Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೋರೆಕಾಯಿ ಬಜ್ಜಿ ಮಾಡಿದ್ರೆ ಮನೆಮಂದಿಯಲ್ಲ ಫಿದಾ ಆಗೋದು ಪಕ್ಕಾ..! ಇಲ್ಲಿದೆ ಮಾಡುವ ವಿಧಾನ
ಮನೆಯಲ್ಲಿ ಸಾಂಬಾರ್ ಮಾಡಲು ನಾವು ಹಲವು ರೀತಿ ತರಕಾರಿಗಳ ಬಳಸುತ್ತೇವೆ. ತರಕಾರಿಗಳು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ. ಹೀಗಾಗಿ ಎಲ್ಲರು ತರಕಾರಿಯನ್ನು ಹೆಚ್ಚು ಇಷ್ಟಪಟ್ಟು ಸವಿಯುತ್ತಾರೆ. ತರಕಾರಿಗಳಲ್ಲು ವಿವಿಧ ರೀತಿಯ ತಿಂಡಿ ತಿನಿಸುಗಳ ಮಾಡುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ತರಕಾರಿಯಿಂದ ವಿವಿಧ ರೀತಿಯ ತಿಂಡಿಗಳನ್ನು ಮಾಡುತ್ತಾರೆ.
ಹಾಗೆ ಈ ಸೋರೆಕಾಯಿಯಿಂದಲೂ ಕೂಡ ಹತ್ತು ಹಲವು ರೀತಿಯ ತಿಂಡಿಗಳನ್ನು ಮಾಡಬಹುದು. ಅದರಲ್ಲೂ ಸಂಜೆ ಸಮಯದಲ್ಲಿ ನಮಗೆ ಇಷ್ಟವಾಗುವಂತಹ ಸ್ನ್ಯಾಕ್ಸ್ ಸವಿಯುವುದಾದರೆ ಇದೇ ತರಕಾರಿ ಬಳಸಬಹುದು. ಸೋರೆಕಾಯಿಯಲ್ಲಿ ಹತ್ತಾರು ಬಗೆಯ ತಿಂಡಿಗಳ ಮಾಡಬಹುದು. ಹಾಗಾದ್ರೆ ನಾವಿಂದು ಸೋರೆಕಾಯಿಯಿಂದ ಮಾಡುವ ತಿಂಡಿಯ ಕುರಿತು ತಿಳಿದುಕೊಳ್ಳೋಣ.

ಮೊದಲು ನಾವು ಸೋರೆಕಾಯಿಯ ಬಜ್ಜಿ ಮಾಡುವ ಕುರಿತು ತಿಳಿಯೋಣ. ಸೋರೆಕಾಯಿ ಬಜ್ಜಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಬಿಟ್ಟು ಹೇಗೆ ಮಾಡಿಕೊಳ್ಳುವುದು? ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೋರೆಕಾಯಿ ಬಜ್ಜೆ ಮಾಡಲು ಬೇಕಾಗುವ ವಸ್ತುಗಳು
- ಕಡಲೆ ಹಿಟ್ಟು- 1 ಕಪ್
- ಸೋರೆಕಾಯಿ
- ಉಪ್ಪು
- ಖಾರದ ಪುಡಿ
- ಎಣ್ಣೆ
- ನಿಂಬೆ ಹುಳಿ ಅಥವಾ ಹುಣಸೆ ಹುಳಿ
- ಅರಶಿನ ಪುಡಿ
- ಧನಿಯಾ ಪುಡಿ
- ಓಂಕಾಳು
- ಅಕ್ಕಿ ಹಿಟ್ಟು
ಸೋರೆಕಾಯಿ ಬಜ್ಜೆ ಮಾಡುವುದು ಹೇಗೆ?
ಮೊದಲು ಒಂದು ಸೋರೆಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿಕೊಂಡು ಅದರ ಸಿಪ್ಪೆ ತೆಗೆದುಕೊಳ್ಳಿ. ಬಳಿಕ ಆಲೂಗಡ್ಡೆಯಂತೆ ಕತ್ತರಿಸಿಕೊಳ್ಳಬೇಕು. ಅಂದರೆ ವೃತ್ತಾಕಾರವಾಗಿ ತೆಳುವಾಗಿ ಕತ್ತರಿಸಿಕೊಳ್ಳಬೇಕು. ನಂತರ ಈ ಸೋರೆಕಾಯಿ ಮೇಲೆ ಅರ್ಧ ಚಮಚ ಉಪ್ಪು, ಖಾರದ ಪುಡಿ, ನಿಂಬೆ ಹುಳಿಯನ್ನು ಹಿಂಡಿಕೊಳ್ಳಿ. ಎಲ್ಲಾ ಸೋರೆಕಾಯಿಗೂ ಚೆನ್ನಾಗಿ ಈ ವಸ್ತುಗಳು ಹಿಡಿಯುವಂತೆ ಮಾಡಿ ಬದಿಗೆ ಇಟ್ಟುಕೊಳ್ಳಿ.
ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ ಕಾಲು ಕಪ್ ಅಕ್ಕಿ ಹಿಟ್ಟು ಸಹ ಹಾಕಿಕೊಳ್ಳಿ. 1 ಚಮಚ ಖಾರದ ಪುಡಿ, ಓಂಕಾಳು, ಅರಶಿನ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿ. ಬಳಿಕ ಇದಕ್ಕೆ ಅರ್ಧ ಚಮಚ ಧನಿಯಾ, ಗರಂ ಮಸಾಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿವೇವು, ಕೊತ್ತಂಬರಿ ಸೊಪ್ಪು, ಉಪ್ಪು ಸಹ ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ.
ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಹಿಟ್ಟು ಕಲಸಿಕೊಳ್ಳಿ. ಹಿಟ್ಟು ಗಂಟಿಲ್ಲದಂತೆ ಹದ ಮಾಡಿಕೊಳ್ಳಿ, ತುಂಬಾ ತೆಳುವಾಗಿ ಅಥವಾ ತುಂಬಾ ದಪ್ಪವಾಗಿಯೂ ಹಿಟ್ಟು ಮಾಡಿಕೊಳ್ಳಬಾರದು. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಖಾರದ ಪುಡಿ ಉಪ್ಪು ಹಾಕಿಟ್ಟಿರುವ ಸೋರೆಕಾಯಿಯನ್ನು ಹಿಟ್ಟಿನಲ್ಲಿ ಅದ್ದಿಕೊಂಡು ಎಣ್ಣೆಗೆ ಬಿಡಿ.
ಎಣ್ಣೆಯಲ್ಲಿ ಎರಡೂ ಕಡೆ ಚೆನ್ನಾಗಿ ಕಾಯುವಂತೆ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸೋರೆಕಾಯಿ ಬಜ್ಜಿ ರೆಡಿಯಾಗುತ್ತದೆ. ಇದರ ಜೊತೆಗೆ ಕಾಯಿ ಚಟ್ನಿ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಅಲ್ಲದೆ ಟೀ-ಕಾಫಿ ಜೊತೆಗೂ ಇದು ಅತ್ಯುತ್ತಮ ಸ್ನ್ಯಾಕ್ಸ್ ಆಗಿದೆ. ನೀವು ಸಹ ಮನೆಯಲ್ಲಿ ಈ ಬಜ್ಜಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
