Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ನಾಟಿ ಶೈಲಿಯ ಮೊಟ್ಟೆ ಕರಿ ಮಾಡಿದ್ರೆ ಬಾಯಲ್ಲಿ ನೀರು ಬರುತ್ತೆ..! ಇಲ್ಲಿದೆ ರೆಸಿಪಿ
ವೆಜ್ ಹಾಗೂ ನಾನ್ವೆಜ್ ಪ್ರಿಯರು ಎಂದಿಗೂ ಇಷ್ಟಪಡುವಂತಹ ಖಾದ್ಯ ಅಂದ್ರೆ ಅದು ಈ ಮೊಟ್ಟೆಯಿಂದ ಮಾಡುವ ರೆಸಿಪಿಗಳು, ಮೊಟ್ಟೆಯಿಂದ ಹಲವು ರೀತಿಯ ಖಾದ್ಯ ಸವಿಯಬಹುದು. ದೇಹಕ್ಕೆ ಮೊಟ್ಟರ ಬಹಳ ಮುಖ್ಯ. ಅದರಲ್ಲಿನ ಆರೋಗ್ಯಕರ ಕೊಬ್ಬು, ಕ್ಯಾಲೋರಿ ಪಡೆಯಬಹುದು. ಹಾಗೆ ಮೊಟ್ಟೆಯ ರುಚಿ ರುಚಿಯ ರೆಸಿಪಿಗಳು ನಿಮ್ಮಲ್ಲಿ ಹೊಸ ರೀತಿ ರುಚಿ ನೀಡುತ್ತವೆ.
ಇಂತಹ ಮೊಟ್ಟೆ ರೆಸಿಪಿಗಳು ಊಟ, ತಿಂಡಿಯ ಜೊತೆಗೆ ಬಹಳ ರುಚಿ ನೀಡಲಿವೆ. ಹೀಗಾಗಿ ಹಲವರಿಗೆ ಮೊಟ್ಟೆಯಿಂದ ಮಾಡಿದ ರೆಸಿಪಿಗಳು ಅಂದರೆ ಪಂಚಪ್ರಾಣ. ಹಾಗೆ ಮೊಟ್ಟೆಯ ಕರಿ ಊಟದ ಜೊತೆಗಿದ್ದರೆ ಅದ್ಭುತವಾಗಿರುತ್ತೆ. ಹಾಗೆ ಯಾವುದೇ ತಿಂಡಿಯ ಜೊತೆಗೂ ನೀವು ಸವಿಯಬಹುದು. ಆದ್ರೆ ಮೊಟ್ಟೆ ಕರಿ ಮಾಡುವಲ್ಲಿಯೂ ಹಲವು ವಿಧಾನವಿದೆ.

ಮೊಟ್ಟೆ ಕರಿಯನ್ನು ಹಲವು ಬಗೆಯಲ್ಲಿ ಮಾಡಬಹುದು. ಅದ್ರೆ ನಾವಿಂದು ಸಾಂಪ್ರದಾಯಿಕ ವಿಧಾನದಲ್ಲಿ ಹಿರಿಯರು ಮಾಡುತ್ತಿದ್ದ ವಿಶೇಷ ಹಾಗೂ ವಿಭಿನ್ನ ವಿಧಾನದ ಮೊಟ್ಟೆ ಕರಿ ಕುರಿತಾಗಿ ತಿಳಿದುಕೊಳ್ಳೋಣ. ಅದರಲ್ಲೂ ನಾಟಿ ಶೈಲಿಯಲ್ಲಿ ಮಾಡುವಂತಹ ಮೊಟ್ಟೆ ಕರಿಯು ಬಹಳ ರುಚಿಕರವಾಗಿರುತ್ತೆ. ಊಟದ ಜೊತೆಗಂತು ಅದ್ಭುತ ರುಚಿ ನೀಡಲಿದೆ.
