Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
5 ನಿಮಿಷದಲ್ಲಿ ಚಪಾತಿ, ದೋಸೆ, ರೊಟ್ಟಿಗೆ ಈ ಗ್ರೇವಿ ಮಾಡಿ..! ಎಂಥಾ ರುಚಿ ಇದು ಗೊತ್ತಾ?
ಬೆಳಗ್ಗೆ ತಿಂಡಿಗೆ ನೀವು ಯಾವುದಾದರು ರುಚಿ ರುಚಿಯಾದ ಖಾದ್ಯ ಮಾಡಿದಾಗಲೆಲ್ಲ ಅದರೊಂದಿಗೆ ಸವಿಯಲು ಕೂಡ ಏನಾದರು ರೆಸಿಪಿ ಮಾಡಿರುತ್ತೀರಿ. ಅದರಲ್ಲೂ ಮುಖ್ಯವಾಗಿ ಚಟ್ನಿ, ಪಲ್ಯ, ಗ್ರೇವಿ ಹೀಗೆ ಒಂದಲ್ಲಾ ಒಂದು ರೀತಿಯ ಖಾದ್ಯ ಮಾಡಿ ಸವಿಯುವುದು ನೋಡಬಹುದು. ಇನ್ನು ಚಪಾತಿ, ರೊಟ್ಟಿ, ದೋಸೆಯಂತಹ ತಿಂಡಿ ಮಾಡಿದಾಗ ವಿಶೇಷವಾಗಿ ಯಾವುದಾದರು ಖಾದ್ಯ ಇದ್ದರೇನೆ ಅದರಿಂದ ನಿಮ್ಮ ತಿಂಡಿಗೆ ಬಹಳಷ್ಟು ರುಚಿ ಬರಲಿದೆ.
ಆದ್ರೆ ಎಲ್ಲಾ ಸಮಯದಲ್ಲೂ ನಿಮಗೆ ತಿಂಡಿ ಮಾಡಿದ ಬಳಿಕ ಅದನ್ನು ಸವಿಯಲು ಚಟ್ನಿಯಾಗಲಿ ಅಥವಾ ಗ್ರೇವಿಯನ್ನಾಗಲಿ ಮಾಡಲು ಸಮಯ ಇರುವುದಿಲ್ಲ. ಈ ಸಮಯದಲ್ಲಿ ಹೊಸದಾಗಿ ಏನಾದರು ಸವಿಯಲು ಮುಂದಾಗಬಹುದು. ನಾವಿಂದು ಇಂತಹ ಗಡಿಬಿಡಿಯ ಸಮಯದಲ್ಲೂ ರುಚಿ ರುಚಿಯಾಗಿ ಕೇವಲ 5ರಿಂದ 10 ನಿಮಿಷದ ಸಮಯದಲ್ಲಿ ಮಾಡಿ ಮುಗಿಸಬಹುದಾದ ಗ್ರೇವಿಯ ಕುರಿತು ತಿಳಿಯೋಣ.

ಈ ಗ್ರೇವಿಯನ್ನು ನೀವು ಸುಲಭವಾಗಿ 10 ನಿಮಿಷದಲ್ಲಿ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ಯಾವುದೇ ತಿಂಡಿ ಮಾಡಿರಲಿ, ವಿಶೇಷವಾಗಿ ಚಪಾತಿ, ರೊಟ್ಟಿ, ದೋಸೆಗೆ ಈ ಗ್ರೇವಿ ಮಾಡಿದ್ರೆ ಅದ್ಭುತ ರುಚಿ ನೀಡಲಿದೆ. ನೀವು ಸಹ ಈ ರುಚಿಯಲ್ಲಿ ಗ್ರೇವಿ ಮಾಡಿ ಸವಿಯಲು ಮುಂದಾಗುತ್ತೀರಿ. ಹಾಗೆ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದಾಗಿರುವ ಗ್ರೇವಿ ಇದಾಗಿದೆ.
