Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಬಾಯಲ್ಲಿ ನೀರು ತರಿಸುವ ಸೋಯಾಬಿನ್ ಗ್ರೇವಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
ನೀವು ಸಸ್ಯಹಾರಿಗಳಾಗಿದ್ದರೆ ಖಂಡಿತ ಸೋಯಾಬಿನ್‌ನಿಂದ ಹತ್ತು ಹಲವು ರೀತಿಯ ಖಾದ್ಯ ಮಾಡಿರುತ್ತೀರಿ. ಅದರಲ್ಲೂ ಸೋಯಾ ಪಲಾವ್, ಸೋಯಾ ಬಿರಿಯಾನಿ, ಸೋಯಾ ಪಲ್ಯ ಹೀಗೆ ಹತ್ತಾರು ರೀತಿ ಖಾದ್ಯ ಇದರಲ್ಲಿ ಮಾಡಬಹುದು. ಇನ್ನು ಇದು ಆರೋಗ್ಯದ ದೃಷ್ಟಿಯಿಂದಲೂ ಸಿಕ್ಕಾಪಟ್ಟೆ ಉತ್ತಮ ಆಹಾರವಾಗಿದೆ.
ಇದಲ್ಲದೆ ಸೋಯಾದಲ್ಲಿ ಅತೀಯಾದ ಪೋಷಕಾಂಶಗಳಿವೆ, ವಿಟಮಿನ್‌ಗಳಿವೆ, ಪ್ರೋಟೀನ್‌ಗಳು ಅತೀ ಹೆಚ್ಚು ದೇಹಕ್ಕೆ ಸಿಗುತ್ತದೆ. ಹೀಗಾಗಿ ಕಡಿಮೆ ಕೊಲೆಸ್ಟ್ರಾಲ್ ಅಂಶ ಹಾಗೂ ಕ್ಯಾಲೋರಿ ಹೊಂದಿರುವ ಸೋಯಾಬಿನ್ ಎಲ್ಲರ ಅಚ್ಚು ಮೆಚ್ಚಿನ ಖಾದ್ಯ.

ಇದರಲ್ಲಿ ಹಲವು ರೀತಿ ಖಾದ್ಯ ಮಾಡಿ ಸವಿಯಬಹುದು. ಅದರಲ್ಲೂ ಅನ್ನದ ಜೊತೆ ಸವಿಯಲು ಸೋಯಾಬಿನ್ ಗ್ರೇವಿ ಸಿಕ್ಕಾಪಟ್ಟೆ ರುಚಿ ನೀಡುತ್ತದೆ. ಚಿಕನ್, ಮಟನ್‌ಗೆ ಪರ್ಯಾಯವಾಗಿ ಈ ಸೋಯಾಬಿನ್ ಅನ್ನು ನೀವು ಖಾದ್ಯದ ರೂಪದಲ್ಲಿ ಸವಿಯಬಹುದು.
