Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಆಲೂಗಡ್ಡೆಯ ಹೊಸ ತಿಂಡಿ ಮಾಡಿ ನೋಡಿ! 2 ವಸ್ತು ಇದ್ರೆ ಅದ್ಭುತ ರುಚಿ ನೀಡುತ್ತೆ!
ನೀವು ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಸವಿಯಲು ಅಭ್ಯಾಸ ಇಟ್ಟುಕೊಂಡಿರಹುದು. ಅದ್ರಲ್ಲೂ ನಗರದಲ್ಲಿ ವಾಸವಿರುವ ಮಂದಿಯಂತು ಸಂಜೆ ಟಿ ಕಾಫಿ ಸೇವಿಸುವಾಗ ಹಾಗೆ ಮನೆಯಿಂದ ಹೊರಗಿದ್ದಾಗ ಸ್ನ್ಯಾಕ್ಸ್ ಸವಿಯೋಕೆ ಇಷ್ಟಪಡುತ್ತಾರೆ. ಹಾಗೆ ಹಳ್ಳಿಯಲ್ಲೂ ಕೂಡ ಅಂಗಡಿಯಿಂದ ಖರೀದಿಸಿ ತರುವ ಸ್ನ್ಯಾಕ್ಸ್ಗಳನ್ನು ಸೇವಿಸುವುದು ನೋಡಬಹುದು. ಇನ್ನು ಮನೆಯಲ್ಲೇ ಮಾಡಿ ಸವಿಯುದಕ್ಕೂ ಹಲವು ರೀತಿಯ ಖಾದ್ಯಗಳಿವೆ.
ಆದ್ರೆ ನಾವಿಂದು ಬಹಳ ಸುಲಭವಾಗಿ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವ ಹೊಸದೊಂದು ಸ್ನ್ಯಾಕ್ಸ್ ಕುರಿತಾಗಿ ಹೇಳಲಿದ್ದೇವೆ. ಅದ್ರಲ್ಲೂ ಒಂದೇ ಒಂದು ಆಲೂಗಡ್ಡೆ ಹಾಗೆ ಮುಷ್ಠಿಯಷ್ಟು ಪುಟಾಣಿ ಬಳಸಿಕೊಂಡು ಅದ್ಭುತ ರುಚಿ ನೀಡುವಂತಹ ಸ್ನ್ಯಾಕ್ಸ್ ಮಾಡಿ ಸವಿಯಬಹುದು. ಹಾಗಾದ್ರೆ ಈ ಸ್ನ್ಯಾಕ್ಸ್ ಯಾವುದು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ.

ಆಲೂಗಡ್ಡೆ ಬಳಸಿಕೊಂಡು ಹಲವು ರೀತಿಯ ಸ್ನ್ಯಾಕ್ಸ್ ಮಾಡಿ ಸವಿಯೋದು ಕಾಮನ್. ಆಲೂ ಬಜ್ಜಿ ಬೋಂಡಾ ಅಂದ್ರೆ ಎಲ್ಲರ ಬಾಯಲ್ಲೂ ಒಮ್ಮೆ ನೀರು ಬರುತ್ತೆ. ಆದ್ರೆ ಇದೇ ಆಲೂಗಡ್ಡೆಯಿಂದ ರುಚಿ ರುಚಿ ಕಟ್ಲೆಟ್ ಕೂಡ ಮಾಡುತ್ತಾರೆ. ಆದ್ರೆ ನಾವಿಂದು ಹೊಸ ಬಗೆಯ ಸಂಜೆ ಸ್ನ್ಯಾಕ್ಸ್ ಮಾಡುವ ಕುರಿತು ತಿಳಿಯೋಣ.
