Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಚಿಕನ್ ಬೇಡ, ಮೊಟ್ಟೆಯೂ ಬೇಡ..! ಇಲ್ಲಿದೆ ವೆಜ್ ಪ್ರಿಯರ ಕಬಾಬ್..!
ನಾನ್ ವೆಜ್ ಪ್ರಿಯರು ಕಬಾಬ್ ರುಚಿಯನ್ನು ನೋಡಿರುತ್ತಾರೆ. ಚಿಕನ್ ಕಬಾಬ್ ಹಲವರ ಫೇವರಿಟ್ ಫುಡ್ ಕೂಡ ಹೌದು. ಆದ್ರೆ ನೀವು ಎಂದಾದ್ರು ವೆಜ್ ಕಬಾಬ್ ಸವಿದಿದ್ದೀರಾ? ನೀವು ಓದಿದ್ದು, ಸರಿ.. ವೆಜ್ ಬಿರಿಯಾನಿಯಂತೆಯೇ ವೆಜ್ ಕಬಾಬ್ ಕೂಡ ಮಾಡಬಹುದು. ಅದ್ರಲ್ಲು ವೆಜ್ ಬಿರಿಯಾನಿಯಲ್ಲಿ ನಿಮಗೆ ಸೋಯಾ ಸಿಗುವಂತೆ. ಸೋಯಾದಿಂದಲೇ ವೆಜ್ ಕಬಾಬ್ ಸಹ ಮಾಡಬಹುದು.
ಸೋಯಾಬಿನ್ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಆಹಾರವಾಗಿದೆ. ಅತೀ ಹೆಚ್ಚು ಪ್ರೋಟೀನ್ ಹಾಗೂ ಫೈಬರ್ ಅದರಲ್ಲಿದೆ. ಹೀಗಾಗಿ ಸೋಯಾ ರೈಸ್, ಪಲಾವ್ಗೆ ಈ ಸೋಯಾ ಹಾಕಿದರೆ ಅದರ ರುಚಿಯೂ ಹೆಚ್ಚು ಆರೋಗ್ಯಕ್ಕೂ ಉತ್ತಮ. ಈಗ ಇದೇ ಸೋಯಾದಿಂದ ಚಿಕರ್ ರುಚಿಯಲ್ಲೇ ಕಬಾಬ್ ಸಹ ಮಾಡಬಹುದು.

ಈ ಕಬಾಬ್ ನೋಡಲು ಚಿಕನ್ನಂತೆಯೇ ಕಂಡರು ಕೂಡ ಇದರಲ್ಲಿ ಚಿಕನ್ ಅಂಶವಿಲ್ಲ. ಇದು ಪರಿಶುದ್ಧ ಸಸ್ಯಹಾರಿ ಭೋಜನ. ಹೌದು ಸಸ್ಯಹಾರಿಗಳಿಗಾಗಿಯೇ ವಿಶೇಷವಾಗಿ ಈ ಖಾದ್ಯ ರೆಡಿ ಮಾಡಬಹುದು. ಮಾಂಸಹಾರಿಗಳು ಸಹ ಬಾಯಿ ಚಪ್ಪರಿಸಿ ಈ ಸೋಯಾ ಕಬಾಬ್ ಸವಿಯಬಹುದು.
ಹಾಗಾದ್ರೆ ಇಂದು ನಾವು ಸೋಯಾ ಕಬಾಬ್ ಮಾಡುವ ಕುರಿತು ತಿಳಿದುಕೊಳ್ಳೋಣ. ಸೋಯಾ ಕಬಾಬ್ ಮಾಡಲು ಬೇಕಾಗುವ ಪದಾರ್ಥಗಳೇನು? ಸೋಯಾ ಕಬಾಬ್ ಮಾಡಲು ಏನೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೋಯಾ ಕಬಾಬ್ ಮಾಡಲು ಬೇಕಾಗುವ ವಸ್ತುಗಳು
- ಸೋಯಾ- ಸ್ವಲ್ಪ
- ಮೈದಾ ಹಿಟ್ಟು- 2 ಸ್ಪೂನ್
- ಕಾರ್ನ್ ಫ್ಲೋರ್- 2 ಸ್ಪೂನ್
- ಎಣ್ಣೆ
- ಗರಂ ಮಸಾಲ- 1 ಸ್ಪೂನ್
- ಅರಶಿಣ
- ಖಾರದ ಪುಡಿ-1 ಸ್ಪೂನ್
- ಜೀರಿಗೆ ಪುಡಿ-1 ಸ್ಪೂನ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಮೊಸರು
- ಕೆಂಪು ಬಣ್ಣ
ಸೋಯಾ ಕಬಾಬ್ ಮಾಡುವುದು ಹೇಗೆ?
ಸ್ವಲ್ಪ ಸೋಯಬಿನ್ ಅನ್ನು ಮೊದಲು ಚೆನ್ನಾಗಿ ತೊಳೆದು ಇದನ್ನು ಬಿಸಿ ನೀರಿನಲ್ಲಿ ನೆನೆಸಿಡಬೇಕು. 5ರಿಂದ 8 ನಿಮಿಷ ನೆನೆಸಿಡಬೇಕು. ಬಳಿಕ ಇದನ್ನು ನೀರಿನಿಂದ ತೆಗೆದು ನೀರನ್ನು ಚೆನ್ನಾಗಿ ಹಿಂಡಿಕೊಂಡು ಮತ್ತೊಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. ಸೋಯಾದಲ್ಲಿ ನೀರು ಇಲ್ಲದಂತೆ ಸಂಪೂರ್ಣ ಹಿಂಡಿಕೊಳ್ಳಬೇಕು.
ಈಗ ಒಂದು ಬೌಲ್ಗೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಅರಶಿನ, ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಶುಂಠಿ ಬೆಳ್ಳುಳ್ಳಿ ಪೆಸ್ಟ್ ಹಾಗೂ ಉಪ್ಪು ಹಾಕಿಕೊಂಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಈ ವೇಳೆ ಮೊಸರು ಹಾಕಿ ಮಿಕ್ಸ್ ಮಾಡಿ ನೀರು ಹಾಕದೆಯೇ ಮಿಕ್ಸ್ ಮಾಡಿಕೊಳ್ಳಿ. ಬಳಿಕ ನಿಮಗೆ ಬಣ್ಣ ಬೇಕಾದರೆ ಕೆಂಪು ಬಣ್ಣದ ಪುಡಿ ಸ್ವಲ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಸೋಯಾಬಿನ್ ಅನ್ನು ಈ ಮಿಶ್ರಣಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಈ ವೇಳೆ ನೀವು ಬೇಕಾದರೆ ಮೊಟ್ಟೆ ಸಹ ಹಾಕಿಕೊಳ್ಳಬಹುದು, ಹಾಕದಿದ್ದರೂ ನಡೆಯುತ್ತದೆ. ಹೀಗೆ ಸೋಯಾಗೆ ಚೆನ್ನಾಗಿ ಮಸಾಲೆ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ನೀರು ಬಳಸದೆ ಮಿಕ್ಸ್ ಮಾಡಿಕೊಳ್ಳಿ. ಇದಾದ ಬಳಿಕ ಸೋಯಾಗೆ ಹಿಟ್ಟು ಹಿಡಿದ ಬಳಿಕ ಅದನ್ನು 10 ನಿಮಿಷಗಳ ಕಾಲ ಹಾಗೆಯೆ ಇಡಬೇಕು.
ಈಗ ಒಲೆ ಮೇಲೆ ಪಾತ್ರೆಯಿಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆಯನ್ನ ಸಣ್ಣ ಉರಿಯಲ್ಲಿ ಕಾಯಲು ಬಿಡಿ. ಈಗ ಎಣ್ಣೆಗೆ ಸೋಯಾವನ್ನು ಹಾಕಿಕೊಂಡು ಹಾಗೆ ಬಿಡಿ. ನಿಧಾನವಾಗಿ ಅವುಗಳನ್ನು ತಿರುಗಿಸಿಕೊಳ್ಳುತ್ತಾ ಫ್ರೈ ಮಾಡಿಕೊಳ್ಳಿ. ಸೋಯಾ ಕೆಂಪು ಬಣ್ಣಕ್ಕೆ ಬರುವವರೆಗೂ ಕಾಯಿಸಿಕೊಳ್ಳಿ. ಬಳಿಕ ಎಲ್ಲಾ ಸೋಯಾವನ್ನು ಒಂದು ಪ್ಲೇಟ್ಗೆ ಹಾಕಿಕೊಂಡು ಸವಿಯಲು ಇಡಿ. ಇಷ್ಟಾದರೆ ರುಚಿ ರುಚಿಯ ಸೋನಾ ಕಬಾಬ್ ರೆಡಿಯಾಗುತ್ತದೆ. ಮಾಡುವುದು ಸಹ ಸುಲಭ, ಸಸ್ಯಹಾರಿಗಳಿಗೆ ಅತ್ಯಂತ ರುಚಿ ಎನಿಸುವ ಖಾದ್ಯ ಇದು.



Click it and Unblock the Notifications
