Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಖಾಲಿ ದೋಸೆ ಕೆಂಪು ಚಟ್ನಿ ಮನೆಯಲ್ಲೇ ಮಾಡಿ..! ಇಲ್ಲಿದೆ ಫಸ್ಟ್ ಕ್ಲಾಸ್ ರೆಸಿಪಿ
ದೋಸೆ ರುಚಿ ಯಾರಿಗೆ ಇಷ್ಟವಾಗಲ್ಲ ಹೇಳಿ. ಎಲ್ಲರಿಗೂ ಬಗೆ ಬಗೆಯ ದೋಸೆಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುವುದು ನೋಡಬಹುದು. ಇನ್ನು ಮನೆಯಲ್ಲಿ ಹೋಟೆಲ್‌ನಲ್ಲಿ ವಿಭಿನ್ನ ರುಚಿಯ ದೋಸೆ ಮಾಡಿ ಸವಿಯಲು ಅವರು ಯಾವಾಗಲು ಮುಂದಾಗುವುದು ಸಹ ಸಾಮಾನ್ಯ. ಬೆಳಗ್ಗೆ ತಿಂಡಿಗೆ ದೋಸೆ ಮಾಡಿದ್ದರೆ ಯಾವ ಪ್ರಶ್ನೆ ಮಾಡದೆ ಸವಿಯುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸಹ ಈ ದೋಸೆಯನ್ನು ಬಹಳ ಇಷ್ಟಪಟ್ಟು ಸವಿಯುವುದು ನೋಡಬಹುದು.
ಇನ್ನು ದೋಸೆಯಲ್ಲೂ ಹತ್ತು ಹಲವು ವಿಧಗಳ ಮಾಡುವುದು ಕಾಮನ್, ಹೋಟೆಲ್‌ಗಳಲ್ಲಿ ದೋಸೆ ಬಗೆಯ ಪಟ್ಟಿಯೇ ಇರಲಿದೆ. ಒಂದೊಂದು ವಿಧ ಒಂದೊಂದು ರೀತಿ ರುಚಿ ನೀಡಲಿದೆ. ಇನ್ನು ನೀವು ಕೂಡ ದೋಸೆ ಪ್ರಿಯರಾಗಿದ್ದರೆ ಮಸಾಲೆ ದೋಸೆ, ರವೆ ದೋಸೆ, ನೀರ್ ದೋಸೆ, ತರಕಾರಿ ದೋಸೆ, ಸೆಟ್ ದೋಸೆ, ಉದ್ದಿನ ದೋಸೆ, ಬೆಣ್ಣೆ ದೋಸೆ ಹೀಗೆ ಹತ್ತಾರು ಬಗೆ ಸವಿದಿರುತ್ತೀರಿ.

ನಾವಿಂದು ಈ ದೋಸೆ ಪ್ರಿಯರಿಗಾಗಿಯೇ ಹೊಸದಾಗಿ ಖಾಲಿ ದೋಸೆ ಹಾಗೆ ಕೆಂಪು ಚಟ್ನಿ ಮಾಡುವ ಕುರಿತಾಗಿ ತಿಳಿಸಲಿದ್ದೇವೆ. ಖಾಲಿ ದೋಸೆಗೆ ಕೆಂಪು ಚಟ್ನಿ ಸವಿಯಲು ನೀಡಿದರೆ ಆ ರುಚಿಗೆ ನೀವು ಫಿದಾ ಆಗಿರುತ್ತೀರಿ. ಬಹಳ ಸುಲಭವಾಗಿ ಈ ದೋಸೆ ಮಾಡಬಹುದು, ಹಾಗೆ ಚಟ್ನಿ ಕೂಡ ಈ ದೋಸೆಯ ರುಚಿಯನ್ನು ದುಪ್ಪಟ್ಟಾಗಿಸಲಿದೆ. ಹೀಗಾಗಿ ನಾವಿಂದು ಈ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ.
ಖಾಲಿ ದೋಸೆ ಕೆಂಪು ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಖಾಲಿ ದೋಸೆ ಕೆಂಪು ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಉದ್ದಿನ ಬೇಳೆ
- ಮೆಂತ್ಯ
- ಅವಲಕ್ಕಿ
- ಮಂಡಕ್ಕಿ
- ಕರಿಬೇವು
- ಉಪ್ಪು
- ಎಣ್ಣೆ
- ಒಣ ಮೆಣಸು
- ತೆಂಗಿನಕಾಯಿ
- ಹುರಿಗಡಲೆ
- ಏಲಕ್ಕಿ
- ಲವಂಗ
ಖಾಲಿ ದೋಸೆ ಕೆಂಪು ಚಟ್ನಿ ಮಾಡುವುದು ಹೇಗೆ?
