Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಊಟ, ತಿಂಡಿ ಎಲ್ಲದಕ್ಕೂ ಬೆಸ್ಟ್ ಈ ಸೋಯಾ ಚಂಕ್ ಗ್ರೇವಿ..! ಮಾಡೋ ವಿಧಾನ ಇಲ್ಲಿದೆ!
ಊಟ ಹಾಗೂ ತಿಂಡಿಯ ಜೊತೆಗೆ ಆರೋಗ್ಯಕರ ಖಾದ್ಯಗಳ ಮಾಡಿ ಸವಿಯುವುದನ್ನು ನೀವು ಇಷ್ಟಪಡುತ್ತಿದ್ದರೆ ಹಲವು ಬಗೆ ಕಾಳಿನ ಪಲ್ಯ ಮಾಡುವುದು ಸಾಮಾನ್ಯ. ಆದ್ರೆ ರುಚಿಕರವಾಗಿ ಊಟದ ಜೊತೆಗೆ ಗ್ರೇವಿ ಮಾಡುವುದು ಕೂಡ ಇಷ್ಟವಾಗುತ್ತೆ. ಆದ್ರೆ ಗ್ರೇವಿ ಅಂದರೆ ಅಲ್ಲಿ ಮಸಾಲೆ, ಎಣ್ಣೆ ಹೆಚ್ಚು ಬಳಸಬೇಕಾಗುತ್ತದೆ. ಇದು ತೂಕ ಹೆಚ್ಚಳವಾಗುವುದಕ್ಕೂ ಕಾರಣ ಎಂದು ಹಲವರು ತಿಳಿದಿರುತ್ತಾರೆ.
ಆದ್ರೆ ಸೋಯಾ ಚಂಕ್ಗಳ ಗ್ರೇವಿ ಇದಕ್ಕೆ ವಿರುದ್ಧ ಎನ್ನಬಹುದು. ತೂಕ ಇಳಿಸಲು ಇಚ್ಛಿಸುವವರು ಈ ಸೋಯಾದಿಂದ ಮಾಡಿದ ಖಾದ್ಯ ಸವಿಯುವುದು ಬಹಳ ಉತ್ತಮ. ಇದರಲ್ಲಿ ಅತ್ಯಧಿಕ ಫೈಬರ್ ಹಾಗೂ ಕಡಿಮೆ ಪ್ರಮಾಣದ ಕ್ಯಾಲೋರಿ ಇರಲಿದೆ. ಹೀಗಾಗಿ ಸೋಯಾದಿಂದ ಮಾಡಿದ ಖಾದ್ಯ ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿರುತ್ತೆ.

ಹೀಗಾಗಿ ನಾವಿಂದು ಸುಲಭವಾಗಿ ಮಾಡಬಹುದಾದ ಸೋಯಾ ಚಂಕ್ ಗ್ರೇವಿ ಕುರಿತು ತಿಳಿಯೋಣ. ಅದ್ಭುತ ರುಚಿಯಲ್ಲಿ ಈ ಸೋಯಾ ಗ್ರೇವಿ ಮಾಡಬಹುದು. ಊಟದ ಜೊತೆಗೆ ಎಲ್ಲಾ ತಿಂಡಿಗೂ ಇದು ಸೂಪರ್ ರುಚಿ ನೀಡಲಿದೆ. ಹಾಗಾದ್ರೆ ಈ ಸೋಯಾ ಗ್ರೇವಿ ಮಾಡುವುದು ಹೇಗೆ? ಈ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಸೋಯಾ ಗ್ರೇವಿಗೆ ತಯಾರಿ ಹೇಗೆ ಮಾಡಿಕೊಳ್ಳಬೇಕು, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.
ಸೋಯಾ ಚಂಕ್ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಸೋಯಾ - 100 ಗ್ರಾಂ
- ಈರುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಟೊಮೆಟೋ
- ಹಸಿ ಮೆಣಸು
- ಪಲಾವ್ ಎಲೆ
- ಏಲಕ್ಕಿ
- ಚನ್ನ ಮಸಾಲ ಪುಡಿ
- ಅರಿಶಿನ ಪುಡಿ
- ಜೀರಿಗೆ ಪುಡಿ
- ಗರಂ ಮಸಾಲ ಪುಡಿ
- ಧನಿಯಾ ಪುಡಿ
- ಖಾರದ ಪುಡಿ
- ಕೊತ್ತಂಬರಿ ಸೊಪ್ಪು
- ಕಸ್ತೂರಿ ಮೇಥಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಸೋಯಾ ಚಂಕ್ ಗ್ರೇವಿ ಮಾಡುವ ವಿಧಾನವೇನು?
ಮೊದಲು ಸೋಯಾ ಚಂಕ್ ಅನ್ನು ಬಿಸಿ ನೀರಿಗೆ ಹಾಕಿ ಸ್ವಲ್ಪ ಉಪ್ಪು ಹಾಕಿ 1 ನಿಮಿಷ ಕುದಿಸಿ ಬಳಿಕ ಸೋಯಾವನ್ನು ನೀರಿನಿಂದ ತೆಗೆದಿ ಹಿಂಡಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಹೆಚ್ಚು ಎಣ್ಣೆ ಹಾಕಿ, ಏಲಕ್ಕಿ, ಪಲಾವ್ ಎಲೆ, ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ಒಂದು ಮಿಕ್ಸಿ ಜಾರ್ಗೆ 2 ಟೊಮೆಟೋ, ಹಸಿ ಮೆಣಸು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನುಣ್ಣಗೆ ರುಬ್ಬಿದ ಈ ಮಸಾಲೆಯನ್ನು ಬಾಣಲೆಗೆ ಹಾಕಿ ಮಿಕ್ಸ್ ಮಾಡಿ. ಹಾಗೆ ಅರಶಿಣ, ಜೀರಿಗೆ ಪುಡಿ, ಖಾರದ ಪುಡಿ, ಚನ್ನಾ ಮಸಾಲೆ, ಗರಂ ಮಸಾಲೆ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿ ಉಪ್ಪು ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ.
ಇದು ಗೊಜ್ಜಿನ ರೂಪಕ್ಕೆ ಬಂದ ಬಳಿಕ ಸೋಯಾ ಚಂಕ್ ಅನ್ನು ಇದಕ್ಕೆ ಹಾಕಿಕೊಳ್ಳಿ. ಸೋಯಾ ಚಂಕ್ನಲ್ಲಿ ನೀರಿನ ಅಂಶ ಇರದಂತೆ ನೋಡಿಕೊಳ್ಳಿ. ಬೇಕಾದರೆ 1 ಗ್ಲಾಸ್ ನೀರು ಹಾಕಿಕೊಂಡು ಕುದಿಯಲು ಬಿಡಬೇಕು. ಸೋಯಾ ನೀರು ಹೀರಿಕೊಳ್ಳುತ್ತದೆ, ಹೀಗಾಗಿ ನೀರು ಹೆಚ್ಚಿದ್ದರೂ ನಡೆಯುತ್ತದೆ. ಮುಚ್ಚಳ ಮುಚ್ಚಿ 5 ನಿಮಿಷ ಕುದಿಯಲು ಬಿಡಿ. ಕೊನೆಯಲ್ಲಿ ಕಸ್ತೂರಿ ಮೇಥಿ, ಹಾಗೂ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಬುತ ರುಚಿಯ ಸೋಯಾ ಚಂಕ್ ಗ್ರೇವಿ ರೆಡಿಯಾಗುತ್ತದೆ.



Click it and Unblock the Notifications
