Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಚಪಾತಿ, ದೋಸೆ, ಊಟಕ್ಕೆ ಬೇರೆ ಬೇರೆ ಅಲ್ಲ ಒಂದೇ ಗ್ರೇವಿ ಸಾಕು..! ಮಾಡೋದು ಬಹಳ ಸುಲಭ
ಮನೆಯಲ್ಲಿ ಊಟ, ತಿಂಡಿಯೊಂದಿಗೆ ಸವಿಯಲು ಹಲವು ಬಗೆಯ ಖಾದ್ಯ ಬಳಸೋದು ನೋಡಬಹುದು. ಹಾಗೆ ಬೆಳಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟ ಮುಗಿಯುವವರೆಗೂ ರುಚಿ ರುಚಿಯ ಖಾದ್ಯಗಳ ಸವಿಯೋದು ನೋಡಬಹುದು. ಹಾಗೆ ಚಪಾತಿ, ರೊಟ್ಟಿ, ದೋಸೆ, ಇಡ್ಲಿ, ಊಟ ಎಲ್ಲದಕ್ಕೂ ರುಚಿ ರುಚಿಯ ಒಂದೇ ಖಾದ್ಯ ಮಾಡಿ ಸವಿಯುವ ಕುರಿತು ನಾವಿಂದು ತಿಳಿಯೋಣ.
ಅದ್ರಲ್ಲೂ ಚಪಾತಿ, ದೋಸೆಯೊಂದಿಗೆ ಹಾಗೆ ಅನ್ನದ ಜೊತೆಗೆ ರುಚಿ ಹೆಚ್ಚಿಸುವ ಸೋಯಾ ಗ್ರೇವಿ ಮಾಡುವ ಕುರಿತು ನಾವಿಂದು ತಿಳಿಯೋಣ. ನೀವು ಕೂಡ ಸೋಯಾ ಚಂಕ್ನಿಂದ ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಸೋಯಾ ಆರೋಗ್ಯಕ್ಕೂ ಬಹಳ ಉತ್ತಮ ಎಂಬುದನ್ನು ತಿಳಿದಿರಬಹುದು.

ಹಾಗಾದ್ರೆ ನಾವಿಂದು ಸೋಯಾ ಗ್ರೇವಿ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಈ ಸೋಯಾ ಗ್ರೇವಿಯು ಬಹಳ ರುಚಿ ರುಚಿಯಾಗಿ ಮಾಡುವ ಸುಲಭದ ವಿಧಾನ ಇಲ್ಲಿದೆ. ಹಾಗಾದ್ರೆ ಈ ಸೋಯಾ ಚಂಕ್ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೋಯಾ ಗ್ರೇವಿ ಮಾಡಲು ಬೇಕಾಗುವ ವಸ್ತುಗಳು
- ಸೋಯಾ ಚಂಕ್
- ಮೊಸರು - 3/4 ಕಪ್
- ಅರಿಶಿನ ಪೌಡರ್ - 1/4 ಟೀಸ್ಪೂನ್
- ಜೀರಾ ಪೌಡರ್ - 1/4 ಟೀಸ್ಪೂನ್
- ಕೆಂಪು ಮೆಣಸಿನಕಾಯಿ ಪುಡಿ - 1 ಟೀಸ್ಪೂನ್
- ಕೊತ್ತಂಬರಿ ಪುಡಿ - 1 ಟೀಸ್ಪೂನ್
- ನೀರು
- ಈರುಳ್ಳಿ
- ಬೆಳ್ಳುಳ್ಳಿ
- ಶುಂಠಿ
- ಹಸಿಮೆಣಸಿನಕಾಯಿ - 2
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಸೋಯಾ ಗ್ರೇವಿ ಮಾಡುವ ವಿಧಾನವೇನು?
ಮೊದಲು ಕುದಿ ಬರುವ ನೀರಿನಲ್ಲಿ ಸೋಯಾ ಚಂಕ್ ಹಾಕಿ 10 ನಿಮಿಷ ಬಿಟ್ಟು ನೀರನ್ನು ಹಿಂಡಿಕೊಂಡು ಎತ್ತಿಟ್ಟುಕೊಳ್ಳಬೇಕು. ಹಾಗೆ ಒಂದು ಬೌಲ್ಗೆ ಮೊಸರು ಹಾಕಿಕೊಂಡು ಅದೇ ಮೊಸರಿಗೆ ಖಾರದ ಪುಡಿ, ಉಪ್ಪು, ಧನಿಯಾ ಪುಡಿ, ಜೀರಿಗೆ ಹಾಗೂ ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಮೊಸರಿಗೆ ಸ್ವಲ್ಪ ನೀರು ಕೂಡ ಹಾಕಿ ಮಿಕ್ಸ್ ಮಾಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಳಿಕ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಇದೆಲ್ಲಾ ತೆಗೆದು ತಣ್ಣಗಾಗಲು ಬಿಟ್ಟು ನಂತರ ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ರುಬ್ಬಿಕೊಂಡಿರುವ ಈ ಮಸಾಲೆಯನ್ನು ಹಾಕಿಕೊಳ್ಳಿ. 1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಮೊಸರಿನ ಮಿಶ್ರಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಈ ಮಿಶ್ರಣಕ್ಕೆ ಉಪ್ಪು ಹಾಕಿ ಕುದಿಬರಲು ಬಿಡಿ. ನಂತರ ಇದಕ್ಕೆ ನೆನೆಸಿಟ್ಟಿದ್ದ ಸೋಯಾ ಚಂಕ್ ಅನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅನಂತರ ಸ್ವಲ್ಪ ನೀರು ಸಹ ಹಾಕಿ ಮಿಕ್ಸ್ ಮಾಡಿ. ಕುದಿಬಂದಷ್ಟು ಇದು ಗಟ್ಟಿಯಾಗುತ್ತದೆ. ಹೀಗಾಗಿ ನೀರು ಹೆಚ್ಚಾಗಿ ಬಳಸಿ. ಇದನ್ನು 3 ರಿಂದ 4 ನಿಮಿಷ ಕುದಿಬರಲು ಬಿಡಬೇಕು. ಆಗಾಗ ಮಿಕ್ಸ್ ಮಾಡುತ್ತಾ ಇರಿ.
ಕೊನೆಯಲ್ಲಿ ಗರಂ ಮಸಾಲೆ ಹಾಕಿಕೊಂಡು, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಸೋಯಾ ಗ್ರೇವಿ ಸಿದ್ದವಾಗುತ್ತೆ.



Click it and Unblock the Notifications
