Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹೂವಿನಂತೆ ಮೃದುವಾದ ಬಲೂನ್ ರೀತಿ ಉಬ್ಬುವ ಚಪಾತಿ ಮಾಡಿ: ಹದ ಇಲ್ಲಿದೆ!
ನೀವು ಬ್ರೇಕ್ಫಾಸ್ಟ್ಗೆ ಹಲವು ರೀತಿಯ ತಿಂಡಿಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ತೂಕ ಇಳಿಸುವುದು ಹಾಗೆ ಡಯೆಟ್ ಮಾಡುವವರ ಪ್ರಿಯವಾದ ತಿಂಡಿ ಅಂದ್ರೆ ಅದು ಚಪಾತಿ. ಬಹುತೇಕರ ಮನೆಯ ಬೆಳಗ್ಗೆ ತಿಂಡಿಗೆ ಚಪಾತಿ ಇದ್ದೇ ಇರಲಿದೆ. ಹಾಗೆ ಊಟಕ್ಕೂ ಕೂಡ ಚಪಾತಿ ಮಾಡುವುದು ಕಾಮನ್. ಗೋಧಿ ಹಿಟ್ಟಿನಲ್ಲಿನ ಆರೋಗ್ಯಕರ ಅಂಶಗಳ ಕಾರಣ ಚಪಾತಿ ಆರೋಗ್ಯಕ್ಕೆ ಬಹಳ ಉತ್ತಮವಾಗಿರಲಿದೆ.
ಗೋಧಿಯಲ್ಲಿನ ಫೈಬರ್ ಅಂಶ ಜೀರ್ಣಕ್ರಿಯೆಗೆ ಬಹಳ ಉತ್ತಮ. ಹಾಗೆ ತೂಕ ಇಳಿಸಲು ಇದರಲ್ಲಿನ ಹಲವು ಆರೋಗ್ಯಕರ ಅಂಶಗಳು ಕಾರಣವಾಗುತ್ತವೆ. ಹಾಗೆ ಬಹಳ ಸಮಯ ಇದನ್ನು ಇಡಬಹುದಾಗಿರುವುದರಿಂದ ಎಲ್ಲರು ಮಾಡಿ ಸವಿಯಲು ಮುಂದಾಗುತ್ತಾರೆ. ಹಾಗೆ ಚಪಾತಿ ಮಕ್ಕಳ ಆರೋಗ್ಯಕ್ಕೂ ಬಹಳ ಉತ್ತಮ. ಇನ್ನು ಹಲವು ರೀತಿಯಲ್ಲಿ ಚಪಾತಿ ಮಾಡಿ ಸವಿಯುವುದು ನೋಡಿರುತ್ತೇವೆ.

ಚಪಾತಿಯು ಮೃದುವಾಗಿ, ಹಾಗೆ ಉಬ್ಬಿ ಬರುವಂತೆ ಮಾಡಬೇಕು ಎಂಬುದು ಎಲ್ಲರ ಬಯಕೆಯಾಗಿರಲಿದೆ. ಹಾಗೆ ಈ ರೀತಿಯ ಅದ್ಭುತ ರುಚಿಯ ಚಪಾತಿ ಮಾಡಬೇಕು ಅಂದರೆ ಅದಕ್ಕೆ ಹಿಟ್ಟು ಸರಿಯಾಗಿ ಮಾಡಿಕೊಳ್ಳಬೇಕಾಗುತ್ತದೆ. ಈ ಹಿಟ್ಟನ್ನು ಸರಿಯಾದ ಹದ ಮಾಡಿಕೊಂಡರೆ ಚಪಾತಿ ಬಲೂನ್ನಂತೆ ಉಬ್ಬಿ ಬರಲಿದೆ.
ಹಾಗಾದ್ರೆ ಹೂವಿನಂತೆ ಮೃದುವಾದ ಹಾಗೆ ಚಪಾತಿ ಪೂರಿಯಂತೆ ಉಬ್ಬಬೇಕು ಅಂದ್ರೆ ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಚಪಾತಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪೂರಿಯಂತ ಚಪಾತಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಗೋಧಿ ಹಿಟ್ಟು
- ನೀರು
- ಎಣ್ಣೆ
- ಉಪ್ಪು
ಪೂರಿಯಂತ ಚಪಾತಿ ಮಾಡುವ ವಿಧಾನವೇನು?