ಹಾಗಾದ್ರೆ ಈ ಸುಲಭದ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಪಾತಿ, ರೊಟ್ಟಿಗೆ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು
ಈರುಳ್ಳಿ
ಸಾಸಿವೆ
ಜೀರಿಗೆ
ಹಸಿ ಮೆಣಸು
ಉಪ್ಪು
ಎಣ್ಣೆ
ಕಸೂರಿ ಮೇಥಿ
ದನಿಯ ಪುಡಿ
ಖಾರದ ಪುಡಿ
ಜೀರಿಗೆ ಪುಡಿ
ಅರಶಿಣ
ಮೊಸರು
ಕೊತ್ತಂಬರಿ ಸೊಪ್ಪು
ಚಪಾತಿ, ರೊಟ್ಟಿಗೆ ಗ್ರೇವಿ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ಎಣ್ಣೆ ಬಿಸಿಯಾದಾಗ ಅದಕ್ಕೆ ಅರ್ಧ ಸ್ಪೂನ್ ಸಾಸಿವೆ, ಜೀರಿಗೆ. ಹಸಿ ಮೆಣಸು ಹಾಕಿ ಅರ್ಧ ನಿಮಿಷ ಫ್ರೈ ಮಾಡಿ ಬಳಿಕ ಒಂದು ಈರುಳ್ಳಿ ಕತ್ತರಿಸಿಕೊಂಡು ಇದಕ್ಕೆ ಹಾಕಿ ಫ್ರೈ ಮಾಡಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿ ಉರಿ ಹೆಚ್ಚಾಗಿ ಇಟ್ಟುಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ಫ್ರೈ ಆಗಲು ಬಿಡಿ. 1 ನಿಮಿಷ ಬಿಟ್ಟು ನಂತರ ಮುಚ್ಚಳ ತೆಗೆದು ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈಗ ಕಸೂರಿ ಮೇಥಿ ಇದ್ದರೆ ಹಾಕಿಕೊಳ್ಳಿ. ಈ ಉರಿ ಸಣ್ಣಗೆ ಇಟ್ಟುಕೊಂಡು ದನಿಯಾ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ಅರಶಿಣ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹಾಗೆ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಆಗಾಗ ಮಧ್ಯದಲ್ಲಿ ಮಿಕ್ಸ್ ಮಾಡಿಕೊಳ್ಳುತ್ತಾ ಇರಬೇಕು. ಈಗ ಈರುಳ್ಳಿ ಸೇರಿ ಎಲ್ಲಾ ಪದಾರ್ಥಗಳು ಫ್ರೈ ಆದ ಬಳಿಕ ಗ್ಯಾಸ್ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.
ತಣ್ಣಗಾದ ಬಳಿಕ ಈಗ ಗಟ್ಟಿ ಮೊಸರು ಅಥವಾ ಪ್ಯಾಕೆಟ್ನ ಮೊಸರನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಬೇಕು. ಕೊನೆಗೆ ಕೊತ್ತಂಬರಿ ಸೊಪ್ಪು ಹಾಗೆ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಮೊಸರು ಗ್ರೇವಿ ರೆಡಿಯಾಗುತ್ತದೆ. ಬಹಳ ಸುಲಭವಾಗಿ ಮಾಡಿ ಮುಗಿಸಬಹುದು. ಇದನ್ನು ನೀವು ದೋಸೆ, ಚಪಾತಿ, ರೊಟ್ಟಿಯೊಂದಿಗೆ ಸವಿಯಲು ಬಹಳ ರುಚಿಯಾಗಿರಲಿದೆ, ನೀವು ಕೂಡ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇದರ ರುಚಿ ಸವಿದರೆ ನೀವು ಮತ್ತೆ ಮತ್ತೆ ಸವಿಯಲು ಮುಂದಾಗುವುದು ಖಚಿತ.



Click it and Unblock the Notifications
