Latest Updates
-
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್!
ಕೃಷ್ಣನಿಗೆ ಪ್ರಿಯವಾದ ಬೆಣ್ಣೆ ಚಕ್ಲಿ ಮಾಡಿ: ಇಲ್ಲಿದೆ ಸುಲಭದ ತಿಂಡಿ ರೆಸಿಪಿ
ಹಬ್ಬದಲ್ಲಿ ಸವಿಯಲು ಹಾಗೆ ಮನೆಯಲ್ಲಿ ಗರಿ ಗರಿಯಾಗಿ ಮಾಡುವಂತಹ ಚಕ್ಲಿ ಎಲ್ಲರಿಗೂ ಇಷ್ಟವಾಗುತ್ತೆ. ಹಬ್ಬದ ಸಂಭ್ರಮ ಹೆಚ್ಚಿಸುವಂತಹ ರುಚಿ ರುಚಿಯ ಚಕ್ಲಿಗಳ ನೀವು ಮಾಡಿ ಸವಿದಿರುತ್ತೀರಿ. ಹಾಗೆ ಅಂಗಡಿ, ಬೇಕರಿಯಲ್ಲಿ ಸಿಗುವಂತಹ ರುಚಿ ರುಚಿಯ ಬೆಣ್ಣೆ ಚಕ್ಲಿಯಂತು ಎಲ್ಲರ ಬಾಯಲ್ಲೂ ನೀರು ತರಿಸಲಿದೆ. ಚಕ್ಲಿ ಅಂದ್ರೆ ಗಟ್ಟಿಯಾಗಿರಬೇಕು ಎಂದೇನಿಲ್ಲ. ಈ ರೀತಿ ಮೃದುವಾದ ಬೆಣ್ಣೆಯಂತಹ ಈ ಚಕ್ಲಿ ಮಾಡಿ ಸವಿದು ನೋಡಿ.
ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ನಿಮಗೆ ಈ ಚಕ್ಲಿ ಇಷ್ಟವಾಗುತ್ತೆ, ಒಮ್ಮೆ ಮಾಡಿದರೆ ಹಲವು ದಿನಗಳ ಕಾಲ ಇಟ್ಟು ಸವಿಯಬಹುದು. ಹೀಗಾಗಿ ಎಲ್ಲರು ಈ ಚಕ್ಲಿ ಮಾಡಿ ಸವಿಯುವುದು ನೋಡಬಹುದು. ಅದ್ರಲ್ಲೂ ಈ ಚಕ್ಲಿಯು ಹಬ್ಬದಲ್ಲಿ ಮಾಡಿ ಸವಿಯುವುದು ಕಾಮನ್. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ.

ನಾವಿಂದು ಈ ಶ್ರಾವಣ ಮಾಸದಲ್ಲಿ ಹಬ್ಬಗಳ ಸಮಯಕ್ಕೆ ಮಾಡುವಂತಹ ರುಚಿ ರುಚಿಯಾದ ಚಕ್ಲಿಯನ್ನು ಮಾಡಿ ಸವಿಯುವ ಕುರಿತು ತಿಳಿಯೋಣ. ಅದ್ರಲ್ಲೂ ಇದು ಸಾಮಾನ್ಯ ಚಕ್ಲಿ ಅಲ್ಲ ಬದಲಿದೆ ಬೆಣ್ಣೆಯಿಂದ ಮಾಡುವ ಮೃದುವಾದ ಚಕ್ಲಿ ಮಾಡಿ ಸವಿಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೆಣ್ಣೆ ಚಕ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟೆಲ್ಲಾ ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೆಣ್ಣೆ ಚಕ್ಲಿ ಮಾಡಲು ಬೇಕಾಗುವ ವಸ್ತುಗಳು
- ಹುರಿಹಗಡಲೆ
- ಅಕ್ಕಿ ಹಿಟ್ಟು
- ಕಡಲೆ ಹಿಟ್ಟು
- ಇಂಗು
- ಉಪ್ಪು
- ಎಣ್ಣೆ
- ಬೆಣ್ಣೆ
- ಅರಶಿಣ
- ಜೀರಿಗೆ
ಬೆಣ್ಣೆ ಚಕ್ಲಿ ಮಾಡುವುದು ಹೇಗೆ?
