Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಮೂಲಿ ಅಲ್ಲ ಇದು ಹೈದ್ರಾಬಾದಿ ಗೀ ರೈಸ್; ಬಿರಿಯಾನಿಗಿಂತ ರುಚಿಕರ, ಮಾಡೋದು ಸುಲಭ!
ನೀವು ಸ್ಪೆಷಲ್ ಖಾದ್ಯಗಳ ಮಾಡಿ ಸವಿಯುವ ಅಭ್ಯಾಸ ಹೊಂದಿದ್ದರೆ, ಬೆಳಗ್ಗೆ ತಿಂಡಿಗೆ, ಊಟದ ಸಮಯದಲ್ಲಿ ಹಲವು ರೀತಿಯ ಖಾದ್ಯಗಳ ಮಾಡಿರಬಹುದು. ಅದ್ರಲ್ಲೂ ವಿಶೇಷ ರುಚಿ ನೀಡುವ ಪದೇ ಪದೇ ಮನಯೆಲ್ಲಿ ಮಾಡಿ ಸವಿಯಬೇಕು ಎನಿಸುವಂತಹ ಹಲವು ರುಚಿಕರ ಖಾದ್ಯಗಳನ್ನು ಮಾಡಿರುತ್ತೀರಿ. ನಾವಿಂದು ಸುಲಭವಾಗಿ ಮಾಡುವ ಗೀ ರೈಸ್ ಮಾಡುವ ಕುರಿತು ತಿಳಿಯೋಣ.
ಆದ್ರೆ ಈ ಗೀ ರೈಸ್ ನೀವು ನಾವು ಮಾಡುವ ಸಾಮಾನ್ಯ ಶೈಲಿಯ ರೆಸಿಪಿಯಲ್ಲ ಬದಲಿದೆ. ನಾವಿಂದು ಹೈದರಾಬಾದಿ ಗೀರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಇದು ನಾರ್ಮಲ್ ಗೀ ರೈಸ್ ಅಲ್ಲ ಬದಲಿಗೆ ಇದು ಅದ್ಭುತ ಬಿರಿಯಾನಿ ರುಚಿಯ ಹೈದ್ರಾಬಾದಿ ಗೀ ರೈಸ್ ಆಗಿದೆ. ಇದನ್ನು ಬಹಳ ಸುಲಭವಾಗಿ ಮಾಡಿ ಮುಗಿಸಬಹುದು.

ಹಾಗೆ ಈ ಗೀ ರೈಸ್ ಅನ್ನು ಎಲ್ಲರು ಸಹ ಇಷ್ಟಪಟ್ಟು ಸವಿಯುತ್ತಾರೆ. ಮಧ್ಯಾಹ್ನದ ಊಟಕ್ಕೆ ಅಥವಾ ಬೆಳಗ್ಗೆ ತಿಂಡಿಗೂ ಈ ಗೀ ರೈಸ್ ಬಹಳ ರುಚಿಕರ ಖಾದ್ಯ ಆಗಿರಲಿದೆ. ನೀವು ಸಹ ಇದನ್ನು ಮನೆಯಲ್ಲಿ ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಮನೆಯಲ್ಲಿ ಈ ಹೈದ್ರಾಬಾದಿ ಗೀ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಹೈದ್ರಾಬಾದಿ ಗೀ ರೈಸ್ ಮಾಡಲು ಯಾವೆಲ್ಲಾ ವಸ್ತಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿಯೋಣ.
ಹೈದ್ರಾಬಾದಿ ಗೀರೈಸ್ ಮಾಡಲು ಬೇಕಾಗುವ ವಸ್ತುಗಳು
- ಬಾಸ್ಮತಿ ಅಕ್ಕಿ
- ತುಪ್ಪ - 1 ಚಮಚ
- ಎಣ್ಣೆ - 1 ಚಮಚ
- ಗೋಡಂಬಿ
- ಬಿರಿಯಾನಿ ಮಸಾಲೆ
- ಜೀರಿಗೆ
- ಹಸಿ ಮೆಣಸಿನಕಾಯಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಈರುಳ್ಳಿ - 1
- ಪುದೀನ ಎಲೆ
- ಕೊತ್ತಂಬರಿ ಸೊಪ್ಪು
- ಉಪ್ಪು
ಹೈದ್ರಾಬಾದಿ ಗೀರೈಸ್ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಒಂದು ಬೌಲ್‌ಗೆ ಅಳತೆ ಕಪ್‌ನಲ್ಲಿ ಅಕ್ಕಿಯನ್ನು ಹಾಕಿಕೊಂಡು 2 ಬಾರಿ ತೊಳೆದು ನಂತರ 2 ಗಂಟೆಯಾದರು ಈ ಅಕ್ಕಿಯನ್ನು ನೆನೆಸಿಡಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿಕೊಂಡು ಗೋಡಂಬಿ, ಸೋಂಪು, ಬಿರಿಯಾನಿ ಎಲೆ, ಲವಂಗ, ಜೀರಿಗೆ ಚಕ್ಕೆ, ಏಲಕ್ಕಿ ಹಾಕಿಕೊಳ್ಳಿ.
ಹಾಗೆ ಇದಕ್ಕೆ ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಉದ್ದುದ್ದ ಕತ್ತರಿಸಿಕೊಂಡ ಈರುಳ್ಳಿ ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಪುದಿನ ಎಲೆ ಹಾಗೂ ಕೊತ್ತಂಬರಿ ಸೊಪ್ಪು ಇದಕ್ಕೆ ಹಾಕಿ ಫ್ರೈ ಮಾಡಿ. ಈಗ ಅಕ್ಕಿ ತೆಗೆದುಕೊಂಡ ಅಳತೆಯಲ್ಲಿ ಮೂರುವರೆ ಕಪ್ ನೀರು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಬರಲು ಬಿಡಿ.
ನೀರು ಕುದಿಬರುವಾಗ ಇದಕ್ಕೆ ನೆನೆಸಿಟ್ಟ ಅಕ್ಕಿಯನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಬೇಕು. ಹಾಗೆ ಮುಚ್ಚಳ ಮುಚ್ಚಿ 3 ನಿಮಿಷ ಬಿಡಿ. ಹಾಗೆ ಆಗಾಗ ಮುಚ್ಚಳ ತೆಗೆದು ಮಿಕ್ಸ್ ಮಾಡಬೇಕು. ಕುಕ್ಕರ್‌ನಲ್ಲಿ ಮಾಡುವುದಾದರೆ ಅಳೆತೆಗೆ ಸರಿಯಾಗಿ ನೀರು ಹಾಕಿ 3 ಸೀಟಿ ಹೊಡೆಸಿಕೊಳ್ಳಬೇಕು. ತೆರೆದ ಪಾತ್ರೆಯಲ್ಲಾದರೆ ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಹುಡಿ ಹುಡಿಯಾದ ಗೀ ರೈಸ್ ಸಿದ್ದವಾಗುತ್ತೆ. ಕೊನೆಯಲ್ಲಿ ಒಂದು ಸ್ಪೂನ್ ತುಪ್ಪ ಮೇಲೆ ಹಾಕಿ ಮಿಕ್ಸ್ ಮಾಡಿಕೊಂಡು ಸವಿಯಲು ನೀಡಿ. ನೀವು ಸಹ ಈ ಸ್ಪೆಷಲ್ ಹೈದ್ರಾಬಾದಿ ಬಿರಿಯಾನಿ ರುಚಿಯ ಗೀ ರೈಸ್ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
