Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬೆಳಗ್ಗೆ ತಿಂಡಿಗೆ ಮಾಡಿ ಸ್ಪೆಷಲ್ ರುಚಿಯ ಗಟ್ಟಿ ಅವಲಕ್ಕಿ ಚಿತ್ರಾನ್ನ..! 5 ನಿಮಿಷ ಸಾಕು
ಬೆಳಗ್ಗೆ ತಿಂಡಿಗೆ ಕೆಲವರು ಒಗ್ಗರಣೆ ಹಾಕಿರುವ ಖಾದ್ಯ ಸವಿಯಲು ಇಷ್ಟಪಡುತ್ತಾರೆ, ಮತ್ತೆ ಕೆಲವರು ಕಡಿಮೆ ಎಣ್ಣೆ, ಮಸಾಲೆ ಹಾಕಿರುವ ಖಾದ್ಯ ಸವಿಯಲು ಇಷ್ಟಪಡುತ್ತಾರೆ. ಆದ್ರೆ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ ಮಾಡಬೇಕು ಅನ್ನೋದು ಗೃಹಿಣಿಯರ ಆಸೆಯಾಗಿರುತ್ತೆ. ಅದರಲ್ಲೂ ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಲ್ಲಿ ಮಾಡುವಂತಹ ತಿಂಡಿಯನ್ನು ಮಾಡಲು ಅವರು ಇಷ್ಟಪಡುತ್ತಾರೆ.
ಹೀಗಾಗಿ ಕಡಿಮೆ ಸಮಯದಲ್ಲಿ ಯಾವುದೇ ತಿಂಡಿ ಮಾಡುವುದಿದ್ದರೆ ಅದು ಎಲ್ಲಾ ಗೃಹಿಣಿಯರ ಫೇವರಿಟ್ ಆಗಿರುತ್ತೆ. ಅದ್ರಲ್ಲಿ ಚಿತ್ರಾನ್ನ, ಮಸಾಲೆ ಅವಲಕ್ಕಿ ಇಂತಹ ಸುಲಭದ ತಿಂಡಿ ಮಾಡುತ್ತಾರೆ. ಇದು ಬೆಳಗ್ಗೆ ಸವಿಯಲು ಕೂಡ ಒಳ್ಳೆಯ ರುಚಿ ನೀಡಲಿದೆ. ಆದ್ರೆ ಕೆಲವರಿಗೆ ಕಡಿಮೆ ಸಮಯದಲ್ಲಿ, ಕಡಿಮೆ ಹಣದಲ್ಲಿ ಯಾವ ತಿಂಡಿ ಮಾಡಬಹುದು ಎಂಬ ಕುರಿತು ತಿಳಿದಿರುವುದಿಲ್ಲ.

ಹಾಗೆ ಬಹಹುದಿನಗಳಿಂದ ಒಂದೇ ರೀತಿ ತಿಂಡಿ ರೆಡಿ ಮಾಡುತ್ತಿರುತ್ತಾರೆ. ಆದ್ರೆ ನಾವಿಂದು ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿ, ಬೊಂಬಾಟ್ ರುಚಿಯಲ್ಲಿ ಮಾಡಬಹುದಾದ ತಿಂಡಿಯ ಕುರಿತು ನಾವಿಂದು ತಿಳಿಯೋಣ. ಅದರಲ್ಲಿ ನಾವಿಂದು ಗಟ್ಟಿ ಅವಲಕ್ಕಿಯ ಚಿತ್ರಾನ್ನ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಗಟ್ಟಿ ಅವಲಕ್ಕಿ ಚಿತ್ರಾನ್ನವು ಸವಿಯಲು ಬಹಳ ರುಚಿ ನೀಡಲಿದೆ.
ಬೆಳಗ್ಗೆ ತಿಂಡಿಗೆ ಈ ಗಟ್ಟಿ ಅವಲಕ್ಕಿ ಚಿತ್ರಾನ್ನ ಮಾಡಿದರೆ ಜೊತೆಗೆ ಇದಕ್ಕೆ ಒಗ್ಗರಣೆ ಹಾಕಿದರೆ ಅದರ ಸುವಾಸನೆಗೆ ಎಂತವರು ಕೂಡ ಸ್ವಲ್ಪ ಹೆಚ್ಚು ತಿಂಡಿ ಸವಿಯುತ್ತಾರೆ. ಹಾಗಾದ್ರೆ ಈ ಗಟ್ಟಿ ಅವಲಕ್ಕಿ ಚಿತ್ರಾನ್ನ ಮಾಡುವುದು ಹೇಗೆ? ಈ ತಿಂಡಿ ಮಾಡಲು ಬೇಕಾಗುವ ಪದಾರ್ಥವೇನು?, ಮಾಡುವ ವಿಧಾನವೇನು? ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.
