Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
1 ಕಪ್ ಅಕ್ಕಿ ಹಿಟ್ಟಲ್ಲಿ ಮಾಡಿ ನೀವೆಂದೂ ಸವಿದಿರದ ತಿಂಡಿ..! ದಿನ ಇದನ್ನೇ ಮಾಡೋದು ಖಚಿತ!
ಮನೆಯಲ್ಲಿ ಫ್ರೀ ಸಮಯದಲ್ಲಿ ನೀವು ಯಾವುದಾದರು ಸಿಹಿ ತಿಂಡಿ ಮಾಡಿ ಸವಿಯಲು ಮನಸ್ಸು ಮಾಡಬಹುದು. ಹಾಗೆ ಇಂತಹ ಸಮಯದಲ್ಲಿ ಬೇಕರಿಯಲ್ಲಿ ನೀಡುವಂತಹ ರುಚಿ ರುಚಿಯ ಸ್ವೀಟ್ ಅನ್ನು ಮನೆಯಲ್ಲಿ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬೇಕರಿಯಲ್ಲಿ ಸಿಗುವಂತಹ ರುಚಿ ರುಚಿಯಾದ ಸ್ವೀಟ್‌ಗಳ ಹೆಸರು ಕೇಳಿದ್ರು ಬಾಯಲ್ಲಿ ನೀರು ಬರೋದು ನೋಡಬಹುದು.
ಇನ್ನು ಮನೆಯಲ್ಲಿ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಎಲ್ಲರಿಗೂ ಇಷ್ಟವಾಗುವಂತಹ ರುಚಿಯಲ್ಲಿ ಯಾವುದಾದರು ತಿಂಡಿ ಮಾಡೋದು ಅಂದ್ರೆ ಎಲ್ಲರಗೂ ಪ್ರಿಯ. ಅದ್ರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಅವರಿಗಾಗಿ ಯಾವುದಾದರು ಹೊಸ ಖಾದ್ಯ ಮಾಡುವ ನಿಮ್ಮ ಬಯಕೆಯು ಈಡೇರಿಸುವ ಹೊಸ ರೀತಿ ತಿಂಡಿ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ.

ಅದ್ರಲ್ಲೂ ಕೇವಲ 1 ಕಪ್ ಅಕ್ಕಿಯನ್ನು ಬಳಸಿಕೊಂಡು ಬೆಣ್ಣೆಯಂತಹ ಮೃದುವಾದ ತಿಂಡಿ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಹೌದು ಅಕ್ಕಿ ಹಿಟ್ಟಿನಿಂದ ಮಾಡುವ ಈ ತಿಂಡಿ ಬಹಳ ರುಚಿಯಾಗಿ ಎಲ್ಲರಿಗೂ ಇಷ್ಟವಾಗುತ್ತೆ. ಮನೆಯಲ್ಲಿಯೂ ಕೂಡ ಇದನ್ನು ಮಾಡಿ ಸವಿಯಬಹುದು.
ಹಾಗಾದ್ರೆ ಅಕ್ಕಿ ಹಿಟ್ಟು ಬಳಸಿ ಹೊಸದಾಗಿ ಮೃದುವಾದ ತಿಂಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದಿಕೊಳ್ಳೋಣ.
ಅಕ್ಕಿ ಹಿಟ್ಟಿನ ಹೊಸ ತಿಂಡಿ ಮಾಡಲು ಅಗತ್ಯ ವಸ್ತುಗಳಿವು
- ಅಕ್ಕಿ ಹಿಟ್ಟು
- ರವೆ
- ಹಸಿ ಮೆಣಸಿನ ಕಾಯಿ
- ಹಸಿ ಶುಂಠಿ
- ಇನೋ ಪೌಡರ್ ಅಥವಾ ಅಡುಗೆ ಸೋಡಾ
- ಮೊಸರು
- ರುಚಿಗೆ ತಕ್ಕಷ್ಟು ಉಪ್ಪು
ಅಕ್ಕಿ ಹಿಟ್ಟಿನ ಹೊಸ ತಿಂಡಿ ಮಾಡುವುದು ಹೇಗೆ?
ಈಗ ಅಳತೆ ಕಪ್‌ನಲ್ಲಿ ಒಂದು ಕಪ್ ಅಕ್ಕಿ ತೆಗೆದುಕೊಂಡು ಅದನ್ನು ಬೌಲ್‌ನಲ್ಲಿ 2 ಗಂಟೆ ನೆನೆಸಿಡಬೇಕು. ಅನಂತರ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಅರ್ಧ ಕಪ್ ಮೊಸರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಸಣ್ಣ ರವೆಯಂತೆ ರುಬ್ಬಿಕೊಂಡು ಬೌಲ್‌ಗೆ ಹಾಕಿಕೊಳ್ಳಿ. ನಂತರ ಈ ಹಿಟ್ಟಿಗೆ ಕಾಲು ಕಪ್ ರವೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ 10 ನಿಮಿಷ ಹಾಗೆಯೇ ಬಿಡಿ. ನಂತರ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಇಂಗು ಹಾಕಿ ಕರಿಬೇವು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಈಗ ಈ ಒಗ್ಗರಣೆಯನ್ನು ಹಿಟ್ಟಿಗೆ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿದ ಹಸಿ ಮೆಣಸು, ಹಸಿ ಶುಂಠಿ ಹಾಕಿ ಮಿಕ್ಸ್ ಮಾಡಿ.
ಈಗ ಕಾಲು ಕಪ್‌ಗಿಂತ ಕಡಿಮೆ ನೀರು ಉಪ್ಪು ಹಾಕಿ ಮತ್ತೆ ಮಿಶ್ರಣ ಮಾಡಿ. ಇಡ್ಲಿ ಹಿಟ್ಟಿನ ಹದದಂತೆ ಬರಲಿ. ಈಗ ತಟ್ಟೆಯೊಂದಕ್ಕೆ ಎಣ್ಣೆ ಸವರಿ ಇಟ್ಟುಕೊಳ್ಳಿ. ಈಗ ಇನೋ ಅಥವಾ ಅಡುಗೆ ಸೋಡಾ ಸಹ ಹಾಕಿ ಮಿಕ್ಸ್ ಮಾಡಿ. ಇನ್ನೊಂದು ಕಡೆ ಕುಕ್ಕರ್ ಅಥವಾ ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಮಧ್ಯದಲ್ಲಿ ಸ್ಟ್ಯಾಂಡ್ ಇಟ್ಟು ನೀರು ಕುದಿಯಲು ಬಿಡಿ.
ನೀರು ಕುದಿಬರುವಾಗ ಹಿಟ್ಟು ಹಾಕಿರುವ ತಟ್ಟೆಯನ್ನು ಅದರ ಮಧ್ಯದಲ್ಲಿ ಇಟ್ಟುಬಿಡಿ. ನಂತರ 15 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಿ. ನಂತರ ಅದರ ಮೇಲೆ ಖಾರದ ಪುಡಿ ಹರಡಿಕೊಂಡು ಇಳಿಸಿಕೊಂಡು ತಣ್ಣಗಾಗಲು ಬಿಡಿ. ನಂತರ ನಿಮಗೆ ಯಾವ ಗಾತ್ರಕ್ಕೆ ಬೇಕೋ ಹಾಗೆ ಕತ್ತರಿಸಿಕೊಂಡು ಸವಿಯಲು ನೀಡಿ.



Click it and Unblock the Notifications
