Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಬಾಯಿ ರುಚಿ ಹೆಚ್ಚಿಸುವ ಸ್ಪೆಷಲ್ ಮೊಸರನ್ನ ಇದು..! 2 ನಿಮಿಷದಲ್ಲಿ ಮಾಡಬಹುದು!
ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ರಂಪು ತಂಪಾದ ಆಹಾರ ಸವಿಯುವುದನ್ನು ಇಷ್ಟಪಡುತ್ತೇವೆ. ಹೀಗಾಗಿ ಬಿಸಿ ಬಿಸಿಯ ಅನ್ನ, ಮಸಾಲೆ ಭರಿತ ಆಹಾರ ಸೇವಿಸಲು ಇಷ್ಟಪಡುವುದಿಲ್ಲ. ಕೆಲವರಿಗೆ ಬಿಸಿಲಿನಲ್ಲಿ ತಂಪಾದ ಮೊಸರನ್ನ ಸವಿಯುವುದು ಬಹಳ ಇಷ್ಟಪಡುತ್ತಾರೆ. ಮೊಸರನ್ನ ಮಾಡೋದು ಕೂಡ ತುಂಬಾನೆ ಸುಲಭ. ಹಾಗೆ ಆರೋಗ್ಯಕ್ಕೂ ಬಹಳ ಉತ್ತಮವಾದ ಖಾದ್ಯ ಇದಾಗಿದೆ.
ಮಧ್ಯಾಹ್ನದ ಹೊತ್ತಲ್ಲಿ ಮೊಸರನ್ನ ಸವಿದರೆ ಶ್ರಮವೆಲ್ಲ ನೀಗುವಂತಹ ಅನುಭವವಾಗುತ್ತೆ. ದೇಹಕ್ಕೆ ತಂಪು ಬೇಕಾದಾಗ ಮೊಸರನ್ನ ತಿಂದರೆ ಸಾಕು. ಇದಕ್ಕೆ ಒಂದಿಷ್ಟು ವಸ್ತುಗಳ ಹಾಕಿ ಮೊಸರನ್ನ ಮಾಡಿಬಿಟ್ಟರೆ ಅದರ ರುಚಿಗೆ ಎಲ್ಲರು ಫಿದಾ ಆಗುತ್ತಾರೆ. ಮೊಸರನ್ನ ಮಾಡೋಕೆ ಕೆಲವೊಂದು ವಸ್ತುಗಳ ಬಳಸಿದರೆ ಭಯಂಕರ ರುಚಿ ನೀಡುತ್ತೆ. ಇನ್ನು ಮೊಸರನ್ನವನ್ನ ಹಲವು ಬಗೆಯಲ್ಲಿ ಮಾಡಬಹುದು. ನಾವು ಮನೆಯಲ್ಲಿ ಈ ಮೊಸರನ್ನ ಮಾಡುವಾಗ ಈ ವಿಧಾನದಲ್ಲಿ ಮಾಡಿದರೆ ರುಚಿಗೆ ನಿತ್ಯ ಮಾಡಿ ಸವಿಯಲು ಮುಂದಾಗುತ್ತೀರಿ.

ಈ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡುವ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಹಾಗಾದ್ರೆ ನಾವಿಂದು ಸ್ಪೆಷಲ್ ರುಚಿಯ ಮೊಸರನ್ನ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಈ ಮೊಸರನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಯಾವೆಲ್ಲಾ ವಸ್ತುವನ್ನು ಸರಿಯಾಗಿ ಬಳಸಿದರೆ ಮೊಸರನ್ನು ಬೊಂಬಾಟ್ ಆಗಿ ಮಾಡಬಹುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಸ್ಪೆಷಲ್ ಮೊಸರನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅನ್ನ
- ಮೊಸರು
- ಸಾಸಿವೆ
- ಹಸಿ ಮೆಣಸು
- ಒಣ ಮೆಣಸು
- ಕಡಲೆ ಬೇಳೆ
- ಉದ್ದಿನ ಬೇಳೆ
- ಶುಂಠಿ
- ಕೊತ್ತಂಬರಿ ಸೊಪ್ಪು
- ಈರುಳ್ಳಿ
- ಎಣ್ಣೆ
- ದಾಳಿಂಬೆ
- ದ್ರಾಕ್ಷಿ
ಸ್ಪೆಷಲ್ ಮೊಸರನ್ನ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ, ಕೆಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ಅನಂತರ ಹಸಿ ಮೆಣಸನ್ನು ಸಣ್ಣದಾಗಿ ಕತ್ತರಿಸಿ ಹಾಕಿ, ಹಾಗೆ ಒಂದು ಒಣ ಮೆಣಸು ಕೂಡ ಕತ್ತರಿಸಿಕೊಂಡು ಹಾಕಿಕೊಳ್ಳಿ.
ಅನಂತರ ಈ ಒಗ್ಗರಣೆಯನ್ನು ತೆಗೆದು ಒಂದು ಬೌಲ್ಗೆ ಹಾಕಿಕೊಳ್ಳಿ. ನಂತರ ಈಗ ಅನ್ನವನ್ನು ಸ್ವಲ್ಪ ಮೆತ್ತಗೆ ಮಾಡಿಕೊಳ್ಳಲು ಒತ್ತಿಕೊಳ್ಳಬೇಕು. ಅನ್ನ ಯಾವಾಗಲು ಇಡಿ ಇಡಿಯಾಗಿ ಇರಬಾರದು. ಅನ್ನ ಸ್ವಲ್ಪ ಪುಡಿ ಪುಡಿಯಾಗಿ ಮೆತ್ತಗೆ ಇದ್ದರೆ ಮೊಸರನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ನಂತರ ಈ ಅನ್ನಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಹಾಕಿ ಕಲಸಿಕೊಳ್ಳಿ. ಹಾಗೆ ಕೊತ್ತಂಬರಿ ಸೊಪ್ಪು, ತುರಿದುಕೊಂಡಿರುವ ಶುಂಠಿ ಹಾಕಿಕೊಳ್ಳಿ.
ಈಗ ನಿಮಗೆ ಎಷ್ಟು ಬೇಕೋ ಅಷ್ಟು ಮೊಸರನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಮೊದಲೇ ಮಾಡಿಟ್ಟಿರುವ ಒಗ್ಗರಣೆಯನ್ನು ಕೂಡ ಇದಕ್ಕೆ ಹಾಕಿ ನೀರಿನ ಬದಲಾಗಿ ಸ್ವಲ್ಪ ಹಾಲು ಇದ್ದರೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ದಾಲಿಂಬೆ ಅಥವಾ ದ್ರಾಕ್ಷಿಯನ್ನು ಕೂಡ ಈಗ ಹಾಕಿಕೊಳ್ಳಬಹುದು. ಹಾಗೆ ಅಂತಿಮವಾಗಿ ಉಪ್ಪು ಕೂಡ ಹಾಕಿಕೊಂಡು ತಿರುಗಿಸಿಕೊಂಡರೆ ಮೊಸರನ್ನ ರೆಡಿಯಾಗುತ್ತದೆ.
ನೀವು ಕೂಡ ಈ ವಿಧಾನದಲ್ಲಿ ಮನೆಯಲ್ಲೇ ಮೊಸರನ್ನ ಮಾಡಿ ಸವಿದು ನೋಡಿ ಅದರ ರುಚಿಗೆ ನೀವು ನಿತ್ಯ ಮೊಸರನ್ನ ಸವಿಯಲು ಮುಂದಾಗೋದು ಪಕ್ಕ.



Click it and Unblock the Notifications