ಗಟ್ಟಿ ಅವಲಕ್ಕಿ ಚಿತ್ರಾನ್ನ ಮಾಡಲು ಬೇಕಾಗುವ ವಸ್ತುಗಳು
- ದಪ್ಪ ಅವಲಕ್ಕಿ - ಅರ್ಧ ಕೆ.ಜಿ
- ಎಣ್ಣೆ
- ಸಾಸಿವೆ
- ಕಡಲೆ ಬೀಜ
- ಕಡಲೆ ಬೇಳೆ - 1 ಟೀಸ್ಪೂನ್
- ಉದ್ದಿನ ಬೇಳೆ-1 ಚಮಚ
- ಹಸಿರು ಮೆಣಸಿನಕಾಯಿ - 10
- ಕರಿಬೇವು
- ಕೊತ್ತಂಬರಿ ಸೊಪ್ಪು
- ತೆಂಗಿನಕಾಯಿ
- ಈರುಳ್ಳಿ - 4
- ನಿಂಬೆ-2
- ಅರಶಿನ
- ಉಪ್ಪು
ಗಟ್ಟಿ ಅವಲಕ್ಕಿ ಚಿತ್ರಾನ್ನ ಮಾಡುವ ವಿಧಾನ
ಮೊದಲು ದಪ್ಪ ಅವಲಕ್ಕಿ ಜರಡಿ ಹಿಡಿದುಕೊಳ್ಳಿ, ನಂತರ ನೀರು ಹಾಕಿಕೊಂಡು ಚೆನ್ನಾಗಿ ತೊಳೆದುಕೊಂಡು ಒಂದು ಬೌಲ್ಗೆ ಹಾಕಿ ನೆನೆಸಿಡಬೇಕು. 10 ನಿಮಿಷ ನೆನೆಸಿಡಬೇಕು. 10 ನಿಮಿಷದ ಬಳಿಕ ಚೆನ್ನಾಗಿ ಹಿಂಡಿಕೊಂಡು ಮತ್ತೊಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ. ಇದಕ್ಕೆ ಸಾಸಿವೆ, ಕಡಲೆ ಬೀಜ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡು ಚೆನ್ನಾಗಿ ಹುರಿಯಿರಿ. ಈಗ ಹಸಿ ಮೆಣಸು, ಕರಿಬೇವು ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಈರುಳ್ಳಿ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಬೇಯಲು ಬಿಡಿ. 2 ನಿಮಿಷದ ಬಳಿಕ ಇದಕ್ಕೆ ಅರಶಿನ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ.
ಈ ಮಸಾಲೆ ಚೆನ್ನಾಗಿ ಹುರಿದುಕೊಂಡ ಬಳಿಕ ಇದಕ್ಕೆ ಉದುರು ಉದುರಾಗಿರುವ ಅವಲಕ್ಕಿಯನ್ನು ಹಾಕಿಕೊಳ್ಳಬೇಕು. ನಂತರ ಈ ಅವಲಕ್ಕಿಗೆ ಮಸಾಲೆ ಚೆನ್ನಾಗಿ ಬೆರೆಯಬೇಕಾದರೆ ಚೆನ್ನಾಗಿ ಕಲಸಿಕೊಳ್ಳಬೇಕು. ಒಲೆಯ ಉರಿ ಸಣ್ಣದಾಗಿ ಇಟ್ಟುಕೊಳ್ಳಿ, 2 ನಿಮಿಷ ಕಲಸಿಕೊಂಡ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಈಗ ನಿಂಬೆಹಣ್ಣನ್ನು ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಗಟ್ಟಿ ಅವಲಕ್ಕಿ ಚಿತ್ರಾನ್ನ ರೆಡಿಯಾಗುತ್ತದೆ. ಬೆಳಗ್ಗೆ ತಿಂಡಿಗೆ ಹೇಳಿ ಮಾಡಿಸಿದ ತಿಂಡಿ ಇದಾಗಿದೆ.
ನೀವು ಸಹ ಒಮ್ಮೆ ಮನೆಯಲ್ಲಿ ಈ ಟೆಸ್ಟಿ ತಿಂಡಿ ಮಾಡಿ ನೋಡಿ. ದಿನ ಒಂದೇ ರೀತಿಯ ಖಾದ್ಯ ಮಾಡಿ ಬೇಸರಗೊಂಡಿದ್ದರೆ ಈ ಖಾದ್ಯವನ್ನು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