ಒಂದು ಬೌಲ್ನಲ್ಲಿ ಚಪಾತಿ ಹಿಟ್ಟು ತೆಗೆದುಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಹಿಟ್ಟು ಒದ್ದೆಯಾದ ಬಳಿಕ ಸ್ವಲ್ಪ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿರುವಂತೆ ಅಥವಾ ಅಂಟು ಅಂಟಾಗಿ ಹಿಟ್ಟು ಹದಕ್ಕೆ ಬರುವಂತೆ ಕಲಸಿಕೊಳ್ಳಿ.
ಹಿಟ್ಟನ್ನು 5 ನಿಮಿಷ ಚೆನ್ನಾಗಿ ಕಲಸಿಕೊಳ್ಳಿ. ಈಗ ಅರ್ಧ ಚಮಚ ಅಡುಗೆ ಎಣ್ಣೆ ಇದಕ್ಕೆ ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ನಿಮ್ಮಲ್ಲಿ ಕೊಬ್ಬರಿ ಎಣ್ಣೆ ಇದ್ದರೆ ಹಾಕಿಕೊಳ್ಳಿ. ಮತ್ತೆ ಕಲಸಿಕೊಂಡ ಬಳಿಕ ಈಗ ಹಿಟ್ಟನ್ನು ಉಂಡೆ ಕಟ್ಟಿಕೊಂಡು ಮೇಲೆ ಎಣ್ಣೆ ಹಚ್ಚಿ ಮುಚ್ಚಿ ಇಟ್ಟುಬಿಡಿ. 10 ನಿಮಿಷ ಇಟ್ಟುಕೊಳ್ಳಿ.
ಈಗ ಈ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಯನ್ನು ಕಟ್ಟಿಕೊಳ್ಳಿ. ಈ ಉಂಡೆಗಳು ಮೃದುವಾಗಿ ಕಟ್ಟಿಕೊಳ್ಳಿ. ಅದರಲ್ಲಿ ಗೆರೆಗಳು ಮೂಡದಂತೆ ಉಂಡೆ ಮಾಡಿಟ್ಟುಕೊಳ್ಳಿ. ಈಗ ಚಪಾತಿ ಮಣೆಯ ಮೇಲೆ ಒಣ ಹಿಟ್ಟು ಹಾಕಿಕೊಂಡು ಮೆತ್ತಗಾಗಿ ಲಟ್ಟಿಸಿಕೊಳ್ಳಬೇಕು. ಹೆಚ್ಚು ಒತ್ತಿಕೊಂಡು ಚಪಾತಿ ಮಾಡಿದರೆ ಅದು ಗಟ್ಟಿಯಾಗುತ್ತದೆ. ಹೀಗಾಗಿ ನಿಧಾನವಾಗಿ ಒತ್ತಿಕೊಳ್ಳಿ.
ಈಗ ಕಾವಲಿಯನ್ನು ಬಿಸಿ ಮಾಡಿಕೊಂಡು ಸ್ವಲ್ಪ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ನಂತರ ನಿಧಾನವಾಗಿ ಈ ಚಪಾತಿಯನ್ನು ಹಾಕಿ ಕಾಯಿಸಬೇಕು. ಕಾವಲಿಗೆ ಹಾಕಿದ ತಕ್ಷಣ ಅದನ್ನು ತಿರುಗಿಸಿ ಹಾಕಿಕೊಳ್ಳಬೇಕು. ಹೀಗೆ ತಕ್ಷಣ ಒಂದು ಕಡೆ ಹೆಚ್ಚು ಕಾಲ ಚಪಾತಿ ಕರಿಯಲು ಬಿಡಬೇಡಿ. ಹಾಗೆ ಎಣ್ಣೆ ಸವರಿಕೊಳ್ಳುತ್ತಾ ಚಪಾತಿ ಮಾಡಿ. ಕೆಲವರು ಕಾವಲಿ ಬಳಸದೆ ನೇರವಾಗಿ ಗ್ಯಾಸ್ ಮೇಲೆ ಚಪಾತಿ ಸುಡಲಿದ್ದಾರೆ. ಇದು ಕೂಡ ಪೂರಿಯಂತೆ ಉಬ್ಬಿ ಬರಲು ಸಹಾಯ ಮಾಡಲಿದೆ.



Click it and Unblock the Notifications
