Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಮೃದುವಾಗಿ ಉಬ್ಬುವ ಚಪಾತಿ ಮಾಡೋದು ಹೇಗೆ?
ಎಲ್ಲರ ಮನೆಯಲ್ಲೂ ಬೆಳಗ್ಗೆ ತಿಂಡಿಗೆ ಚಪಾತಿ ಮಾಡುವುದು ನೋಡಿರುತ್ತೇವೆ, ಆದ್ರೆ ಬೆಳಗ್ಗೆ ಚಪಾತಿ ತಿನ್ನುವುದು ಅಂದ್ರೆ ಕೆಲವರು ಮೂಗು ಮುರಿಯುತ್ತಾರೆ. ಚಪಾತಿ ತಿಂದರೆ ಹೆಚ್ಚು ನೀರು ಕುಡಿಯಬೇಕಾಗುತ್ತದೆ ಎನ್ನುತ್ತಾರೆ. ಜೊತೆಗೆ ಚಪಾತಿ ತಿನ್ನಲು ಗಟ್ಟಿಯಾಗಿದೆ ಎಂಬ ಹತ್ತಾರು ದೂರು ಹೇಳುತ್ತಾರೆ.
ಆದ್ರೆ ಚಪಾತಿ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾದ ತಿಂಡಿ ಆಗಿದೆ. ಅತ್ಯುತ್ತಮ ಫೈಬರ್ನಿಂದ ಕೂಡಿದ್ದು, ಕಡಿಮೆ ಕ್ಯಾಲೋರಿ ಹೊಂದಿದೆ. ಹೀಗಾಗಿ ತೂಕ ಇಳಿಸುವವರ ಫೇವರಿಟ್ ಫುಡ್ ಅಂದ್ರೆ ಅದು ಚಪಾತಿಯಾಗಿದೆ. ಆದ್ರೆ ಚಪಾತಿಗೆ ಹಿಟ್ಟು ಮಾಡಿಕೊಳ್ಳುವುದೇ ಹಲವರಿಗೆ ಸಮಸ್ಯೆಯಾಗಿರುತ್ತದೆ.

ಅವರಿಗೆ ಹಿಟ್ಟು ಯಾವ ರೀತಿ ಮಾಡಿದರೆ ಚಪಾತಿ ಹೂವಿನಂತೆ ಮೃದುವಾಗಿ ಉಬ್ಬಿಕೊಂಡು ಬರುತ್ತದೆ ಎಂಬುದು ತಿಳಿದಿರುವುದಿಲ್ಲ. ಕೆಲವೊಮ್ಮೆ ಹಿಟ್ಟು ಮಾಡಿಕೊಳ್ಳವುದರಲ್ಲಿ ತಪ್ಪಾದರೆ ಇಡೀ ಚಪಾತಿ ತಿಂಡಿ ಹಾಳಾಗುತ್ತದೆ. ಆದ್ರೆ ಇದಕ್ಕೆ ಸರಿಯಾಗಿ ಹಿಟ್ಟು ಮಾಡಿಕೊಳ್ಳುವುದು ಹೇಗೆ? ಸರಿಯಾದ ಉಬ್ಬುವಂತೆ ಚಪಾತಿ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿಯೋಣ.
ರುಚಿಕರ, ಮೃದುವಾದ ಚಪಾತಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಸರಿಯಾಗಿ ಚಪಾತಿ ಮಾಡುವ ವಿಧಾನ ಯಾವುದು? ಮಾಡಲು ಎಷ್ಟು ಸಮಯ ಹಿಡಿಯುತ್ತೆ? ಹಿಟ್ಟು ಮಾಡಿಕೊಳ್ಳುವಾಗ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೃದು ಚಪಾತಿ ಮಾಡಲು ಬೇಕಾಗುವ ಪದಾರ್ಥಗಳು
- ಗೋಧಿ ಹಿಟ್ಟು - 1 ಕಪ್
- ರುಚಿಗೆ ಉಪ್ಪು
- ಹಿಟ್ಟಿಗೆ ಬೆರೆಸಲು ನೀರು
- ಎಣ್ಣೆ
ಮೃದು ಚಪಾತಿ ಮಾಡುವುದು ಹೇಗೆ?
