Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಒಂದು ಹನಿ ಸಾಸ್ ಬಳಸದೆ ಎಗ್ ರೈಸ್ ಮಾಡೋದು ಹೇಗೆ? ಇಲ್ಲಿದೆ ವಿಧಾನ
ರಸ್ತೆ ಬದಿ ಅಂಗಡಿಗಳಲ್ಲಿ ಸಿಗುವ ಎಗ್ ರೈಸ್ ಸವಿಯೋಕೆ ಯಾರಿಗೆ ಇಷ್ಟವಿಲ್ಲ ಹೇಳಿ. ಕೆಲವರು ನಿತ್ಯ ಈ ಎಗ್ ರೈಸ್ ಸವಿಯಲು ಮುಂದಾಗುತ್ತಾರೆ. ಸಂಜೆ ಸಮಯದಲ್ಲಂತೂ ಈ ಎಗ್ ರೈಸ್ ಅಂಗಡಿಗಳು ಜನರಿಂದ ತುಂಬಿರುತ್ತವೆ. ಆದ್ರೆ ಈ ರಸ್ತೆ ಬದಿಯಲ್ಲಿ ನೀವು ಸವಿಯುವ ಎಗ್ ರೈಸ್ ಬಹಳ ರುಚಿಕರವಾಗಿದ್ದರೂ ಅದಕ್ಕೆ ಹತ್ತಾರು ಬಗೆಯ ಮಸಾಲೆ ಹಾಕಿರುತ್ತಾರೆ.
ಮಸಾಲೆಗಳ ಜೊತೆಗೆ ಒಂದಿಷ್ಟು ಸಾಸ್ಗಳು, ಟೇಸ್ಟಿಂಗ್, ಸೋಡಾ ಹೀಗೆ ಎಲ್ಲಾ ವಸ್ತು ಅದರಲ್ಲಿ ಬೆರೆತಿರುತ್ತದೆ. ಇವೆಲ್ಲಾ ವಸ್ತುಗಳು ಇದ್ದರೇನೆ ರುಚಿ ಹೆಚ್ಚಾಗೋದು. ಅದರಲ್ಲೂ ಈ ಮಸಾಲೆಗಳು ಆರೋಗ್ಯಕ್ಕೆ ಅಷ್ಟೊಂದು ಉತ್ತಮವೂ ಅಲ್ಲ. ಆದ್ರೆ ನಾವಿಂದು ಕಡಿಮೆ ಮಸಾಲೆ ಪದಾರ್ಥಗಳ ಬಳಸಿ, ಸಾಸ್ ಬಳಸದೆಯೇ ಈ ರುಚಿ ರುಚಿಯ ಎಗ್ ರೈಸ್ ಮಾಡುವ ಕುರಿತು ತಿಳಿಯೋಣ.

ಹೌದು ಒಂದು ಹನಿ ಸಾಸ್ ಬಳಸದೆ ಮನೆಯಲ್ಲಿ ಸುಲಭವಾಗಿ ಆರೋಗ್ಯಕರ ಎಗ್ ರೈಸ್ ಮಾಡುವ ಕುರಿತು ಇಲ್ಲಿ ತಿಳಿದುಕೊಳ್ಳೋಣ. ಹೀಗೆ ಮಾಡೋದು ನಿಮ್ಮ ಮಕ್ಕಳಿಗೂ ಇಷ್ಟವಾಗುತ್ತೆ, ಅವರ ಆರೋಗ್ಯಕ್ಕೂ ಯಾವ ಹಾನಿಯೂ ಇಲ್ಲ. ಹಾಗಾದ್ರೆ ಈ ರೈಸ್ ಮಾಡುವುದು ಹೇಗೆ ನೋಡೋಣ.
ಸಾಸ್ ಬಳಸದೆ ಎಗ್ ರೈಸ್ ಮಾಡುವುದು ಹೇಗೆ? ಈ ಎಗ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಾಸ್ ಬಳಸದೆ ಮಾಡುವ ಎಗ್ ರೈಸ್ಗೆ ಯಾವೆಲ್ಲಾ ವಸ್ತು ಬೇಕು?
- ಮೊಟ್ಟೆ-4ರಿಂದ 5
- ಅನ್ನ
- ಈರುಳ್ಳಿ-3
- ಹಸಿರು ಮೆಣಸಿನಕಾಯಿ-3
- ಟೊಮೆಟೋ-1
- ಖಾರದ ಪುಡಿ
- ಗರಂ ಮಸಾಲ ಪುಡಿ
- ಧನಿಯಾ ಪುಡಿ
- ಅರಿಶಿನ
- ಜೀರಿಗೆ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೊತ್ತಂಬರಿ ಸೊಪ್ಪು
- ಕರಿಬೇವು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಸಾಸ್ ಬಳಸದೆ ಮಾಡುವ ಎಗ್ ರೈಸ್ಗೆ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಅದಕ್ಕೆ ಹಾಕಿಕೊಳ್ಳಿ. ನಂತರ ಇದಕ್ಕೆ ಹಸಿ ಮೆಣಸು, ಕರುಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಬಿಡಿ. ಈಗ ಸಣ್ಣದಾಗಿ ಸ್ಲೈಸ್ ಮಾಡಿದ ಟೊಮೆಟೋ ಹಾಕಿ, ಉಪ್ಪು ಹಾಕಿ ಮಿಕ್ಸ್ ಮಾಡುತ್ತಾ 1 ನಿಮಿಷ ಫ್ರೈ ಮಾಡಿ.
ಈಗ ಇದಕ್ಕೆ ಅರಶಿಣ, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ಈಗ ಮೊಟ್ಟೆಯನ್ನು ಒಡೆದು ಇದಕ್ಕೆ ಹಾಕಿಕೊಳ್ಳಿ. ಎಷ್ಟು ಮೊಟ್ಟೆ ಬೇಕಾದರು ಹಾಕಬಹುದು. ಮೊಟ್ಟೆ ಹಾಕಿ ತಕ್ಷಣ ತಿರುಗಿಸಬೇಡಿ. 1 ನಿಮಿಷ ಬಿಟ್ಟು ನಿಧಾನವಾಗಿ ತಿರುಗಿಸಿಕೊಳ್ಳಿ. ಮೊಟ್ಟೆ ಚೆನ್ನಾಗಿ ಫ್ರೈ ಆಗಿ ಉದುರು ಉದುರಾಗಬೇಕು.
ಈಗ ಹುಡಿ ಹುಡಿಯಾಗಿ ಮಾಡಿಟ್ಟಿರುವ ಅನ್ನವನ್ನು ತೆಗೆದುಕೊಂಡು ಈ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಸಾಲೆ, ಮೊಟ್ಟೆ ಹಿಡಿಯುವಂತೆ ಮಿಕ್ಸ್ ಮಾಡಿ ಉರಿ ಮಧ್ಯಮ ಉರಿಯಲ್ಲಿ ಇಡಿ. ತಳ ಹಿಡಿಯದಂತೆ ಕೈ ಬಿಡದೆ ಮಿಕ್ಸ್ ಮಾಡಿ. 2 ನಿಮಿಷ ಫ್ರೈ ಮಾಡಿದ ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇದಕ್ಕೆ ಯಾವುದೇ ಸಾಸ್ ಇಲ್ಲದೆ ಮಾಡಿ ಮುಗಿಸಬಹುದು. ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