ಹೀಗಾಗಿ ನಾವಿಂದು ಎಲ್ಲರು ಸವಿಯುವಂತಹ ನಾಟಿ ಶೈಲಿಯ ಮೊಟ್ಟೆ ಕರಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಹಾಗಾದ್ರೆ ಈ ನಾಟಿ ಶೈಲಿಯ ಮೊಟ್ಟೆ ಕರಿ ಮಾಡುವುದು ಹೇಗೆ? ಮೊಟ್ಟೆ ಕರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನಾಟಿ ಶೈಲಿಯ ಮೊಟ್ಟೆ ಕರಿ ಮಾಡಲು ಬೇಕಾಗುವ ಪದಾರ್ಥಗಳು
- ಮೊಟ್ಟೆ
- ಪುದೀನ ಎಲೆ
- ಈರುಳ್ಳಿ
- ಹಸಿ ಮೆಣಸಿನಕಾಯಿ
- ಶುಂಠಿ
- ಬೆಳ್ಳುಳ್ಳಿ
- ಅರಿಶಿನ ಪುಡಿ
- ಕೊತ್ತಂಬರಿ ಪುಡಿ
- ಕೆಂಪು ಮೆಣಸಿನ ಪುಡಿ
- ಗರಂ ಮಸಾಲ ಪುಡಿ
- ಕಸೂರಿ ಮೇಥಿ
- ಕೊತ್ತಂಬರಿ ಸೊಪ್ಪು
- ಮೊಸರು
- ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ನಾಟಿ ಶೈಲಿಯ ಮೊಟ್ಟೆ ಕರಿ ಮಾಡುವ ವಿಧಾನವೇನು?
ಮೊದಲಿಗೆ ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿಕೊಂಡು ಸಿಪ್ಪೆ ಬಿಡಿಸಿ ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಪುದಿನ ಸೊಪ್ಪು, ಹಸಿ ಮೆಣಸು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿಕೊಂಡು ಸ್ವಲ್ಪ ನೀರು ಸಹ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಬೇಯಿಸಿಕೊಂಡಿರುವ ಮೊಟ್ಟೆಯನ್ನು ಅದರಲ್ಲಿ ಹಾಕಿ ಪ್ರೈ ಮಾಡಿ.
ಮೊಟ್ಟೆ ಸ್ವಲ್ಪ ಗಟ್ಟಿಯಾಗಿ ರೋಸ್ಟ್ ಆಗಬೇಕು. ಈಗ ಮೊಟ್ಟೆಗಳನ್ನು ಎಣ್ಣೆಯಿಂದ ತೆಗೆದು ಬದಿಗಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಏಲಕ್ಕಿ, ಪಲಾವೆ ಎಲೆ ಹಾಕಿಕೊಂಡು ಬಳಿಕ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿಕೊಳ್ಳಿ. ಆಗಾಗ ತಿರುಗಿಸಿಕೊಳ್ಳುತ್ತಾ ಇರಿ. ಈಗ ಒಂದು ಟೊಮೆಟೋ ಚಿಕ್ಕದಾಗಿ ಹೆಚ್ಚಿಕೊಂಡು ಹಾಕಿ. ಹಾಗೆ ಅರಶಿಣ, ಖಾರದ ಪುಡಿ, ಧನಿಯಾ ಪುಡಿ ಹಾಕಿಕೊಳ್ಳಿ.
ಹಾಗೆ ಗರಂ ಮಸಾಲೆ ಅಥವಾ ಎಗ್ ಮಸಾಲೆ ಕೂಡ ಹಾಕಿಕೊಳ್ಳಬಹುದು. ಈ ಮಸಾಲೆಗಳ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ 1 ಕಪ್ ಮೊಸರು ಹಾಕಿಕೊಳ್ಳಿ. ಹಾಗೆ ಮಿಕ್ಸ್ ಮಾಡಿಕೊಂಡು ಸ್ವಲ್ಪ ನೀರು ಹಾಕಿಕೊಳ್ಳಿ. 1 ನಿಮಿಷ ಬಿಟ್ಟು ಈಗ ಬೇಯಿಸಿ, ರೋಸ್ಟ್ ಮಾಡಿಕೊಂಡಿರುವ ಮೊಟ್ಟೆಯನ್ನು ಹಾಕಿ ಹಾಗೆ ಕಸೂರಿ ಮೇಥಿ ಇದ್ದರೆ ಹಾಕಿಕೊಂಡು 2 ನಿಮಿಷ ಹಾಗೆಯೇ ಬಿಡಿ.
ಚೆನ್ನಾಗಿ ಕುದಿ ಬಂದ ಬಳಿಕ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ತಿರುಗಿಸಿ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೊಟ್ಟೆ ಕರಿ ಸಿದ್ದವಾಗುತ್ತೆ.



Click it and Unblock the Notifications
