Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಇದು ಬರಿ ಮಿಲ್ಕ್ ಶೇಕ್ ಅಲ್ಲ ದೇಹಕ್ಕಿದು ಬಾಳೆಹಣ್ಣಿನ ಅಮೃತ..! ಮಾಡೋದು ಹೇಗೆ?
ಮಳೆಗಾಲ ಅಂತ್ಯವಾಗಿ ಬೇಸಿಗೆ ಚಳಿಗಾಲ ಹತ್ತಿರವಾಗುತ್ತಿದೆ. ಅದ್ರಲ್ಲೂ ನಿತ್ಯ ಒಂದೊಂದು ರೀತಿಯ ಹವಾಮಾನ ನೋಡಬಹುದು. ವಿಶೇಷವಾಗಿ ಬಿಸಿಲು ಹಾಗೆ ಮಳೆ ಎರಡನ್ನೂ ನೋಡುವ ಕಾಲವಿದು; ಆದ್ರೆ ಹಗಲಿನಲ್ಲಿ ಬಿಸಿಲಿನ ಪ್ರಮಾಣ ಏರಿಕೆಯಾದರೆ ಸಂಜೆ ಸಮಯದಲ್ಲಿ ಚಳಿಯ ವಾತಾವರಣ ನೋಡಬಹುದು. ಇದರಿಂದ ದೇಹದ ತಾಪಮಾನ ಏರಿಳಿತ ಉಂಟಾಗಲಿದೆ.
ದೇಹ ಹೆಚ್ಚು ಉಷ್ಣಗೊಂಡರೆ ಒಂದಿಷ್ಟು ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಬಹುದು. ಅದ್ರಲ್ಲೂ ಶೀತ, ಉರಿ ಶೀತ, ದೇಹದ ಉಷ್ಣಾಂಶ ಹೆಚ್ಚಾಗುವಂತಹ ಚಿಕ್ಕಪುಟ್ಟ ಸಮಸ್ಯೆ ಎದುರಿಸಿರಬಹುದು. ಹೀಗಾಗಿ ನಾವಿಂದು ಮನೆಯಲ್ಲೇ ಕೆಲವು ಪಾನಿಯ ಮೂಲಕ ದೇಹವನ್ನು ತಂಪಾಗಿಸುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಅದರಲ್ಲೂ ದೇಹಕ್ಕೆ ಅಮೃತದಂತಹ ಬಾಳೆ ಹಣ್ಣಿನ ಮಿಲ್ಕ್ ಶೇಕ್ ಮಾಡಿ ಕುಡಿದು ನೋಡಿ. ಬಾಳೆಹಣ್ಣು ನಿಮ್ಮ ದೇಹಕ್ಕೆ ಎಷ್ಟು ಮುಖ್ಯ ಅಥವಾ ಅದರಲ್ಲಿ ಎಷ್ಟೊಂದು ಮುಖ್ಯ ಅಂಶಗಳು ಸೇರಿವೆ ಎಂಬುದು ನಿಮಗೂ ತಿಳಿದಿರಬಹುದು. ಕ್ಯಾಲ್ಸಿಯಂ, ಕ್ಯಾಲೋರಿ ತುಂಬಿರುವ ಬಾಳೆ ಹಣ್ಣು ನಿಮ್ಮ ದೇಹಕ್ಕೆ ಬಹಳ ಉತ್ತಮವಾಗಿರುತ್ತದೆ.
