Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸುಲಭದ ಬಿಡದಿ ಇಡ್ಲಿ ಮಾಡೋದು ಹೇಗೆ? ಹತ್ತಿಯಂತೆ ಮೃದುವಾದ ಇಡ್ಲಿ ಇದು!!
ನೀವು ಬೆಳಗ್ಗೆ ತಿಂಡಿಗೆ ಹಲವು ಬಗೆಯ ತಿಂಡಿಗಳ ಮಾಡಿ ಸವಿದಿರುತ್ತಿರಿ. ಅದರಲ್ಲೂ ದಕ್ಷಿಣ ಭಾರತದ ಉಪಹಾರಗಳಲ್ಲಿ ಹಲವು ಅದ್ಭುತ ರುಚಿಯ ಹಾಗೆ ಆರೋಗ್ಯಕರ ಖಾದ್ಯಗಳು ಸೇರಿವೆ. ಇಂತಹ ಆರೋಗ್ಯಕರ ಖಾದ್ಯದಲ್ಲಿ ಇಡ್ಲಿ ಕೂಡ ಒಂದಾಗಿದೆ. ಎಣ್ಣೆ ಬಳಸದೆ ಈ ಇಡ್ಲಿ ಮಾಡಬಹುದಾಗಿರೋದ್ರಿಂದ ಎಲ್ಲರಿಗೂ ಇದು ಇಷ್ಟವಾಗುತ್ತೆ. ಇನ್ನು ಇಡ್ಲಿಯಲ್ಲಿ ಹಲವು ಬಗೆಯಲ್ಲಿ ಮಾಡಿ ಸವಿಯಬಹುದು ಎಂಬುದನ್ನು ನೀವು ಕೂಡ ತಿಳಿದಿದ್ದೀರಿ.
ಇಡ್ಲಿಯಲ್ಲಿ ಹತ್ತಾರು ವಿಧಗಳಿವೆ ಹಾಗೆ ಒಂದೊಂದು ಪ್ರದೇಶಕ್ಕೂ ಒಂದೊಂದು ರೀತಿಯ ಇಡ್ಲಿ ಮಾಡಿ ಸವಿಯುವುದು ನೋಡಬಹುದು. ಆದ್ರೆ ನಾವಿಂದು ಸುಲಭವಾಗಿ ಮಾಡಬಹುದಾದ ಬಿಡದಿ ಇಡ್ಲಿ ಕುರಿತಾಗಿ ತಿಳಿದುಕೊಳ್ಳೋಣ. ನಮ್ಮ ರಾಜ್ಯದ ಈ ಇಡ್ಲಿ ಬಹಳ ಫೇಮಸ್, ಅದರಲ್ಲೂ ಬೆಂಗಳೂರು, ರಾಮನಗರ, ಕನಕಪುರ ಭಾಗದಲ್ಲಿ ಈ ಬಿಡದಿ ಇಡ್ಲಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಬಿಡದಿ ತಟ್ಟೆ ಇಡ್ಲಿ ಎಲ್ಲರಿಗೂ ಇಷ್ಟವಾಗುತ್ತೆ. ಬಹಳ ಮೃದುವಾಗಿ ಸುಲಭವಾಗಿ ಮಾಡಬಹುದಾದ ಇಡ್ಲಿಯ ಒಂದು ಪ್ರಕಾರ ಇದಾಗಿದೆ. ನೀವು ಬಿಡದಿಯಲ್ಲಿ ಮಾತ್ರವಲ್ಲ ಈಗ ಬಹಳ ಕಡೆಗಳಲ್ಲಿ ಬಿಡದಿ ಇಡ್ಲಿ ಹೋಟೆಲ್ ಎಂಬ ಬೋರ್ಡ್ ನೋಡಬಹುದು. ಹಾಗಾದ್ರೆ ಈ ಇಡ್ಲಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಬಿಡದಿ ತಟ್ಟೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಿಡದಿ ತಟ್ಟೆ ಇಡ್ಲಿ ಮಾಡಲು ಬೇಕಾಗುವ ವಸ್ತುಗಳು
- ಇಡ್ಲಿ ರೈಸ್
- ಉದ್ದಿನ ಬೇಳೆ
- ಸಾಬುದಾನ - 1/4 1/4 ಕಪ್
- ಮೆಂತ್ಯ
- ಅಡುಗೆ ಎಣ್ಣೆ
- ಅಡುಗೆ ಸೋಡಾ
- ರುಚಿಗೆ ತಕ್ಕಷ್ಟು ಉಪ್ಪು
ಬಿಡದಿ ತಟ್ಟೆ ಇಡ್ಲಿ ಮಾಡುವ ವಿಧಾನವೇನು?
