Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
100 ವರ್ಷ ಬದುಕಬೇಕಾ? ವಾರಕ್ಕೆ ಒಮ್ಮೆಯಾದರೂ ಈ ಇಡ್ಲಿ ತಿನ್ನಿ.. ಮಾಡೋದು ಹೇಗೆ?
ಇಡ್ಲಿ.. ಭಾರತದಲ್ಲಿ ಎಲ್ಲರೂ ಹೆಚ್ಚಾಗಿ ತಿನ್ನುವ ತಿಂಡಿಗಳಲ್ಲಿ ಇಡ್ಲಿಗೆ ಮೊದಲ ಸ್ಥಾನವಿದೆ. ಅದರಲ್ಲೂ ನಾವು ಹೆಚ್ಚಾಗಿ ತಿನ್ನುವುದು ಬಿಳಿ ಇಡ್ಲಿಯನ್ನು ಮಾತ್ರ. ಕೆಲವರಿಗೆ ಪ್ರತಿನಿತ್ಯ ಅದೇ ಇಡ್ಲಿ ತಿಂದು ತಿಂದು ಬೇಸರ ಉಂಟಾಗುತ್ತದೆ. ಆದರೆ, ಮನೆಯಲ್ಲಿ ಅಮ್ಮಂದಿರು ಆರೋಗ್ಯಕ್ಕೆ ಒಳ್ಳೆಯದು ಎಂದು ಇಡ್ಲಿಯನ್ನೇ ಹೆಚ್ಚಾಗಿ ಮಾಡ್ತಾರೆ. ನಿಮ್ಮ ಮನೆಯಲ್ಲಿಯೂ ಮಕ್ಕಳು ಮತ್ತು ದೊಡ್ಡವರು ಇಡ್ಲಿ ಬೇಡ ಎಂದರೆ, ರುಚಿಕರವಾಗಿಯೂ ಮತ್ತು ಆರೋಗ್ಯಕ್ಕೆ ಉಪಯುಕ್ತವಾಗುವಂತಹ ಸಜ್ಜೆ ಇಡ್ಲಿಯನ್ನು (Sajje Idli) ಮಾಡಿ. ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡಿ ಎಂದು ಕೇಳುತ್ತಾರೆ.
ಹೌದು, ಸಜ್ಜೆಯಲ್ಲಿ ಕಬ್ಬಿಣ, ಸತುವು ಹೆಚ್ಚಾಗಿ ಇರುವುದರಿಂದ ಮೂಳೆಗಳು ಉಕ್ಕಿನಂತೆ ಬಲವಾಗಿರುತ್ತವೆ. ಫೈಬರ್ ಅಂಶ ಕೂಡ ಹೆಚ್ಚಾಗಿರುವುದರಿಂದ ಮಲಬದ್ಧತೆ ಸಮಸ್ಯೆ ಇರುವವರಿಗೆ, ಡಯಟ್ ಮಾಡುವವರಿಗೆ ಸಜ್ಜೆಯಿಂದ ಮಾಡಿದ ಇಡ್ಲಿ ತುಂಬಾ ಒಳ್ಳೆಯದು. ರುಚಿಕರವಾದ ಮತ್ತು ಹತ್ತಿಯಂತೆ ಮೃದುವಾದ ಸಜ್ಜೆ ಇಡ್ಲಿಯನ್ನು (Bajra Idli) ಹೇಗೆ ಮಾಡುವುದು ಮತ್ತು ಸಜ್ಜೆ ಇಡ್ಲಿಗೆ ಬೇಕಾಗುವ ಸಾಮಗ್ರಿಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಸಜ್ಜೆ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು ಇಲ್ಲಿವೆ
• ಸಜ್ಜೆ ಕಾಳು / ಸಜ್ಜೆ ರವೆ
• ಇಡ್ಲಿ ಅಕ್ಕಿ
• ಉದ್ದಿನಬೇಳೆ
• ಸಬ್ಬಕ್ಕಿ
• ಮೆಂತ್ಯೆ ಕಾಳು
• ಅಡುಗೆ ಸೋಡ
ಸಜ್ಜೆ ಇಡ್ಲಿ ಮಾಡುವ ವಿಧಾನ ಹೀಗಿದೆ
ಮೊದಲಿಗೆ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ 1 ಗ್ಲಾಸ್ ಉದ್ದಿನ ಬೇಳೆಯನ್ನು ಹಾಕಿ, ಅದಕ್ಕೆ ನೀರು ಹಾಕಿ ಎರಡು ಬಾರಿ ಚೆನ್ನಾಗಿ ತೊಳೆಯಿರಿ. ನಂತರ ನೀರು ಹಾಕಿ 4 ರಿಂದ 5 ಗಂಟೆಗಳ ಕಾಲ ನೆನೆಸಿ ಇಡಿ. ಬಳಿಕ ನೆನೆಸಿದ ಉದ್ದಿನ ಬೇಳೆಯಲ್ಲಿನ ಶೇ.90 ರಷ್ಟು ನೀರನ್ನು ತೆಗೆದುಹಾಕಿ. ಉಳಿದಿರುವ ಸ್ವಲ್ಪ ನೀರನ್ನು ಉದ್ದಿನ ಬೇಳೆಯೊಂದಿಗೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ದೊಡ್ಡ ಪಾತ್ರೆಯಲ್ಲಿ 2 ಗ್ಲಾಸ್ ಸಜ್ಜೆ ರವೆಯನ್ನು ಹಾಕಿ ನೀರು ಹಾಕಿ, ಚೆನ್ನಾಗಿ ತೊಳೆದು ನೀರನ್ನು ತೆಗೆದು ಸಜ್ಜೆ ರವೆಯನ್ನು ಪಕ್ಕಕ್ಕೆ ಇಡಿ.
