Latest Updates
-
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು!
ಸೋಯಾಬಿನ್ ಬಳಸಿ ಮಾಡಿ ವೆಜ್ ಕಬಾಬ್..! ಅದ್ಭುತ ರುಚಿ ತಿಂಡಿ
ನಾನ್ ವೆಜ್ ಪ್ರಿಯರಿಗೆ ಸವಿಯಲು ಹತ್ತಾರು ಖಾದ್ಯಗಳು ಸುಲಭವಾಗಿ ಮಾಡಲು ಸಿಗುತ್ತವೆ, ಅದರಲ್ಲೂ ಕರಿದ ತಿಂಡಿಗಳಲ್ಲಿ ಹತ್ತಾರು ಬಗೆ ಮಾಡಬಹುದು. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ವೆರೈಟಿ ಫುಡ್ ವೆಜ್‌ನಲ್ಲಿ ಸಿಗುತ್ತದೆ. ಅದರಲ್ಲೂ ಸಂಜೆ ಸ್ನ್ಯಾಕ್ಸ್‌ಗೆ ಅದೆಷ್ಟು ರೀತಿಯ ಖಾದ್ಯ ಮಾಡಬಹುದು ಎಂಬುದನ್ನು ನೀವು ಊಹಿಸಿರಲು ಕೂಡ ಸಾಧ್ಯವಿಲ್ಲ.
ಹೀಗೆ ನಾವಿಂದು ಸಂಜೆ ಸ್ನ್ಯಾಕ್ಸ್ ಸಮಯದಲ್ಲಿ ಸವಿಯಬಹುದಾದ ವೆಜ್ ಕಬಾಬ್ ಕುರಿತು ತಿಳಿಯೋಣ. ಚಿಕನ್ ಹಾಗೂ ಮಟನ್‌ನಲ್ಲಿ ಕಬಾಬ್ ಮಾಡಿ ಸವಿದಿರುತ್ತಾರೆ, ಆದ್ರೆ ಸೋಯಾಬಿನ್ ಅಲ್ಲಿ ಅದ್ಭುತ ರುಚಿಯ ವೆಜ್ ಕಬಾಬ್ ಮಾಡಬಹುದು. ಈ ರುಚಿಯಲ್ಲಿ ನೀವೊಮ್ಮೆ ಕಬಾಬ್ ಮಾಡಿದ್ರೆ ಮತ್ತೆ ಮತ್ತೆ ಮಾಡಿ ಸಂಜೆಯ ಸ್ನ್ಯಾಕ್ಸ್ ಆಗಿ ಸವಿಯಲು ಮುಂದಾಗುತ್ತೀರಿ.

ಹಾಗಾದ್ರೆ ಈ ಸೋಯಾಬಿನ್ ಕಬಾಬ್ ಮಾಡೋದು ಹೇಗೆ ಎಂಬುದನ್ನು ನಾವು ತಿಳಿಯೋಣ. ಹಾಗೆ ಸೋಯಾಬಿನ್ ಕಬಾಬ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಈ ಸೋಯಾಬಿನ್ ಕಬಾಬ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿಯೋಣ.
ಸೋಯಾಬಿನ್ ಕಬಾಬ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಸೋಯಾಬಿನ್ -1 ಕಪ್
- ಈರುಳ್ಳಿ -1
- ಹಸಿ ಮೆಣಸು -3
- ಕೊತ್ತಂಬರಿ
- ಕಡಲೆ ಹಿಟ್ಟು- 1 ಸ್ಪೂನ್
- ಅಕ್ಕಿ ಹಿಟ್ಟು- 1 ಸ್ಪೂನ್
- ಅರಶಿಣ
- ಗರಂ ಮಸಾಲೆ
- ಬೆಳ್ಳುಳ್ಳಿ
- ಶುಂಠಿ
- ಜೀರಾ ಪೌಡರ್
- ಧನಿಯಾ ಪುಡಿ
- ಉಪ್ಪು ಎಣ್ಣೆ
ಸೋಯಾಬಿನ್ ಕಬಾಬ್ ಮಾಡುವುದು ಹೇಗೆ?
ಮೊದಲು ಈ ಸೋಯಾಬಿನ್ ಅನ್ನು ಬಿಸಿ ನೀರಿಗೆ ಹಾಕಿ ಸ್ವಲ್ಪ ಉಪ್ಪು ಹಾಕಿ ನಂತೆರ ನೀಡು ಹಿಂಡಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನೀರಿನಲ್ಲಿ 2 ರಿಂದ 3 ನಿಮಿಷ ಬಿಟ್ಟರೆ ಸಾಕಾಗುತ್ತದೆ. ನಂತರ ಈ ಸೋಯಾಬಿನ್ ಅನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಇದಕ್ಕೆ ಬೆಳ್ಳುಳ್ಳಿ, ಹಸಿ ಮೆಣಸು, ಈರುಳ್ಳಿ, ಶುಂಠಿ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ನೀರು ಹಾಕಿಕೊಳ್ಳದೆ ತರಿತರಿಯಾಗಿ ರುಬ್ಬಿಕೊಂಡರೂ ನಡೆಯುತ್ತದೆ. ಈಗ ಈ ಮಿಶ್ರಣವನ್ನ ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಖಾರದ ಪುಡಿ, ಉಪ್ಪು, ಕೊತ್ತಂಬರಿ,ಗರಂ ಮಸಾಲೆ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ವಡೆ ಮಾಡಲು ಬೇಕಾದ ಹದಕ್ಕೆ ಹಿಟ್ಟು ರೆಡಿ ಮಾಡುವಂತೆ ಮಾಡಿಕೊಳ್ಳಿ.
ಹಾಗೆ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ ಇಲ್ಲವೆ ವಡೆಯಂತೆ ತಟ್ಟಿಕೊಂಡು ಒಂದು ಪ್ಲೇಟ್‌ನಲ್ಲಿ ಹಾಕಿಡಿ. ಈ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಸಣ್ಣ ಉರಿಯಲ್ಲಿ ಎಣ್ಣೆಗೆ ಬಿಟ್ಟು ಹಾಗೆಯೇ ಬಿಡಿ. 3ರಿಂದ 4 ನಿಮಿಷ ಒಂದು ಕಡೆ ಕರಿದುಕೊಳ್ಳಿ. ಎರಡೂ ಕಡೆ ಚೆನ್ನಾಗಿ ಕರಿದ ಬಳಿಕ ಎಣ್ಣೆಯಿಂದ ತೆಗೆದಿಟ್ಟುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಸೋಯಾಬಿನ್ ಕಬಾಬ್ ರೆಡಿಯಾಗುತ್ತದೆ. ಇದನ್ನು ಮಾಡುವುದು ಕೂಡ ಸುಲಭ ಹಾಗೆ ಕಡಿಮೆ ವಸ್ತು ಬಳಸಿ ಮಾಡಬಹುದು. ಹಾಗೆ ರುಚಿ ಕೂಡ ಅದ್ಭುತವಾಗಿರುತ್ತದೆ. ನೀವು ಕೂಡ ಮನೆಯಲ್ಲಿ ಈ ಸೋಯಾಬಿನ್ ಕಬಾಬ್ ಮಾಡಿ ನೋಡಿ. ಮಕ್ಕಳಿಗೆ ಈ ವೆಜ್ ಕಬಾಬ್ ತುಂಬಾನೆ ಇಷ್ಟವಾಗುತ್ತೆ.



Click it and Unblock the Notifications