Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಹತ್ತಿಯಂತೆ ಮೃದುವಾದ ಸ್ವೀಟ್ ಪಡ್ಡು ಮಾಡೋದು ಹೇಗೆ? ನೀವೂ ಟ್ರೈ ಮಾಡಿ!
ನೀವು ಬೆಳಗ್ಗೆ ತಿಂಡಿಗೆ ಅತ್ಯಂತ ರುಚಿಕರವಾದ ಖಾದ್ಯ ಮಾಡಿ ಸವಿಯಲು ಇಷ್ಟಪಡುತ್ತೀರಿ. ಹೀಗಾಗಿ ಇಡ್ಲಿ, ದೋಸೆಯಂತಹ ರುಚು ರುಚಿಯ ಖಾದ್ಯ ಸವಿಯುವುದು ಕಾಮನ್. ಹಾಗೆ ಬೆಳಗ್ಗೆ ನಾಲಗೆ ಮೇಲೆ ರುಚಿ ಬಿದ್ದರೆ ಅದರ ರುಚಿ ಇಡೀ ದಿನ ನೆನೆಯುತ್ತೇವೆ. ಹಾಗೆ ಬೆಳಗ್ಗೆ ಸವಿಯಲು ನಾವು ಪಡ್ಡು ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಹೊಸ ರೀತಿಯಲ್ಲಿ ಸ್ವೀಟ್ ಪಡ್ಡು ಮಾಡುವ ಕುರಿತು ತಿಳಿಯೋಣ.
ಪಡ್ಡು ಮಾಡುವುದರಲ್ಲಿ ಎರಡು ವಿಧವಿದೆ. ಸ್ವೀಟ್ ಪಡ್ಡು, ಇನ್ನೊಂದು ಖಾರ ಪಡ್ಡು, ಈ ಎರಡೂ ಬಗೆ ಕೂಡ ಸವಿಯಲು ಬಹಳ ರುಚಿಕರವಾಗಿರುತ್ತೆ. ಇಂದು ನಾವು ಸ್ವೀಟ್ ಪಡ್ಡು ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಬೆಳಗ್ಗೆ ಬಾಯಿ ರುಚಿಗೆ ಈ ಸ್ವೀಟ್ ಪಡ್ಡುಬಹಳ ರುಚಿಯಾಗಿರುತ್ತೆ. ಮಕ್ಕಳಿಗಂತು ಈ ಸ್ವೀಟ್ ಪಡ್ಡು ಸವಿಯುವುದು ಅಂದ್ರೆ ಬಹು ಇಷ್ಟವಾಗುತ್ತೆ.

ಸ್ವೀಟ್ ಪಡ್ಡು ಮಾಡುವುದು ಸಾಮಾನ್ಯ ಪಡ್ಡು ಮಾಡಿದಂತೆ ಅಲ್ಲವೇ ಅಲ್ಲ. ಈ ಪಡ್ಡು ವಿಶೇಷವಾಗಿ ವಿಭಿನ್ನ ರುಚಿಯಲ್ಲಿ ಮಾಡಿದರೆ ಎಲ್ಲರಿಗೂ ಇಷ್ಟವಾಗೋದು ಪಕ್ಕ. ಹಾಗಾದ್ರೆ ಈ ಸ್ವೀಟ್ ಪಡ್ಡು ಮಾಡುವ ಕುರಿತು ನಾವಿಂದು ತಿಳಿಯೋಣ. ಸ್ವೀಟ್ ಪಡ್ಡು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಈ ಪಡ್ಡು ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಸ್ವೀಟ್ ಪಡ್ಡು ಮಾಡಲು ಹಿಟ್ಟು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸ್ವೀಟ್ ಪಡ್ಡು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ - 1 ಕಪ್
- ತೆಂಗಿನ ಕಾಯಿ ತುರಿ
- ತೆಳು ಅವಲಕ್ಕಿ
- ಬೆಲ್ಲ
- ಉಪ್ಪು
- ಎಣ್ಣೆ
- ಸೋಡಾ
