕ್ಕಿ ಪುಡಿ
- ಬಿಳಿ ಎಳ್ಳು
- ಎಣ್ಣೆ
ಸ್ಪೆಷಲ್ ಕಜ್ಜಾಯ ಮಾಡುವುದು ಹೇಗೆ?
ಮೊದಲು ಒಂದು ಕಪ್‌ನಲ್ಲಿ ಎರಡು ಕಪ್ ಅಕ್ಕಿ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ಈ ಕಪ್ ಅನ್ನು ಅಳತೆಯಾಗಿ ಇಟ್ಟುಕೊಳ್ಳಿ. ನಂತರ ಈ ಅಕ್ಕಿಯನ್ನು 2 ದಿನ ನೆನೆಸಿಡಬೇಕು. ಪ್ರತಿದಿನ ಈ ನೀರನ್ನು ಬದಲಾಯಿಸುತ್ತಿರಬೇಕು. 2 ದಿನದ ಬಳಿಕ ನೀರಿನಿಂದ ಅಕ್ಕಿಯನ್ನು ಬೇರೆ ಮಾಡಿ ಕಾಟನ್ ಬಟ್ಟೆ ಮೇಲೆ ಅಕ್ಕಿಯನ್ನು ತೆಳುವಾಗಿ ಹರಡಿಕೊಳ್ಳಿ.
ನಂತರ ಬಿಸಿಲಿನಲ್ಲಿ ಅಥವಾ ಫ್ಯಾನ್‌ನ ಅಡಿಯಲ್ಲಿ 15 ನಿಮಿಷ ಇಡಬೇಕು. ಇದರಲ್ಲಿನ ನೀರಿನ ಅಂಶ ಚೆನ್ನಾಗಿ ಡ್ರೈ ಆಗಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಒಣ ಕೊಬ್ಬರಿ ತುರಿಯನ್ನು ಹಾಕಿಕೊಂಡು ಪೌಡರ್ ಮಾಡಿಕೊಳ್ಳಿ. ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಬಿಳಿ ಎಳ್ಳು, ಗಸೆಗಸೆ ಹಾಕಿಕೊಂಡು ಫ್ರೈ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಸ್ವಲ್ಪ ಬೆಲ್ಲ ತೆಗೆದುಕೊಂಡು ಅದನ್ನು ಒಲೆ ಮೇಲೆ ಇಟ್ಟು ಸ್ವಲ್ಪ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಕರಗಿದ ಬಳಿಕ ಅದನ್ನು ತೆಗೆದಿಟ್ಟುಕೊಳ್ಳಿ. ಈಗ ಒಣಗಿರುವ ಅಕ್ಕಿಯನ್ನು ಒಂದು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ, ಆದಷ್ಟು ನುಣ್ಣಗೆ ಪುಡಿ ಮಾಡಿ. ನಂತರ ಜರಡಿ ಹಿಡಿದು ನುಣ್ಣಗಿರುವ ಪೌಡರ್ ಅನ್ನು ತೆಗೆದುಕೊಳ್ಳಿ.
ಈಗ ಬೆಲ್ಲದ ಪಾಕ ಸ್ವಲ್ಪ ಗಟ್ಟಿಯಾಗುವಂತೆ ಕಾಯಿಸಿಕೊಳ್ಳಿ. ಕೈಯಲ್ಲಿ ಉಂಡೆ ಮಾಡುವಂತೆ ಇರಬೇಕು. ನಂತರ ಇದೇ ಪಾಕಕ್ಕೆ ಹುರಿದುಕೊಂಡ ಗಸೆಗಸೆ ಪೌಡರ್ ಇಂದ ಹಿಡಿದು ಎಲ್ಲಾ ಪುಡಿಯನ್ನು ಸೇರಿಸಿಕೊಳ್ಳಿ. ನಂತರ ಇದಕ್ಕೆ ಜರಡಿ ಹಿಡಿದ ಅಕ್ಕಿ ಹಿಟ್ಟನ್ನು ಸಹ ಸ್ವಲ್ಪ ಸ್ವಲ್ಪ ಹಾಕುತ್ತಾ ಮಿಕ್ಸ್ ಮಾಡಿಕೊಳ್ಳಿ.
ಹಿಟ್ಟು ಗಂಟು ಆಗದಂತೆ ನಿರಂತರವಾಗಿ ತಿರುಗಿಸುತ್ತಾ ಇರಬೇಕು. 5 ನಿಮಿಷಗಳ ಕಾಲ ಹದ ಬರುವಷ್ಟು ಹೊತ್ತು ತಿರುಗಿಸುತ್ತಾ ಇರಿ ನಂತರ ಒಲೆ ಆಫ್ ಮಾಡಿ ಮುಚ್ಚಳ ಮುಚ್ಚಿ 30 ನಿಮಿಷ ಬಿಡಿ. ನಂತರ ಮುಚ್ಚಳ ತೆಗೆದು ಇದರ ಮೇಲೆ ಒಂದು ಸ್ಪೂನ್ ಎಣ್ಣೆ ಹಾಕಿ ಒಂದು ರಾತ್ರಿ ಬಿಡಬೇಕು.
ಈಗ ಈ ಹಿಟ್ಟನ್ನು ತೆಗೆದುಕೊಂಡು ಕೈಯಲ್ಲು ಉಂಡೆ ಮಾಡಿಕೊಳ್ಳಬೇಕು. ನಂತರ ಕೈಯಲ್ಲಿ ತಟ್ಟಿಕೊಂಡು ದಪ್ಪವಾಗಿ ತಟ್ಟಿಕೊಳ್ಳಬೇಕು. ನಂತರ ಒಲೆ ಮೇಲೆ ಕಾದಿರುವ ಎಣ್ಣೆಗೆ ಇದನ್ನು ಬಿಡಬೇಕು. ಒಂದು ಕಡೆ ಸಂಪೂರ್ಣ ಕಾದ ಬಳಿಕ ಇನ್ನೊಂದು ಕಡೆ ತಿರುಗಿಸಿ ಕಾಯಿಸಿಕೊಳ್ಳಿ ಒಂದೊಂದೆ ಕಜ್ಜಾಯ ಮಾಡಿ ಕಾಯಿಸಿಕೊಳ್ಳ. ಇಷ್ಟಾದರೆ ಕಜ್ಜಾಯ ರೆಡಿಯಾಗುತ್ತದೆ. ಹಬ್ಬಕ್ಕೆ ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications
