Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ರೀತಿ ಕೋಳಿ ಸಾರು ಮಾಡಿದ್ರೆ ಹೊತ್ತಿಗೆ ಖಾಲಿಯಾಗುತ್ತೆ..! ಇಲ್ಲಿದೆ ಸ್ಪೆಷಲ್ ರೆಸಿಪಿ..!!
ನೀವು ನಾನ್‌ವೆಜ್ ಪ್ರಿಯರಾಗಿದ್ದರೆ ಕೋಳಿ ಸಾರು ನಿಮ್ಮ ಫೇಮರಿಟ್ ಆಗಿರಬಹುದು. ಕೋಳಿ ಸಾರು ಎಲ್ಲರಿಗೂ ಇಷ್ಟವಾಗೋ ರೆಸಿಪಿ. ಊಟಕ್ಕೆ, ದೋಸೆಗೆ, ಇಡ್ಲಿಗೆ, ಚಪಾತಿ, ರಾಗಿ ಮುದ್ದೆ ಹೀಗೆ ಎಲ್ಲಾ ಬಗೆಯ ಊಟದ ಜೊತೆಗೂ ಈ ಕೋಳಿ ಸಾರು ರುಚಿ ಹೆಚ್ಚಿಸುವ ಖಾದ್ಯ. ಕೋಳಿ ಸಾರಿನಲ್ಲಿ ಹಲವು ರೀತಿಯ ರೆಸಿಪಿ ಮಾಡುತ್ತಾರೆ, ಒಂದೊಂದು ಕೂಡ ಒಂದೊಂದು ರುಚಿ ನೀಡುತ್ತೆ. ಹಾಗೆ ಒಂದೊಂದು ಭಾಗಕ್ಕೆ ಹೋದರೆ ಅಲ್ಲೊಂದು ರೀತಿಯ ಕೋಳಿ ಸಾರು ಫೇಮಸ್ ಆಗಿರೋದನ್ನು ನಾವು ನೋಡಬಹುದು.
ಆದ್ರೆ ಕೋಳಿ ಸಾರು ಕೆಲವರಿಗೆ ಮಾಡಲು ಬರೋದಿಲ್ಲ. ಪ್ರತಿ ಸಾರಿ ಮಾಡಿದಾಗಲು ಏನಾದರು ಒಂದೊಂದು ಕೊರತೆ ಉಂಟಾಗಿರುತ್ತೆ. ಹಾಗಾದ್ರೆ ಸರಿಯಾದ ಪ್ರಮಾಣದಲ್ಲಿ ಮಸಾಲೆ ಹಾಕಿ ಮಾಡಿದಾಗ ಮಾತ್ರ ಕೋಳಿ ಸಾರು ಅತ್ಯಂತ ರುಚಿಕರವಾಗಿ ಸವಿಯಲು ರೆಡಿಯಾಗುತ್ತೆ. ಆದ್ರೆ ಈ ಮಸಾಲೆ ಹಾಕುವಾಗಲೇ ಸ್ವಲ್ಪ ಯಡವಟ್ಟಾದರೂ ಕೋಳಿ ಸಾರಿನ ರುಚಿ ಯಾರಿಗೂ ಹಿಡಿಸುವುದಿಲ್ಲ.