ಸ್ವೀಟ್ ಪಡ್ಡು ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ನಲ್ಲಿ ಅಕ್ಕಿ ಹಾಕಿ ಚೆನ್ನಾಗಿ ತೊಳೆದು ಕನಿಷ್ಠ 2 ಗಂಟೆಗಳಾದರು ನೆನೆಸಿಡಬೇಕು. ಈ ನೆನೆಸಿಟ್ಟ ಅಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ಅರ್ಧ ಕಪ್ ತೆಳು ಅವಲಕ್ಕಿ, ಅರ್ಧ ಕಪ್ ಪುಡಿ ಬೆಲ್ಲ, ಅರ್ಧ ಕಪ್ ತೆಂಗಿನಕಾಯಿ ತುರಿ ಹಾಕಿಕೊಳ್ಳಬೇಕು. ಹಾಗೆ ಇದಕ್ಕೆ ಉಪ್ಪು, ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ರುಬ್ಬಿದ ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ, ಮಿಕ್ಸಿ ಜಾರ್ಗೆ ಸ್ವಲ್ಪ ನೀರು ಹಾಕಿ ಕಲಸಿ ಅದನ್ನು ಕೂಡ ಪಾತ್ರೆಗೆ ಹಾಕಿ ಚೆನ್ನಾಗಿ ಹಿಟ್ಟನ್ನು ಕಲಸಿಕೊಳ್ಳಬೇಕು. ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿ ಈ ಹಿಟ್ಟು ಇರಬೇಕು, ಸಿಹಿ ಹಾಗೂ ಉಪ್ಪು ರುಚಿ ನೋಡಿ ಬೇಕಿದ್ದರೆ ಹಾಕಿಕೊಳ್ಳಿ. ಈಗ ಎರಡು ಚಿಟಿಕೆಯಷ್ಟು ಸೋಡಾ ಕೂಡ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಹಿಟ್ಟು ರೆಡಿಯಾದ ಬಳಿಕ ಮುಚ್ಚಳ ಮುಚ್ಚಿ 30 ನಿಮಿಷ ಹಾಗೆಯೇ ಇಡಬೇಕು, 30 ನಿಮಿಷದ ಬಳಿಕ ಮುಚ್ಚಳ ತೆಗೆದು ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಒಲೆ ಮೇಲೆ ಪಡ್ಡು ಕಾವಲಿ ಇಟ್ಟು ಬಿಸಿಯಾದಾಗ ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿಕೊಳ್ಳಿ. ನಂತರ ಹಿಟ್ಟನ್ನು ತೆಗೆದುಕೊಂಡು ಮುಕ್ಕಾಲು ಭಾಗ ತುಂಬುವಷ್ಟು ಪಡ್ಡಿನ ಹಿಟ್ಟನ್ನು ಹಾಕಿಕೊಳ್ಳಿ.
ಒಂದು ಕಡೆ ಪಡ್ಡು ಬೆಂದ ಬಳಿಕ ಮತ್ತೆ ಇನ್ನೊಂದು ಕಡೆ ಬೇಯಲು ತಿರುಗಿಸಿಕೊಳ್ಳಬೇಕು. ಒಟ್ಟು ಎರಡು ಕಡೆ ಸೇರಿ 4 ನಿಮಿಷ ಬೇಯಿಸಿದರೆ ಸಾಕು. ನಂತರ ತೆಗೆದು ಬಿಸಿ ಬಿಸಿಯಾಗಿದ್ದಾಗಲೇ ಸವಿಯಲು ನೀಡಿದರೆ ರುಚಿ ರುಚಿಯಾಗಿರುತ್ತೆ. ನೀವು ಕೂಡ ಈ ರೀತಿ ಸ್ವೀಟ್ ಪಡ್ಡು ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications
