Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಊಟದ ಮಜಾ ಹೆಚ್ಚಿಸುವ ಬೆಂಡೆಕಾಯಿ ರೋಸ್ಟ್..! 5 ನಿಮಿಷದಲ್ಲಿ ಮಾಡಬಹುದು!
ಊಟದ ಜೊತೆಗೆ ಯಾವುದಾದರು ಚಟ್ನಿ, ಪಲ್ಯ ಮಾಡುವುದು ಕಾಮನ್. ಯಾಕಂದ್ರೆ ಊಟದ ಜೊತೆಗೆ ಯಾವುದಾದರು ಸೈಡ್ ಡಿಷ್ ಇದ್ರೇನೆ ಆ ಊಟ ಪೂರ್ಣ ಆಗುತ್ತೆ. ಹಾಗೆ ಕೆಲವೊಂದು ತರಕಾರಿ ಫ್ರೈ ಮಾಡಿದ್ರೆ ಊಟ ಬೊಂಬಾಟ್ ಆಗಿರುತ್ತೆ. ಹಾಗಾದ್ರೆ ನಾವಿಂದು ಊಟಕ್ಕೆ ಸವಿಯಲು ಖಾರ ಖಾರವಾದ ಬೆಂಡೆಕಾಯಿ ಫ್ರೈ ಮಾಡುವ ಕುರಿತು ತಿಳಿದುಕೊಳ್ಳೋಣ.
ಬೆಂಡೆಕಾಯಿಯಿಂದ ನೀವು ಹಲವು ರುಚಿಯಲ್ಲಿ ಪಲ್ಯ, ಸಾಂಬಾರ್ ಕೂಡ ಮಾಡಿ ಸವಿದಿರುತ್ತೀರಿ. ಬೆಂಡೆಕಾಯಿ ಆರೋಗ್ಯಕ್ಕೂ ಬಹಳ ಉತ್ತಮ ಹೀಗಾಗಿ ಎಲ್ಲರು ಸವಿಯಲು ಇಷ್ಟಪಡುತ್ತಾರೆ. ಹಾಗೆ ಇಂತಹ ಬೆಂಡೆಕಾಯಿಯ ಕೆಲವೊಂದು ಖಾದ್ಯ ಮಾಡಿ ಊಟದ ಜೊತೆಗೆ ಸವಿಯಬಹುದು. ಅದರಲ್ಲು ಈ ಬೆಂಡೆಕಾಯಿ ಫ್ರೈ ಮಾಡಿದ್ರೆ ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ.

ಖಾರ ಖಾರವಾದ ಬೆಂಡೆಕಾಯಿ ಫ್ರೈ ಚಳಿಗಾಲಕ್ಕೆ ಹೇಳಿ ಮಾಡಿಸಿದ ಖಾದ್ಯ ಆಗಲಿದೆ. ಹಾಗಾದ್ರೆ ನಾವಿಂದು ಸಖತ್ ರುಚಿಯ ಈ ಬೆಂಡೆಕಾಯಿ ಪ್ರೈ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಬೆಂಡೆಕಾಯಿ ಸ್ಪೆಷಲ್ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಬೆಂಡೆಕಾಯಿ ಫ್ರೈ ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಂಡೆಕಾಯಿ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು ಯಾವುದು?
- ಬೆಂಡೆಕಾಯಿ
- ಒಣ ಮೆಣಸು
- ಕರಿಬೇವು
- ಸಾಸಿವೆ
- ಕಡಲೆ ಬೀಜ
- ಒಣ ಕೊಬ್ಬರಿ
- ಉದ್ದಿನ ಬೇಳೆ
- ಜೀರಿಗೆ
- ಅರಶಿಣ
- ಧನಿಯಾ ಕಾಳು
- ಉಪ್ಪು
- ಎಣ್ಣೆ
ಬೆಂಡೆಕಾಯಿ ಫ್ರೈ ಮಾಡುವುದು ಹೇಗೆ?
ಮೊದಲು ಈ ಬೆಂಡೆಕಾಯಿಯನ್ನು ತೊಳೆದು ಹೆಚ್ಚಿಕೊಳ್ಳುವುದು ಮುಖ್ಯ. ಬೆಂಡೆಕಾಯನ್ನು ನೀರಿನಲ್ಲಿ ತೊಳೆದು ಬಟ್ಟೆಯಲ್ಲಿ ಒರೆಸಿಕೊಂಡು ಹೆಚ್ಚಿಕೊಳ್ಳಬೇಕು. ಮದ್ಯದಲ್ಲಿ ಸೀಳಿಕೊಳ್ಳಬೇಕು. ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಕಡಲೆ ಬೇಳೆ, ಕಡಲೇ ಬೇಳೆ, ಉದ್ದಿನ ಬೇಳೆ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಧನಿಯಾ ಕಾಳು, ಜೀರಿಗೆ ಹಾಕಿ 40 ಸೆಕೆಂಡ್ ಫ್ರೈ ಮಾಡಿ ಇದಕ್ಕೆ ಒಣ ಕೊಬ್ಬರಿ, ಒಣ ಮೆಣಸು, ಬ್ಯಾಡಗಿ ಮೆಣಸು ಹಾಕಿ 1 ನಿಮಿಷ ಫ್ರೈ ಮಾಡಿಕೊಂಡು ಒಲೆ ಆಫ್ ಮಾಡಿ ಮಸಾಲೆ ತಣ್ಣಗಾಗಲು ಬಿಡಿ. ಈ ಮಸಾಲೆ ತಣ್ಣಗಾದ ಬಳಿಕ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ಬೆಳ್ಳುಳ್ಳಿ, ಅರಶಿಣ ಪುಡಿ, ಉಪ್ಪು ಹಾಕಿಕೊಂಡು ನುಣ್ಣಗೆ ಪುಡಿ ಮಾಡಿ.
ಈಗ ಈ ಮಸಾಲೆಯನ್ನು ಸೀಳಿಕೊಂಡಿರುವ ಬೆಂಡೆಕಾಯಿಯ ಒಳೆಗೆ ಹಾಕಿಕೊಳ್ಳಬೇಕು. ಈ ಪುಡಿ ಚೆನ್ನಾಗಿ ಬೆಂಡೆಕಾಯಿ ಒಳಗೆ ಸೇರಿಸಿಕೊಳ್ಳಬೇಕು. ಅನಂತರ ಬೆಂಡೆಕಾಯಿಯ ಮೇಲೆ ಕೂಡ ಹರಡಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಸಾಸಿವೆ, ಕರಿಬೇವು ಹಾಕಿಕೊಂಡು ಅನಂತರ ಮಸಾಲೆ ತುಂಬಿದ ಬೆಂಡೆಕಾಯಿಯನ್ನು ಈ ಬಾಣಲೆಗೆ ಹಾಕಿ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ.
2 ನಿಮಿಷದಕ್ಕೊಮ್ಮೆ ಈ ಬೆಂಡೆಕಾಯಿಗಳ ತಿರುಗಿಸಿಕೊಳ್ಳುತ್ತಾ ಇರಿ. ಹಾಗೆ ಬೆಂಡೆಕಾಯಿ ಚೆನ್ನಾಗಿ ಕರಿದು ರೋಸ್ಟ್ ಆಗುವಂತೆ ಮಾಡಿಕೊಳ್ಳಿ. ಇದು ಊಟದ ಜೊತೆಗೆ ಎಲ್ಲಿಲ್ಲದ ರುಚಿ ನೀಡುತ್ತೆ. ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
