Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಯಲ್ಲಿ ನೀರು ತರಿಸುವ ಜಾಂಗೀರ್ ಮಾಡಿ..! ಮನೆಯಲ್ಲೇ ರೆಡಿಯಾಗುತ್ತೆ ಬೇಕರಿ ಸಿಹಿ
ಸಿಹಿ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಬೇಕರಿಗಳಲ್ಲಿ ಸಿಗುವಂತಹ ಸಿಹಿಗಳನ್ನು ಸವಿಯುವುದು ಎಲ್ಲರಿಗೂ ಇಷ್ಟ. ಹೆಚ್ಚಾಗಿ ರಸ್ತೆ ಬದಿಯ ಅಂಗಡಿಗಳಲ್ಲಿ ಮಾಡುವಂತಹ ಜಿಲೇಬಿಗಳನ್ನು ಎಲ್ಲರೂ ಬಿಸಿ ಬಿಸಿಯಾಗಿ ಸವಿಯಲು ಇಷ್ಟಪಡುತ್ತಾರೆ. ಅದ್ರಲ್ಲೂ ಜಾಂಗೀರ್ ಸಿಹಿ ಎಲ್ಲರ ಬಾಯಲ್ಲೂ ನೀರು ತರಿಸಲಿದೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಈ ಜಾಂಗೀರ್ ಸಿಹಿ ಇಷ್ಟಪಡುತ್ತಾರೆ.
ನೀವು ರಸ್ತೆಯಲ್ಲಿ ಹೋಗುವಾಗ ಜಾಂಗೀರ್ ಕಣ್ಣಿಗೆ ಬಿದ್ದರೆ ಸಾಕು ಅದನ್ನು ಸವಿಯಲು ಮನಸ್ಸಾಗುತ್ತೆ. ಹಾಗೆ ಬಾಯಲ್ಲಿ ನೀರು ಬರುತ್ತೆ. ಇನ್ನು ಮದುವೆ ಮನೆಯಂತಹ ಶುಭ ಕಾರ್ಯಗಳಲ್ಲಿಯೂ ಜಾಂಗೀರ್ ಸಿಹಿ ಮಾಡಿಯೇ ಮಾಡುತ್ತಾರೆ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಈ ಖಾದ್ಯ ಬಹಳ ಫೇಮಸ್ ಆಗಿದೆ. ಇನ್ನು ನಾವಿದನ್ನು ಮನೆಯಲ್ಲೂ ಕೂಡ ಮಾಡಿ ಸವಿಯಬಹುದಾಗಿದೆ.

ಜಾಂಗೀರ್ ಅನ್ನು ಮನೆಯಲ್ಲೇ ಮಾಡಿ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ವಿಶೇಷ ದಿನವಾಗಿದ್ದರೆ, ಅಥವಾ ಸಂಬಂಧಿಕರು, ಅತಿಥಿಗಳ ಆಗಮನದ ಸಮಯದಲ್ಲಿ ಈ ಜಾಂಗೀರ್ ಮಾಡಿ ಸವಿಯಬಹುದು. ನಾವಿಂದು ಸುಲಭವಾಗಿ ಹಾಗೆ ವಿಭಿನ್ನ ರುಚಿ ನೀಡುವಂತಹ ಈ ಜಾಂಗೀರ್ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಜಾಂಗೀರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಉದ್ದಿನ ಬೇಳೆ - 3/4 ಕಪ್
- ಕಾರ್ನ್ ಫ್ಲೋರ್ - 3 ಟೀಸ್ಪೂನ್
- ಕಿತ್ತಳೆ ಆಹಾರ ಬಣ್ಣ - 1 ಟೀಸ್ಪೂನ್
- ಸಕ್ಕರೆ - 1 ಕಪ್
- ನಿಂಬೆ ರಸ - 1 ಟೀಸ್ಪೂನ್
ಜಾಂಗೀರ್ ಸಿಹಿ ಮಾಡುವುದು ಹೇಗೆ?