ಊಟದ ನಂತರ ನಿತ್ಯ ಒಂದು ಬಾಳೆ ಹಣ್ಣು ಸೇವಿಸುವುದು ಬಹಳ ಪ್ರಯೋಜನಕಾರಿ. ಹಾಗೆ ಇದರಂದ ಮೂಳೆಗಳ ಸಮಸ್ಯೆ ಸೇರಿದಂತೆ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬಹಳ ಉತ್ತಮವಾಗಿರಲಿದೆ. ಹಾಗಾದ್ರೆ ಮನೆಯಲ್ಲಿ ನಿಮ್ಮಿಷ್ಟದಂತೆ ಬಾಳೆಹಣ್ಣಿನ ಈ ಮಿಲ್ಕ್ ಶೇಕ್ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡುವ ಸುಲಭದ ವಿಧಾನ ಇಲ್ಲಿದೆ
- ಬಾಳೆ ಹಣ್ಣು
- ಹಾಲು
- ಸಕ್ಕರೆ ಅಥವಾ ಜೇನು ತುಪ್ಪ
- ಖರ್ಜೂರ
- ಬಾದಾಮಿ
- ಗೋಡಂಬಿ
- ಐಸ್ ಕ್ರೀಮ್
ಮೊದಲು ಈ ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಲು ಬಾದಾಮಿ, ಪಿಸ್ತಾ, ಗೋಡಂಬಿ, ಕರ್ಜೂರ, ಅಂಜೂರ (ಇದ್ದರೆ) ವನ್ನು ತೆಗೆದುಕೊಂಡು ಬೇರೆ ಬೇರೆ ಬೌಲ್‌ನಲ್ಲಿ ಹಾಕಿ ನೆನೆಸಿಡಬೇಕು. ನಂತರ ಒಂದು ಮಿಕ್ಸಿ ಜಾರ್‌ಗೆ ಈ ಎಲ್ಲಾ ವಸ್ತುಗಳನ್ನು ಹಾಕಿಕೊಂಡು ರುಬ್ಬಬೇಕು. ಈ ಎಲ್ಲಾ ಡ್ರೈ ಫ್ರೂಟ್ಸ್‌ಗಳನ್ನು 10 ನಿಮಿಷ ನೆನೆಸಿದರೆ ಸಾಕು. ನೆನೆಸಿಟ್ಟ ನೀರನ್ನೇ ಮಿಕ್ಸಿಗೆ ಹಾಕಿಕೊಳ್ಳಿ.
ಈಗ ಇದರ ಜೊತೆಗೆ ಎರಡು ಸಿಪ್ಪೆ ತೆಗೆದ ಬಾಳೆಹಣ್ಣನ್ನು ಸಹ ಹಾಕಿಕೊಳ್ಳಿ. ಕತ್ತರಿಸಿ ಹಾಕಿಕೊಂಡರೆ ಬಹಳ ಉತ್ತಮ. ಬಾಳೆಹಣ್ಣು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಬಳಿಕ ಮುಚ್ಚಳ ತೆಗೆದು ಅದಕ್ಕೆ ಈಗ 2 ಸ್ಪೂನ್ ಐಸ್ ಕ್ರೀಮ್ ಹಾಕಿಕೊಳ್ಳಿ. ಅಂಗಡಿಯಲ್ಲಿ ಸಿಗುವ ಕಪ್ ಐಸ್ ಕೂಡ ಆಗುತ್ತದೆ. ಯಾವುದೇ ಫ್ಲೇವರ್ ಅನ್ನು ಬಳಸಬಹುದು.
ಈಗ ಇದಕ್ಕೆ ಸಕ್ಕರೆ ಅಥವಾ ಜೇನು ತುಪ್ಪ ಹಾಕಿಕೊಳ್ಳಿ. ಹಾಗೆ ತಣ್ಣಗಿರುವ ಹಾಲು ಹಾಕಿಕೊಂಡು ಮತ್ತೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿದ ಬಳಿಕ ಒಂದು ಗ್ಲಾಸ್‌ಗೆ ಹಾಕಿಕೊಂಡು ಸವಿಯಲು ನೀಡಬಹುದು. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ. ಹಾಗೆ ಮನೆಯಲ್ಲಿ ಮಕ್ಕಳಿಗೆ ಇದನ್ನು ಮಾಡಿ ನೀಡಿ ಇದು. ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ.
ಮಕ್ಕಳಿಗೆ ಈ ಮಿಲ್ಕ್ ಶೇಕ್ ಮಾಡಿ ನೀಡಿದ್ರೆ ಅವರಿಗೂ ಇಷ್ಟವಾಗುತ್ತೆ, ಹಾಗೆ ದೇಹಕ್ಕೆ ಬಹಳ ತಂಪು ನೀಡಲಿದೆ. ಹಾಗೆ ಜೀರ್ಣಕ್ರಿಯೆಗೂ ಇದು ಬಹಳ ಉತ್ತಮವಾಗಿರಲಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಐಸ್ ಕ್ರೀಮ್ ಬಳಸದೆ ಕೇವಲ ಹಾಲಿನಿಂದಲೂ ಇದನ್ನು ಮಾಡಬಹುದು. ಹಾಗೆ ಸಕ್ಕರೆ ಬದಲು ಬೆಲ್ಲ ಸಹ ಬಳಸಬಹುದು.



Click it and Unblock the Notifications
