Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಪಾಕವಿಲ್ಲದೆ ಥಟ್ ಅಂತ ರವೆ ಉಂಡೆ ಮಾಡಿ..! ಮೃದುವಾಗಿ ಬೆಣ್ಣೆಯಂತಹ ತಿಂಡಿ ಇದು!
ಎಲ್ಲರಿಗೂ ಸಿಹಿ ಸವಿಯೋದು ಅಂದರೆ ಬಹಳ ಇಷ್ಟವಾಗುತ್ತೆ. ಅದರಲ್ಲು ಮನೆಯಲ್ಲಿ ಇಷ್ಟದ ಸಿಹಿ ಮಾಡಿ ಸವಿಯೋಕೆ ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಅದರಲ್ಲೂ ಮನೆಯಲ್ಲಿ ಶುಭ ಕಾರ್ಯವಿದ್ದರೆ, ಅಥವಾ ಅತಿಥಿಗಳು ಬಂದರೆ ಇಲ್ಲವೆ ಏನಾದರು ಶುಭ ಘಳಿಗೆ ಇದ್ದಾಗ ಸಿಹಿ ಮಾಡಿ ಸವಿಯುವುದು ಕಾಮನ್. ಸಿಹಿ ತಿಂಡಿಯಲ್ಲೂ ಹಲವು ವಿಧಗಳು ಹಲವು ಬಗೆಯಲ್ಲಿ ಮಾಡುವುದು ನೋಡಬಹುದು.
ಇನ್ನು ನಾವು ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸವಿಯಲು ಇಷ್ಟಪಡುವಂತಹ ರವೆ ಉಂಡೆಯನ್ನು ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಕೂಡ ಮನೆಯಲ್ಲಿ ರವೆ ಉಂಡೆ ಮಾಡಿರುತ್ತೀರಿ. ಅದರ ರುಚಿ ಸವಿದು ಮತ್ತೊಮ್ಮೆ ಮಾಡಲು ಮುಂದಾಗಿರುತ್ತೀರಿ. ಆದ್ರೆ ನಾವಿಂದು ವಿಶೇಷ ರೀತಿಯ ವಿಭಿನ್ನ ರುಚಿ ನೀಡುವಂತಹ ಮೃದುವಾದ ರವೆ ಉಂಡೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ನೀವು ರವೆಯನ್ನು ಬಳಸಿ ಮಾಡುವ ಈ ಉಂಡೆಯನ್ನು ಹಲವು ದಿನ ಇಟ್ಟು ಸವಿದಿರುತ್ತೀರಿ. ಹಾಗಾದ್ರೆ ವಿಶೇಷ ರೀತಿಯ ಈ ರವೆ ಉಂಡೆಯನ್ನು ಮಾಡಲು ಯಾಬೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮನೆಯಲ್ಲಿ ರವೆ ಉಂಡೆ ಮಾಡಲು ಬೇಕಾಗುವ ಪದಾರ್ಥಗಳು
ಚಿರೋಟಿ ರವೆ
ಸಕ್ಕರೆ 1 ಕಪ್ ( ಪುಡಿ ಮಾಡಿರುವುದು)
ಒಣ ತೆಂಗಿನಕಾಯಿ ತುರಿ
ಗೋಡಂಬಿ
ಒಣದ್ರಾಕ್ಷಿ
ಏಲಕ್ಕಿ
ತುಪ್ಪ
ಹಾಲು- ಕಾಲು ಲೀಟರ್
ರುಚಿ ರುಚಿಯ ರವೆ ಉಂಡೆ ಮಾಡುವ ವಿಧಾನವೇನು?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ತುಪ್ಪ ಹಾಕಿ ಕರಗಲು ಬಿಡಿ ನಂತರ ಗೋಡಬಿ, ದ್ರಾಕ್ಷಿ ಹಾಕಿ ಫ್ರೈ ಮಾಡಿಕೊಂಡು ಎತ್ತಿಟ್ಟುಕೊಳ್ಳಿ. ನಂತರ ಇದೇ ಬಾಣಲೆಗೆ ಮತ್ತೆ ತುಪ್ಪ ಹಾಕಿ ಚಿರೋಟಿ ರವೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಹುರಿದುಕೊಳ್ಳಿ. ರವೆ ಚೆನ್ನಾಗಿ ಮಿಕ್ಸ್ ಆಗಿ ಘಮ ಘಮ ಎನ್ನುವ ಸುವಾಸನೆ ಬರಬೇಕು. 5 ನಿಮಿದ ಹುರಿದ ಬಳಿಕ ಗ್ಯಾಸ್ ಆಫ್ ಮಾಡಿಕೊಳ್ಳಿ.
ಆದರೆ ಒಲೆ ಮೇಲೆ ಇದ್ದಾಗಲೆ ಒಣ ಕೊಬ್ಬರಿ ಹಾಗೆ ಗೋಡಂಬಿ, ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಸಕ್ಕರೆ ಪುಡಿ ಸಹ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಾಗೆ ಏಲಕ್ಕಿ ಪುಡಿ ಕೂಡ ಸೇರಿಸಿಕೊಳ್ಳಿ. ಎಲ್ಲಾ ಪದಾರ್ಥ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ತಣ್ಣಗಾಗಲು ಬಿಡಿ. ಒಂದು ತಟ್ಟೆಗೆ ಹಾಕಿಕೊಂಡು ಇಟ್ಟುಕೊಳ್ಳಿ.
ಹಾಗೆ ಒಂದು ಮುಷ್ಟಿಯಲ್ಲಿ ಹಿಟ್ಟು ತೆಗೆದುಕೊಂಡು ಅದಕ್ಕೆ 2 ಸ್ಪೂನ್ ಅಷ್ಟು ಹಾಲು ಹಾಕಿಕೊಂಡು ಉಂಡೆ ಕಟ್ಟಿಕೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ಹಾಲು ಹಾಕಿಕೊಳ್ಳಬೇಡಿ. ನಿಧಾನವಾಗಿ ಒತ್ತಿಕೊಳ್ಳುತ್ತಾ ಕಡಿಮೆ ಹಾಲು ಬಳಸಿ ಉಂಡೆ ಕಟ್ಟಿಕೊಳ್ಳಿ. ಇದೇ ರೀತಿ ಎಲ್ಲಾ ರವೆಯನ್ನು ಕೂಡ ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ರವೆ ಉಂಡೆ ರೆಡಿಯಾಗುತ್ತದೆ.
ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಇದನ್ನು ಮಾಡಬಹುದು. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ನೋಡಿ. ಬಹಳ ರುಚಿಯಾಗಿರುವ ಕಾರಣ ಎಲ್ಲರಿಗೂ ಇದು ಇಷ್ಟವಾಗುತ್ತದೆ. ನೀವು ಸಹ ಮನೆಯಲ್ಲಿ ಟ್ರೈ ಮಾಡಿ. ಮಕ್ಕಳಿಗೆ ಈ ಮೃದುವಾದ ರವೆ ಉಂಡೆ ಬಹಳ ಇಷ್ಟವಾಗಲಿದೆ, ಹಾಗೆ ಇದನ್ನು ಮಾಡಲು ಯಾವುದೇ ಪಾಕ ಮಾಡಿಕೊಳ್ಳುವ ಅವಶ್ಯಕತೆಯೂ ಇಲ್ಲ. ಹೀಗಾಗಿ ಥಟ್ ಅಂತ ಸುಲಭವಾಗಿ ಮಾಡಬಹುದು.



Click it and Unblock the Notifications