ಈಗ ಒಂದು ಹಾಟ್ ಬಾಕ್ಸ್ ಅಥವಾ ದೊಡ್ಡ ಪಾತ್ರೆಯಲ್ಲಿ ರುಬ್ಬಿಕೊಂಡ ಹಿಟ್ಟನ್ನು, ತೊಳೆದ ಸಜ್ಜೆ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ. ಇದನ್ನು ರಾತ್ರಿಯಿಡೀ ಅಥವಾ 7 ರಿಂದ 8 ಗಂಟೆಗಳ ಕಾಲ ಇಡಿ. ಬಳಿಕ ಮುಚ್ಚಳ ತೆಗೆದು, ಹಿಟ್ಟು ಹುದುಗಿದ ನಂತರ ಒಂದು ಬಾರಿ ಚೆನ್ನಾಗಿ ಕಲಕಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸ್ಪೂನ್ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ಹಿಟ್ಟು ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಬಳಸಬಹುದು. ಈಗ ಇಡ್ಲಿ ಪಾತ್ರೆಯಲ್ಲಿ ಹಿಟ್ಟನ್ನು ಹಾಕಿ ಬೇಯಿಸಿ. ಇಷ್ಟು ಮಾಡಿದರೆ, ಈಗ ಸಜ್ಜೆ ಇಡ್ಲಿ (sajja idli recipe) ಸಿದ್ಧ. ಇದನ್ನು ನಿಮಗೆ ಇಷ್ಟವಾದ ಚಟ್ನಿ, ಸಾಂಬಾರ್ ಅಥವಾ ಖಾರದ ಪುಡಿಯೊಂದಿಗೆ ತಿನ್ನಬಹುದು.

ಸಜ್ಜೆ ಇಡ್ಲಿಯಿಂದಾಗುವ ಪ್ರಯೋಜನಗಳು
ಸಜ್ಜೆ ಇಡ್ಲಿ ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನಿಮ್ಮ ದಿನಚರಿಯಲ್ಲಿ ಇದನ್ನು ಸೇರಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
• ಸಜ್ಜೆಯಲ್ಲಿ ಫೈಬರ್ ಹೆಚ್ಚಾಗಿ ಇರುವುದರಿಂದ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಇದರಿಂದ ಅತಿಯಾಗಿ ತಿನ್ನುವುದು ತಪ್ಪುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಡಬಹುದು.
• ಸಜ್ಜೆಯಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದವುಗಳನ್ನು ತಡೆಯಲು ಸಹಾಯ ಮಾಡುತ್ತದೆ.
• ಸಜ್ಜೆಯಲ್ಲಿರುವ ಪ್ರೋಟೀನ್ ಅಂಶವು ಸ್ನಾಯುಗಳ ನಿರ್ಮಾಣಕ್ಕೆ ಮತ್ತು ಅಂಗಾಂಶಗಳ ದುರಸ್ತಿಗೆ ಸಹಾಯ ಮಾಡುತ್ತದೆ.
• ಸಜ್ಜೆ ಹಿಟ್ಟು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಮೂತ್ರಪಿಂಡ ಮತ್ತು ಲಿವರ್ ಸಮಸ್ಯೆಗಳಿಂದ ರಕ್ಷಣೆ ಪಡೆಯಬಹುದು.
• ಸಜ್ಜೆಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಅಂದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಧಾನವಾಗಿ ಹೆಚ್ಚಿಸುತ್ತದೆ. ಹೀಗಾಗಿ, ಇದು ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು.
ಒಟ್ಟಾರೆ, ಸಜ್ಜೆ ಇಡ್ಲಿಯು ಆರೋಗ್ಯಕರ ಮತ್ತು ರುಚಿಕರವಾದ ಉಪಹಾರವಾಗಿದೆ. ಇದನ್ನು ತಯಾರಿಸುವುದು ಕೂಡ ಸುಲಭ. ವಾರಕ್ಕೊಮ್ಮೆಯಾದರೂ ಸಜ್ಜೆ ಇಡ್ಲಿಯನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.



Click it and Unblock the Notifications