ಒಂದು ದೊಡ್ಡ ಪಾತ್ರೆಗೆ 3 ಲೋಟ ಇಡ್ಲಿ ರೈಸ್, ಉದ್ದಿನ ಬೇಳೆ, ಮೆಂತ್ಯ ಹಾಕಿ ನೀರು ಹಾಕಿಕೊಂಡು 3 ಬಾರಿ ಚೆನ್ನಾಗಿ ತೊಳೆದುಕೊಂಡು ನಂತರ ನೀರಿನಲ್ಲಿ ನೆನೆಸಿಡಬೇಕು. ಈಗ ಇನ್ನೊಂದು ಪಾತ್ರೆಗೆ ಅವಲಕ್ಕಿ ಹಾಗೂ ಸಬ್ಬಕ್ಕಿ ಹಾಕಿಕೊಂಡು ಚೆನ್ನಾಗಿ ತೊಳೆದು ಅದನ್ನೂ ಅಕ್ಕಿಯ ಜೊತೆಗೆ ಹಾಕಿ ನೆನೆಯಲು ಬಿಡಿ. ಈ ಪದಾರ್ಥಗಳು 5 ಗಂಟೆಯಾದರು ನೆನೆಯಲು ಬಿಡಿ.
ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ನೆನೆದಿರುವ ಪದಾರ್ಥಗಳನ್ನು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಹೆಚ್ಚು ನೀರು ಹಾಕದೆ ಸ್ವಲ್ಪ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಹಿಟ್ಟು ಮಾಡಿಕೊಂಡು ರುಬ್ಬಿಕೊಳ್ಳಿ. ಹಾಗೆ ದೊಡ್ಡ ಪಾತ್ರೆಗೆ ಈ ಹಿಟ್ಟು ಹಾಕಿಕೊಳ್ಳಿ. ಇಡ್ಲಿ ಬ್ಯಾಟರ್ ರೆಡಿಯಾದ ಬಳಿಕ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಪಾತ್ರೆಗೆ ತಟ್ಟೆ ಮುಚ್ಚಿ ಒಂದು ರಾತ್ರಿ ಹಾಗೆಯೇ ಬಿಡಬೇಕು.
ಮಾರನೆ ದಿನ ಉಬ್ಬಿ ಬಂದಿರುವ ಹಿಟ್ಟಿಗೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಇಡ್ಲಿ ಕುಕ್ಕರ್ ಇಟ್ಟು ನೀರು ಬಿಸಿಯಾಗಲು ಬಿಡಿ. ಈಗ ತಟ್ಟೆ ಇಡ್ಲಿ ಮಾಡಲು ಬಳಸುವ ತಟ್ಟೆಗಳಿಗೆ ಎಣ್ಣೆ ಸವರಿಕೊಂಡು ಕುಕ್ಕರ್ ಒಳಗೆ ಇಟ್ಟುಕೊಂಡು ಇಡ್ಲಿ ಹಿಟ್ಟನ್ನು ಹಾಕಿಕೊಳ್ಳಿ. ಮುಕ್ಕಾಲು ಭಾಗ ತುಂಬುವಷ್ಟು ಇಡ್ಲಿ ಹಿಟ್ಟು ಹಾಕಿ ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಸುಮಾರು 10ರಿಂದ 12 ನಿಮಿಷ ಹಬೆಯಲ್ಲಿ ಇಡ್ಲಿಯನ್ನು ಬೇಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಬಿಡಡಿ ತಟ್ಟೆ ಇಡ್ಲಿ ಸವಿಯಲು ಸಿದ್ದವಾಗುತ್ತದೆ. ಇದರ ಜೊತೆಗೆ ಯಾವುದಾದರೊಂದು ಚಟ್ನಿ ಇದ್ದರೆ ಅದರ ರುಚಿಗೆ ನೀವು ಮನಸೋಲುತ್ತೀರಿ, ಹಾಗೆ ಈ ಮೃದುವಾದ ಇಡ್ಲಿಯನ್ನು ಮತ್ತೆ ಮತ್ತೆ ಸವಿಯಲು ಮುಂದಾಗುತ್ತೀರಿ.



Click it and Unblock the Notifications