ಆಲೂಗಡ್ಡೆಯ ಹೊಸ ತಿಂಡಿ ಮಾಡಲು ಯಾವೆಲ್ಲಾ ವಸ್ತುಗಳು ಇರಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಆಲೂಗಡ್ಡೆ ಸ್ನ್ಯಾಕ್ಸ್ ಮಾಡಲು ಬೇಕಾಗುವ ವಸ್ತುಗಳು
- ಆಲೂಗಡ್ಡೆ
- ಪುಟಾಣಿ
- ಎಣ್ಣೆ
- ಉಪ್ಪು
- ಕಡಲೆ ಹಿಟ್ಟು
- ಕೊತ್ತಂಬರಿ ಸೊಪ್ಪು
- ಗರಂ ಮಸಾಲ
- ಅರಶಿಣ
- ಈರುಳ್ಳಿ
- ಹಸಿ ಮೆಣಸು
ಆಲೂಗಡ್ಡೆ ಸ್ನ್ಯಾಕ್ಸ್ ಮಾಡುವುದು ಹೇಗೆ?
ಮೊದಲು ಒಂದು 1 ಕಪ್ ಪುಟಾಣಿ ಅಥವಾ ಹುರಿಗಡಲೆಯನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ನೀರು ಹಾಕಿ ಬಳಿಕ 2 ರಿಂದ 3 ಆಲೂಗಡ್ಡೆ ಹಾಕಿ ಬೇಯಿಸಿಕೊಳ್ಳಿ. ಮುಚ್ಚಳ ಮುಚ್ಚಿ ಒಂದು ಸೀಟಿ ಹೊಡೆಯಲು ಬಿಡಿ.
ಬೇಯಿಸಿಕೊಂಡ ಆಲೂಗಡ್ಡೆಯನ್ನು ಒಂದು ಪಾತ್ರೆಗೆ ಹಾಕಿಕೊಂಡು ಸಿಪ್ಪೆ ತೆಗೆದು ರೆಡಿ ಮಾಡಿಕೊಳ್ಳಿ. ಇದನ್ನು ಪಾತ್ರೆಯಲ್ಲಿ ಸ್ವಲ್ಪ ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ 3ರಿಂದ 4 ಸ್ಪೂನ್ ಕಡಲೆ ಹಿಟ್ಟು ಹಾಕಿಕೊಳ್ಳಿ. ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ, ಹಸಿ ಮೆಣಸು ಕೂಡ ಇದಕ್ಕೆ ಹಾಕಿಕೊಳ್ಳಿ. ಹಾಗೆ ಸಣ್ಣದಾಗಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಳ್ಳಿ. ನಂತರ ಚೆನ್ನಾಗಿ ಈ ಎಲ್ಲಾ ಪದಾರ್ಥಗಳು ಬೆರೆಯುವಂತೆ ಮಿಕ್ಸ್ ಮಾಡಿಕೊಳ್ಳಿ.
ಕೊನೆಯಲ್ಲಿ ಗರಂ ಮಸಾಲ, ಉಪ್ಪು, ಅರಶಿಣ ಹಾಗೆ ಮೊದಲು ರುಬ್ಬಿಕೊಂಡಿದ್ದ ಪುಟಾಣಿ ಹಿಟ್ಟನ್ನು ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದು ದಪ್ಪವಾಗಿ ಹಿಟ್ಟಿನಂತೆ ಬರಬೇಕು. ನೀರು ಮಿಕ್ಸ್ ಮಾಡದೆ ಹಿಟ್ಟು ಹದ ಮಾಡಿ. ಉಂಡೆ ಕಟ್ಟಲು ಬರುವಂತಹ ಹದಕ್ಕೆ ಮಾಡಿ. ಈಗ ಕೈಯಲ್ಲಿ ಉಂಡೆ ಮಾಡಿ ನಂತರ ಮಸಾಲ ವಡೆಯ ರೀತಿ ತಟ್ಟಿಕೊಳ್ಳಿ. ರೌಂಡ್ ಶೇಪ್ ಅಲ್ಲಿ ಮಾಡಿಕೊಂಡು ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಕಾವಲಿ ತಳದಲ್ಲಿ ಎಣ್ಣೆ ಇದ್ದರೆ ಸಾಕು. ಒಂದು ಬದಿ ಬೇಯಿಸಿಕೊಂಡು ಬಳಿಕ ಮತ್ತೊಂದು ಬದಿ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಆಲೂಗಡ್ಡೆಯ ಹೊಸ ಸ್ನ್ಯಾಕ್ಸ್ ರೆಡಿಯಾಗುತ್ತದೆ.



Click it and Unblock the Notifications