ಮೊದಲು ಒಂದು ಕಪ್ ಗೋಧಿ ಹಿಟ್ಟು ಪಾತ್ರೆಗೆ ಹಾಕಿಕೊಂಡು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ಆದಷ್ಟು ನುಣುಪಾಗಿರಬೇಕು. ಈಗ ಒಂದು ಕಪ್ ಹಿಟ್ಟಿಗೆ ಬಿಸಿ ನೀರು ಹಾಕಿ. ಸ್ವಲ್ಪ ಸ್ವಲ್ಪವೇ ಬಿಸಿ ನೀರು ಹಾಕಿಕೊಂಡು ಹಿಟ್ಟು ಕಲಸಿಕೊಳ್ಳಿ. ಕೈಗೆ ನೀರು ಅದ್ದಿಕೊಂಡು ಹಿಟ್ಟು ಕಲಸಿಕೊಳ್ಳಿ.
ಚಪಾತಿ ಹಿಟ್ಟು ತುಂಬಾ ನುಣುಪಾಗಿ ಬರುವವರೆಗೂ ಕಲಸಿಕೊಳ್ಳಿ. ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಇಟ್ಟು ಮುಚ್ಚಿ 30 ನಿಮಿಷ ಬಿಡಿ. ಬಳಿಕ ಮತ್ತೆ 1 ನುಮಿಷ ಅದೇ ಹಿಟ್ಟನ್ನು ಕಲಸಿಕೊಳ್ಳಿ. ಬಳಿಕ ಮತ್ತೆ ಚಪಾತಿ ಮಾಡಲು ಬೇಕಾಗುವ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ. ನಿಮಗೆ ಯಾಔ ಸೈಜ್ ಚಪಾತಿ ಬೇಕು ಎಂಬ ಮೇಲೆ ಈ ಉಂಡೆಯ ಗಾತ್ರ ನಿರ್ಧರಿಸಿ.
ಉಂಡೆ ಮಾಡಿಕೊಂಡ ಬಳಿಕ ಅದನ್ನು ಮುಚ್ಚಿಟ್ಟುಕೊಳ್ಳಿ. ಬಳಿಕ ಚಪಾತಿಯನ್ನು ಮಣೆಗೆ ಹಾಕಿಕೊಂಡು ಲಟ್ಟಿಸಿಕೊಳ್ಳಿ. ಎಲ್ಲಿಯೂ ಸ್ವಲ್ಪವೂ ಎಣ್ಣೆ ಬಳಸಬೇಡಿ. ಚಪಾತಿ ಲಟ್ಟಿಸಿಕೊಂಡ ಬಳಿಕ ಅದನ್ನು ಪಾನ್ಗೆ ಹಾಕಿಕೊಂಡು ಬೇಯಿಸಿಕೊಳ್ಳಿ. ಮೊದಲು ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ಈ ವೇಳೆ ಎರಡು ಹನಿ ಎಣ್ಣೆ ಹಾಕಿಕೊಂಡರೆ ಸಾಕು.
ಎರಡು ಕಡೆ ಚಪಾತಿಯನ್ನು ಸ್ವಲ್ಪವೇ ಕಾಯಿಸಿಕೊಂಡು ಬಳಿಕ ಅದನ್ನು ಜಾಲರಿ ಮೇಲೆ ಹಾಕಿ ನೇರವಾಗಿ ಒಲೆಯ ಬೆಂಕಿಗೆ ಇಡಬೇಕು. ಈ ವೇಳೆ ಎರಡು ಕಡೆ ಕಾಯಿಸಿಕೊಳ್ಳಿ. ಈ ವೇಳೆ ಉರಿ ಜಾಸ್ತಿ ಮಾಡಿಕೊಳ್ಳಿ, ಈ ವೇಳೆ ಚಪಾತಿ ಉಬ್ಬಿಕೊಳ್ಳುತ್ತದೆ. ಮೊದಲು ಕಾವಲಿಯಲ್ಲಿ ಬೇಯಿಸಿದ ಬಳಿಕ ಅದನ್ನು ಜಾಲರಿಯ ಮೇಲೆ ಇಟ್ಟು ಕಾಯಿಸಬೇಕು, ಹೀಗೆ ಮಾಡಿದರೆ ಮಾತ್ರ ಅದು ಉಬ್ಬಿಕೊಂಡು ಹತ್ತಿಯಂತೆ ಮೃದುವಾಗಿ ಬರಲಿದೆ.
ಇಷ್ಟಾದರೆ ನಿಮ್ಮ ಮುಂದೆ ಉಬ್ಬಿರುವ ರುಚಿ ರುಚಿಯ ಮೃದುವಾದ ಚಪಾತಿ ರೆಡಿಯಾಗುತ್ತದೆ. ಇದನ್ನು ನೀವು ಚಟ್ನಿ ಜೊತೆ ಸವಿಯಲು ನೀಡಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ.



Click it and Unblock the Notifications
