Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಉದ್ದು, ಅವಲಕ್ಕಿ ಹಾಕದೆಯೇ ಮಾಡಬಹುದು ಸೆಟ್ ದೋಸೆಗಿಂತಲೂ ಮೃದುವಾದ, ರುಚಿಯಾದ ದೋಸೆ
ಉದ್ದು ಬೇಡ, ಅವಲಕ್ಕಿ ಬೇಡ ಈ ಎರಡೂ ಸಾಮಗ್ರಿ ಇಲ್ಲದೆಯೂ ನೀವು ತುಂಬಾ ಮೃದುವಾದ ದೋಸೆ ಮಾಡಬಹುದು, ದೋಸೆ ಚೆನ್ನಾಗಿ ಹುದುಗು ಬರುತ್ತದೆ, ದೋಸೆ ಹಾಕಿದಾಗ ಸೆಟ್ ದೋಸೆಯಂತೆ ಮೃದುವಾಗಿ ತುಂಬಾ ರುಚಿಯಾಗಿ ಬರುತ್ತದೆ. ಈ ದೋಸೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಮೈಕೈ ನೋವು, ಸೊಂಟ ನೋವು ಈ ಬಗೆಯ ಸಮಸ್ಯೆ ಇದ್ದರೆ ಈ ದೋಸೆಯಂತೂ ತುಂಬಾ ಒಳ್ಳೆಯದು. ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿ
2 ಲೋಟ ಅಕ್ಕಿ
4 ಚಮಚ ಮೆಂತೆ
ರುಚಿಗೆ ತಕ್ಕ ಉಪ್ಪು
1 ಈರುಳ್ಳಿ
1 ಚಮಚ ಜೀರಿಗೆ
ಮಾಡುವ ವಿಧಾನ
- ನೀವು ಅಕ್ಕಿಯನ್ನು ತೊಳೆದು 8 ಗಂಟೆ ನೆನೆ ಹಾಕಿ.
- ಮೆಂತೆಯನ್ನು ತೊಳೆದು ಪ್ರತ್ಯೇಕ ಬೌಲ್ನಲ್ಲಿ 8 ಗಂಟೆ ನೆನೆ ಹಾಕಿ (ಮೆಂತೆ ನೀರು ಗ್ರೈಂಡ್ ಮಾಡುವಾಗ ಬಳಸಿ)
- 8 ಗಂಟೆ ಕೌಂಟ್ ಮಾಡಿ ಹಾಕಬೇಕಾಗಿಲ್ಲ, 8-10 ಗಂಟೆಯಾದರೂ ತೊಂದರೆಯಿಲ್ಲ
- ಈಗ ಅಕ್ಕಿ ರುಬ್ಬುವಾಗ 1ಚಮಚ ಜೀರಿಗೆ , 1 ಈರುಳ್ಳಿ ಕೂಡ ಸೇರಿಸಿ.
- ಮೆಂತೆ ರುಬ್ಬುವಾಗ ಅ ಕಪ್ ಅನ್ನ ಕೂಡ ಸೇರಿಸಿ ರುಬ್ಬಿ
- ಅಕ್ಕಿಯನ್ನು ರುಬ್ಬಿ ಹಿಟ್ಟಿನ ಜೊತೆಗೆ ಮಿಕ್ಸ್ ಮಾಡಿ
- ರುಚಿಗೆ ತಕ್ಕ ಉಪ್ಪು ಸೇರಿಸಿ ಕೈಯಿಂದಲೇ ಮಿಕ್ಸ್ ಮಾಡಿಡಿ.
- ಇನ್ನು ಚಳಿಗಾಲದಲ್ಲಿ ಅಕ್ಕಿ ಹಿಟ್ಟು ಉಬ್ಬಿ ಬರಲ್ಲ, ಆವಾಗ ಬೇಕಾದರೆ 1 ENO ಪೌಡರ್ ಬೇಕಾದರೆ ಸೇರಿಸಬಹುದು.
- ಈಗ ರುಬ್ಬುದ ಮಿಶ್ರಣವನ್ನು 8 ಗಂಟೆಗಳ ಹುದುಗು ಬರಲು ಇಡಿ.
- ನಂತರ ದೋಸೆ ಕಾವಲಿಗೆ ಎಣ್ಣೆ ಸವರಿ ದೋಸೆ ಮಾಡಿ, ಮೃದುವಾದ ದೋಸೆ ರೆಡಿ.
ಇತರ ಸಲಹೆ
ಇದಕ್ಕೆ ನೀವು ಬೇಕಿದ್ದರೆ ಈರುಳ್ಳಿ, ಕೊತ್ತಂಬರಿ ಸೊಪ್ಪು ಇವುಗಳನ್ನು
ಸೇರಿಸಬಹುದು
ಇಲ್ಲಾ ಈ ದೋಸೆ ಮಾಡಿದಾಗ ದೋಸೆಗೆ ಮಾಡಿಟ್ಟ ಚಟ್ನಿ ಪುಡಿ ಮಾಡಿದ್ದನ್ನು
ಉದುರಿಸಬಹುದು.
ಈ ದೋಸೆಗೆ ನೀವು ತುಪ್ಪ ಅಥವಾ ಬೆಣ್ಣೆ ಹಾಕಿದರೆ ಇನ್ನೂ ರುಚಿಯಾಗಿರುತ್ತದೆ.
ಮೆಂತೆ ದೋಸೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು:
ಮಧುಮೇಹಿಗಳು ದೋಸೆ ತಿನ್ನಲು ಭಯಪಡುತ್ತಾರೆ, ದೋಸೆ ಅಕ್ಕಿಯಿಂದ ಮಾಡಿರುವುದರಿಂದ
ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಎಂಬ ಭಯದಿಂದ ದೋಸೆ
ತಿನ್ನುತ್ತಾರೆ.
ಇದನ್ನು ಮೆಂತೆ ಹಾಕಿ ಮಾಡಿರುವುದರಿಂದ ದೇಹದಲ್ಲಿ ಸಕ್ಕರೆಯಂಶ
ನಿಯಂತ್ರಣದಲ್ಲಿಡಲು ಸಹಕಾರಿ
ಕಾಲುಗಳಲ್ಲಿ ನೋವು ಇದ್ದರೆ ಅದು ಕಡಿಮೆಯಾಗಲಿದೆ.
ಸೊಂಟ ನೋವಿನ ಸಮಸ್ಯೆಗೆ ಮೆಂತೆ ಒಳ್ಳೆಯದು
ಮೆಂತೆ ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುತ್ತದೆ.
ಈ ದೋಸೆ ಮಾಡಿ ಇದಕ್ಕೆ ಕಾಯಿ ಚಟ್ನಿ ಮಾಡಿ
ಕಾಯಿ ಚಟ್ನಿಗೆ ಬೇಕಾಗುವ ಸಾಮಗ್ರಿತೆಂಗಿನಕಾಯಿ
2 ಹಸಿ ಮೆಣಸು
1 ಈರುಳ್ಳಿ
1 ಚಮಚ ಹುರಿಗಡಲೆ
ಸ್ವಲ್ಪ ಹುಣಸೆಹಣ್ಣು
ರುಚಿಗೆ ತಕ್ಕ ಉಪ್ಪು
ಈ ಸಾಮಗ್ರಿಯನ್ನು ಮಿಕ್ಸಿ ಜಾರ್ಗೆ ಸೇರಿಸಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಗಟ್ಟಿ ಚಟ್ನಿ ಮಾಡಿ, ದೋಸೆ ಜೊತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ.



Click it and Unblock the Notifications