ಒಂದು ಬೌಲ್‌ನಲ್ಲಿ ಅಕ್ಕಿ, ಮತ್ತೊಂದು ಬೌಲ್‌ನಲ್ಲಿ ಉದ್ದು ಹಾಕಿ 4 ಗಂಟೆ ನೆನೆಸಿಡಬೇಕು. ಈಗ ಒಂದು ಬೌಲ್‌ನಲ್ಲಿ ಕಾಲು ಕಪ್ ಅವಲಕ್ಕಿ ಹಾಗೆ ಮಂಡಕ್ಕಿಯನ್ನು ನೆನೆಯಲು ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ನೆನೆಸಿಟ್ಟಿದ್ದ ಅಕ್ಕಿಯನ್ನು ಹಾಕಿಕೊಂಡು ಬಳಿಕ ಇದಕ್ಕೆ ಮೆಂತ್ಯ, ಉಪ್ಪು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ನೆನೆಸಿಟ್ಟ ಉದ್ದಿನ ಬೇಳೆಯನ್ನು ಹಾಕಿಕೊಂಡು ಅದಕ್ಕೆ ಅವಲಕ್ಕಿ ಹಾಗೆ ನೆನೆಸಿಟ್ಟ ಮಂಡಕ್ಕಿಯನ್ನು ಸಹ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಮಿಕ್ಸಿ ಜಾರ್‌ಗೆ ನೀರು ಹಾಕಿ ಅದನ್ನು ಹಿಟ್ಟಿನೊಂದಿಗೆ ಬೆರೆಸಿಕೊಳ್ಳಿ. ಈ ಹಿಟ್ಟನ್ನು ಚೆನ್ನಾಗಿ ಒಮ್ಮೆ ಕಲಸಿ 8 ಗಂಟೆಯಾದರು ಮುಚ್ಚಳ ಮುಚ್ಚಿ ಇಟ್ಟುಕೊಳ್ಳಿ.
ಈಗ ಕೆಂಪು ಚಟ್ನಿ ಮಾಡಿಕೊಳ್ಳಿ. ಮೊದಲು ಒಂದು ಮಿಕ್ಸಿ ಜಾರ್‌ಗೆ ಕಾಯಿ ಹುರಿಗಡಲೆ, ಒಣ ಮೆಣಸು, ಕರಿಬೇವು, ಉಪ್ಪು, ಏಲಕ್ಕಿ, ಲವಂಗ, ಹುಣಸೆ ಹುಳಿ ಹಾಕಿಕೊಂಡು ಕಾಲು ಕಪ್ ನೀರು ಹಾಕಿ ರುಬ್ಬಿಕೊಳ್ಳಿ. ಇಷ್ಟಾದರೆ ಕೆಂಪು ಚಟ್ನಿ ರೆಡಿಯಾಗುತ್ತೆ. ಈ ಚಟ್ನಿ ಆದಷ್ಟು ಗಟ್ಟಿಯಾಗಿರಲಿ. ಅದರಲ್ಲೂ ದೋಸೆಗೆ ಗಟ್ಟಿ ಚಟ್ನಿ ಬಹಳ ರುಚಿ ನೀಡಲಿದೆ.
ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳುತ್ತಾ ಮಧ್ಯದಲ್ಲಿ ಹಾಕಿಕೊಳ್ಳಿ. ಹಾಗೆ ತಿರುಗಿಸಲು ಮುಂದಾಗಬೇಡಿ. ಹಾಗೆ ಒಂದು ಕಡೆ ಕಾಯಲು ಬಿಟ್ಟರೆ ಸಾಕಾಗುತ್ತದೆ. ಇದು ಸೆಟ್ ದೋಸೆಯಂತೆ ಕಾಣಲಿದೆ. ಇಷ್ಟಾದರೆ ಮೃದುವಾದ ದೋಸೆ ಸವಿಯಲು ಸಿದ್ಧವಾಗುತ್ತೆ. ನೀವು ಕೂಡ ಈ ರೀತಿ ದೋಸೆ ಮಾಡಿ ನೋಡಿ.



Click it and Unblock the Notifications