ಮೊದಲು ಒಂದೂವರೆ ಕಪ್ ಉದ್ದಿನ ಬೇಳೆ, ಅಥವಾ ಉದ್ದಿನ ಕಾಳು ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿ ನೀರು ಹಾಕಿ ನೆನೆಸಿಡಬೇಕು. 3 ಗಂಟೆ ನೆನೆಸಿಟ್ಟರೆ ಸಾಕಾಗುತ್ತದೆ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ನೆನೆಸಿಟ್ಟ ಉದ್ದಿನ ಬೇಳೆ ಹಾಕಿ ಅರ್ದ ಕಪ್ ನೀರು ಸಹ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು.
ಎಷ್ಟು ನುಣ್ಣಗೆ ಸಾಧ್ಯವೋ ಅಷ್ಟು ನುಣ್ಣಗೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಹಿಟ್ಟು ಗಟ್ಟಿಯಾಗಿರುವಂತೆ ರುಬ್ಬಿರಬೇಕು. ರುಬ್ಬಿದ ಮಿಶ್ರಣವನ್ನು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ಈಗ ಮಿಶ್ರಣಕ್ಕೆ ಕಿತ್ತಳೆ ಬಣ್ಣ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಹಿಟ್ಟು ಹದವಾಗಿದೆಯ ಎಂದು ಪರೀಕ್ಷಿಸಲು ಒಂದು ಬೌಲ್‌ನಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಹಿಟ್ಟು ಉಂಡೆ ಮಾಡಿ ಹಾಕಿ ಈ ಹಿಟ್ಟು ಮುಳುಗದೆ ತೇಲುತ್ತಿದ್ದರೆ ಹಿಟ್ಟು ಹದ ಸರಿಯಾಗಿದೆ ಎಂದರ್ಥ.
ಈಗ ಪಾಕ ಮಾಡಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಕಪ್ ಸಕ್ಕರೆ ಹಾಕಿ 1 ಕಪ್ ನೀರು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕರಗಲು ಬಿಡಿ. ಇದು ಒಂದೆಳೆ ಪಾಕ ಆಗಬೇಕು. ಅಲ್ಲಿಯವರೆಗೂ ಕುದಿಸಿ. ಬೇಕಿದ್ದರೆ ಪಾಕಕ್ಕೂ ಒಂದು ಚಿಟಿಕೆ ಬಣ್ಣ ಬಳಸಿ. ಈಗ ಜಾಂಗೀರ್ ಮಾಡಲು ಒಂದು ಪ್ಲಾಸ್ಟಿಕ್ ತೆಗೆದುಕೊಂಡು ಅದರ ತುದಿಯಲ್ಲಿ ತೂತು ಮಾಡಿಕೊಂಡು ಬಳಸಬಹುದು, ಹಾಲಿನ ಕವರ್ ಆದರೆ ಬಹಳ ಉತ್ತಮ.
ಈಗ ಪ್ಲಾಸ್ಟಿಕ್ ಒಳಗೆ ಹಿಟ್ಟನ್ನು ಹಾಕಿಕೊಂಡು ಬಳಿಕ ಬಾಣಲೆಯಲ್ಲಿನ ಎಣ್ಣೆ ಬಿಸಿಯಾದ ಬಳಿಕ ಯಾವ ರೀತಿ ರಚನೆ ಬೇಕೋ ಹಾಗೆ ನೀವು ಜಾಂಗೀರ್ ಹಾಕಿಕೊಳ್ಳಿ. ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಜಾಂಗೀರ್ ಬೇಯಬೇಕು. ಜಾಂಗೀರ್ ಸ್ವಲ್ಪ ಬ್ರೌನ್ ಆದ ಬಳಿಕ ಅದನ್ನು ತೆಗೆದು ಸಕ್ಕರೆ ಪಾಕಕ್ಕೆ ಬಿಡಬೇಕು. 5 ನಿಮಿಷ ಪಾಕದಲ್ಲಿ ಬಿಟ್ಟು ಬಳಿಕ ತೆಗೆದರೆ ನಿಮ್ಮ ಮುಂದೆ ಕ್ರಿಸ್ಪಿ ಜಾಂಗೀರ್ ಸಿದ್ದವಾಗುತ್ತೆ.



Click it and Unblock the Notifications