ಹಾಗಾದರೆ ನಾವಿಂದು ಸೋಯಾಬಿನ್ ಗ್ರೇವಿ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಸೋಯಾಬಿನ್‌ನಿಂದ ಮಸಾಲ ಭರಿತ ರುಚಿಕರ ಗ್ರೇವಿ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಸೋಯಾಬಿನ್ ಗ್ರೇವಿ ಮಾಡುವ ಪಾಕ ವಿಧಾನವೇನು? ಅದನ್ನು ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೋಯಾಬಿನ್ ಗ್ರೇವಿ ಮಾಡಲು ಬೇಕಾಗುವ ವಸ್ತುಗಳು
- ಸೋಯಾ ಬಿನ್ - 50 ಗ್ರಾಂ
- ಕೆಂಪು ಮೆಣಸಿನಕಾಯಿ - 5
- ಏಲಕ್ಕಿ -2
- ಬಿರಿಯಾನಿ ಎಲೆ - 2
- ಕರಿಮೆಣಸು
- ದಾಲ್ಚಿನ್ನಿ - 2 ಪೀಸ್
- ಲವಂಗ-2
- ಓಂ ಕಾಳು -1 ಟೀಸ್ಪೂನ್
- ಸೋಂಕಾಳು - 1/4 ಟೀಸ್ಪೂನ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಈರುಳ್ಳಿ - 2
- ಟೊಮೆಟೊ - 1
- ಮೆಣಸಿನ ಪುಡಿ - 1 ಟೀಸ್ಪೂನ್
- ಗರಂ ಮಸಾಲಾ ಪುಡಿ - 1 ಟೀಸ್ಪೂನ್
- ಕೊತ್ತಂಬರಿ ಪುಡಿ - 1 ಟೀಸ್ಪೂನ್
- ಅರಿಶಿನ ಪುಡಿ - 1/4 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 ಚಮಚ
- ಕರಿಬೇವಿನ ಎಲೆಗಳು - 1 tbs
- ಅಡುಗೆ ಎಣ್ಣೆ
ಸೋಯಾಬಿನ್ ಗ್ರೇವಿ ಮಾಡುವ ವಿಧಾನ
ಮೊದಲು 50 ಗ್ರಾಮ್ ಸೋಯಾಬಿನ್ ಅನ್ನು ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ನೆನೆಸಿಡಬೇಕು. ಬಳಿಕ ಇದನ್ನು ನೀರಿನಿಂದ ಚೆನ್ನಾಗಿ ಹಿಂಡಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಇನ್ನೊಂದು ಕಡೆ ಒಣ ಮೆಣಸು, ಏಲಕ್ಕಿ, ಪಲಾವ್ ಎಲೆ, ಜೀರಿಗೆ, ಸೋಂಕಾಳನ್ನು ಬಿಸಿ ನೀರಿನಲ್ಲಿ ನೆನೆಸಿಡಬೇಕು. ಇದನ್ನು 10 ನಿಮಿಷ ನೆನೆಸಿದ ಬಳಿಕ ನೀರಿನಿಂದ ತೆಗೆದು ಮಿಕ್ಸಿ ಜಾರ್‌ಗೆ ಜಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಸ್ವಲ್ಪ ಪೇಸ್ಟ್ ರೀತಿ ರುಬ್ಬಿಕೊಳ್ಳಿ. ಈ ಮಸಾಲೆಯನ್ನು ಸೋಯಾಬಿನ್‌ಗೆ ಹಾಕಿ ಮಿಕ್ಸ್ ಮಾಡಿ ಬದಿಗಿಡಿ. ಈಗ ಇನ್ನೊಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆಗೆ ಜೀರಿಗೆ, ಚಕ್ಕೆ, ಲವಂಗ, ಚಕ್ರಮೊಗ್ಗು ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
3 ನಿಮಿಷದ ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ, ಖಾರದ ಪುಡಿ, ಗರಂ ಮಸಾಲ, ಅರಶಿನ ಪುಡಿ, ಧನಿಯಾ ಪುಡಿ ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ. ಇದಾಗಿ 1 ನಿಮಿಷ ಫ್ರೈ ಮಾಡಿಕೊಂಡರೆ ಸಾಕು. ಈ ಗೊಜ್ಜು ರೆಡಿಯಾದ ಮೇಲೆ ಮಸಾಲೆ ಹಾಕಿಕೊಂಡಿರುವ ಸೋಯಾಬಿನ್ ಅನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈ ವೇಳೆ ಉಪ್ಪನ್ನು ರುಚಿಗೆ ತಕ್ಕಷ್ಟು ನೋಡಿಕೊಂಡು ಹಾಕಿಕೊಳ್ಳಿ. ನಿಮಗೆ ಗ್ರೇವಿಗೆ ಎಷ್ಟು ನೀರು ಬೇಕೋ ಅಷ್ಟು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 10 ನಿಮಿಷದವರೆಗೂ ಅದನ್ನು ಬೇಯಿಸಿದರೆ ಸಾಕು. ಕೊನೆಯದಾಗಿ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ತಿರುಗಿಸಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸೋಯಾಬಿನ್ ಗ್ರೇವಿ ಸವಿಯಲು ರೆಡಿ.



Click it and Unblock the Notifications