ಆದ್ರೆ ನಾವಿಂದು ಸ್ಪೆಷಲ್ ರುಚಿಯ ಚಿಕನ್ ಸಾರು ಮಾಡುವುದನ್ನು ನೋಡೋಣ. ಈ ಸ್ಪೆಷಲ್ ರುಚಿಯ ಕೋಳಿ ಸಾರು ಮಾಡಿದರೆ ಒಂದು ಹೊತ್ತಿಗೆ ಖಾಲಿ ಆಗುತ್ತೆ, ಅಷ್ಟೊಂದು ರುಚಿಯಾಗಿರುತ್ತೆ. ಹಾಗಾದ್ರೆ ಈ ಸ್ಪೆಷಲ್ ರುಚಿಯ ಕೋಳಿ ಸಾರು ಮಾಡುವುದು ಹೇಗೆ?, ಕೋಳಿ ಸಾರು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೋಳಿ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಕೋಳಿ - 1 ಕೆ.ಜಿ
- ಈರುಳ್ಳಿ - 5
- ಹಸಿ ಮೆಣಸು
- ಟೊಮೆಟೋ -2
- ಪುದಿನ ಸೊಪ್ಪು
- ಪಲಾವ್ ಎಲೆ
- ಏಲಕ್ಕಿ
- ಶುಂಠಿ
- ಬೆಳ್ಳುಳ್ಳಿ
- ಅರಶಿಣ
- ಚೆಕ್ಕೆ
- ಲವಂಗ
- ಕೊತ್ತಂಬರಿ ಸೊಪ್ಪು
- ಕಾಳು ಮೆಣಸು
- ತೆಂಗಿನ ಕಾಯಿ
- ಉಪ್ಪು
- ಎಣ್ಣೆ
- ಧನಿಯಾ ಪುಡಿ
- ಚಿಕನ್ ಮಸಾಲೆ
ಕೋಳಿ ಸಾರು ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಸಣ್ಣ ಉರಿಯಲ್ಲಿ ಎಣ್ಣೆ ಕಾದ ಬಳಿಕ ಅದಕ್ಕೆ ಹಸಿ ಮೆಣಸು ಹಾಕಿ ಹುರಿದುಕೊಳ್ಳಿ. ಬಳಿಕ ಇದಕ್ಕೆ ಸ್ಲೈಸ್ ಮಾಡಿಕೊಂಡ ಈರುಳ್ಳಿ, ಟೊಮೆಟೋ, ಪುದಿನ ಸೊಪ್ಪು ಹಾಕಿಕೊಂಡಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಈ ಮಸಾಲೆ ಚೆನ್ನಾಗಿ ಫ್ರೈ ಆದ ಬಳಿಕ ಒಂದು ಬೌಲ್‌ಗೆ ತೆಗೆದಿಟ್ಟುಕೊಳ್ಳಿ. ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಳಿಕ ಇದಕ್ಕೆ ಏಲಕ್ಕಿ, ಪಲಾವ್ ಎಲೆ, ಈರುಳ್ಳಿ ಹಾಕಿಕೊಂಡು ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಚೆನ್ನಾಗಿ ತೊಳೆದಿಟ್ಟುಕೊಂಡ ಚಿಕನ್ ಪೀಸ್‌ಗಳನ್ನು ಹಾಕಿ ತಿರುಗಿಸಿಕೊಳ್ಳಿ. 4 ನಿಮಿಷದ ವರೆಗೂ ಹಾಗೆ ಹುರಿದುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಚೆಕ್ಕೆ, ಲವಂಗ, ಕಾಳು ಮೆಣಸು, ಒಣ ಕೊಬ್ಬರಿ ಹಾಗೆ ಮೊದಲು ಹುರಿದುಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ ರುಬ್ಬಿಕೊಳ್ಳಬೇಕು. ನೀರು ಹಾಕಿಕೊಳ್ಳದೆ ಗಟ್ಟಿಯಾಗಿ ಹುರಿದುಕೊಳ್ಳಬೇಕು. ಈ ಮಸಾಲೆ ರೆಡಿ ಮಾಡಿಟ್ಟುಕೊಂಡು ಒಲೆ ಮೇಲೆ ಇಟ್ಟಿರುಚ ಚಿಕನ್ ಅನ್ನು ಚೆನ್ನಾಗಿ ಬೇಯಿಸಿಕೊಳ್ಳಿ.
ಈಗ ಒಲೆ ಮೇಲಿನ ಚಿಕನ್‌ಗೆ ಅರಶಿನ, ಉಪ್ಪು ಹಾಕಿಕೊಂಡು ತಿರುಗಿಸಿಕೊಳ್ಳಿ. 2 ನಿಮಿಷದ ಬಳಿಕ ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ತಿರುಗಿಸಿಕೊಳ್ಳಿ. ನೀರು ಹಾಕದೆ ತಿರುಗಿಸಿಕೊಳ್ಳಿ. 2 ನಿಮಿಷ ಬಳಿಕ ಸ್ವಲ್ಪ ನೀರು ಹಾಕಿಕೊಳ್ಳಿ. ನಂತರ ಸ್ವಲ್ಪ ಧನಿಯಾ ಪುಡಿ, ಚಿಕನ್ ಮಸಾಲೆ ಪುಡಿ, ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ಸೀಟಿ ಹೊಡೆಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸ್ಪೆಷಲ್ ಚಿಕನ್ ಮಸಾಲೆ ಸಾರು ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