ಮೊದಲು ಒಂದು ಕಪ್ ಹುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಹುಡಿ ಮಾಡಿ ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಒಂದು ಬೌಲ್‌ಗೆ ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಕಡಲೆ ಹಿಟ್ಟು ಹಾಗೆ ಕಾಲು ಕಪ್ ಹುರಿಗಡಲೆ ಹಿಟ್ಟು ಹಾಕಿಕೊಂಡು ಬಳಿಕ ಇಂಗು, ಅರಶಿಣ, ಉಪ್ಪು, ಜೀರಿಗೆ ಹಾಕಿ ಮೊದಲು ಡ್ರೈ ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ನಿಂಬೆ ಗಾತ್ರದಷ್ಟು ಬೆಣ್ಣೆ ಇದಕ್ಕೆ ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟಿನಲ್ಲಿ ಬೆಣ್ಣೆ ಚೆನ್ನಾಗಿ ಬೆರೆಯುವಂತೆ ಕಲಸಿಕೊಳ್ಳಬೇಕು. ಬಳಿಕ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಹಿಟ್ಟು ಮೆದುವಾಗಿ ಬರುವಂತೆ ಹದ ಮಾಡಿಕೊಳ್ಳಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಬರುವಂತೆ ಹದ ಮಾಡಿಕೊಳ್ಳಿ.
ಹಿಟ್ಟು ಕಲಸಿದ ಬಳಿಕ ಉದ್ದವಾದ ಉಂಡೆಯಂತೆ ಹಿಟ್ಟನ್ನು ಕಟ್ಟಿ ಇಟ್ಟುಕೊಳ್ಳಿ. ಈಗ ಚಕ್ಲಿ ಅಚ್ಚನ್ನು ತೆಗೆದುಕೊಂಡು ಅದರಲ್ಲಿ ಹಿಟ್ಟನ್ನು ಹಾಕಿಕೊಂಡು ಎಣ್ಣೆಗೆ ಬಿಡಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿಟ್ಟು ಎಣ್ಣೆ ಹದವಾಗಿ ಬಿಸಿಯಾದಾಗ ಚಕ್ಲಿ ಹಾಕಿಕೊಳ್ಳಿ. ನೀವು ಚಕ್ರದಂತಹ ಚಕ್ಲಿಗಿಂತ ಮುರುಕಲು ಚಕ್ಲಿ ಮಾಡಿ. ಎಣ್ಣೆಯಲ್ಲಿ ಕರಿದುಕೊಂಡು ಎಣ್ಣೆ ಇಳಿಯಲು ಜರಡಿಯಲ್ಲಿ ಹಾಕಿಡಿ. ಇಷ್ಟಾದರೆ ಮೃದುವಾದ ಚಕ್ಲಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ನೋಡಿ.
ಅದ್ರಲ್ಲೂ ಕೃಷ್ಣ ಜನ್ಮಾಷ್ಠಮಿಯಲ್ಲಿ ಈ ರೀತಿ ಕುರುಕಲು ತಿಂಡಿ ಮಾಡುವುದು ಹೆಚ್ಚು. ಮಕ್ಕಳಿಗಂತೂ ಇದು ಬಹಳ ಇಷ್ಟವಾಗುತ್ತೆ. ಇನ್ನು ಇದೇ ರೀತಿಯಾಗಿ ಗಟ್ಟಿ ಚಕ್ಲಿಯನ್ನು ಕೂಡ ಮಾಡಲಾಗುತ್ತದೆ. ಅವುಗಳಲ್ಲಿ ಹಲವು ರೀತಿ ವಿಧಗಳಿವೆ. ಖಾರವಾಗಿ ಮಸಾಲೆ ಭರತವಾಗಿಯೂ ಚಕ್ಲಿ ಮಾಡಬಹುದು. ಆದ್ರೆ ಈ ರೀತಿ ಮೃದುವಾದ ಚಕ್ಲಿ ಸವಿಯಲು ಇಷ್ಟಪಡುವವರು ಹೆಚ್ಚು.



Click it and Unblock the Notifications
