Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮೃದುವಾದ ರಾಗಿ ಇಡ್ಲಿ ಮಾಡುವುದು ಹೇಗೆ? ಇಲ್ಲಿದೆ ಸುಲಭದ ವಿಧಾನ
ರಾಗಿ ಪ್ರತಿಯೊಬ್ಬರ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ನೀವು ತಿಳಿದಿರಬಹುದು. ರಾಗಿಯಲ್ಲಿ ಫೈಬರ್ ಹಾಗೂ ಕಬ್ಬಿಣಾಂಶ ಹೆಚ್ಚಾಗಿದೆ. ಹೀಗಾಗಿ ನೀವು ನಿತ್ಯ ರಾಗಿ ಸವಿದರೆ ಎಂದಿಗೂ ರೋಗಗಳಿಗೆ ತುತ್ತಾಗುವುದಿಲ್ಲ ಎನ್ನಲಾಗುತ್ತೆ. ಹಾಗೆ ನಿಮ್ಮ ಮೂಳೆಯ ಆರೋಗ್ಯಕ್ಕೆ ಇದು ಬಹಳ ಉತ್ತಮ. ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಿದ್ದರೆ ರಾಗಿಯಿಂದ ಮಾಡುವ ಖಾದ್ಯ ಸವಿಯಲು ಸಲಹೆ ನೀಡಲಾಗುತ್ತದೆ.
ಇನ್ನು ರಾಗಿಯಿಂದ ನೀವು ಹಲವು ರೀತಿಯ ಖಾದ್ಯಗಳ ಮಾಡಿ ಸವಿಯಬಹುದು ಎಂಬುದು ನೀವು ತಿಳಿದಿರಬಹುದು. ರಾಗಿ ದೋಸೆ, ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಅಂಬಲಿ, ರಾಗಿ ಉಪ್ಪಿಟ್ಟು, ಹೀಗೆ ರಾಗಿಯಿಂದ ಹತ್ತಾರು ಬಗೆಯ ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು. ಅದರಲ್ಲೂ ರಾಗಿ ಮಕ್ಕಳಿಗೂ ಕೂಡ ನೀಡಬಹುದಾದ ಅದ್ಭುತ ವಸ್ತು. ರಾಗಿಯಲ್ಲಿ ಕ್ಯಾಲ್ಸಿಯಂ ಹೆಚ್ಚಿರುವ ಕಾರಣದಿಂದ ರಾಗಿ ಮುದ್ದೆ ತಿಂದರೆ ದೇಹ ಗಟ್ಟಿಯಾಗುತ್ತದೆ ಎಂದು ಹಿರಿಯರು ಕೂಡ ಹೇಳುವುದು ನೋಡಬಹುದು. ಹಾಗೆ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಹೊಂದಿರುವವರು ಕೂಡ ಈ ರಾಗಿ ಸವಿಯುವಂತೆ ಶಿಫಾರಸು ಮಾಡಲಾಗುತ್ತದೆ.

ಇನ್ನು ನಾವು ರಾಗಿಯಿಂದ ಮಾಡಬಹುದಾದ ಮೃದುವಾದ ಇಡ್ಲಿ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಈ ರೀತಿಯಾಗಿ ಇಡ್ಲಿ ಮಾಡಿ ಸವಿದರೆ ನಿಮ್ಮ ಆರೋಗ್ಯಕ್ಕೂ ಬಹಳ ಉಪಯೋಗಕಾರಿಯಾಗಲಿದೆ. ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ ಇದು. ಹಾಗಾದ್ರೆ ಈ ರಾಗಿ ಇಡ್ಲಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಗಿ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ರಾಗಿ ಹಿಟ್ಟು
ಅವಲಕ್ಕಿ
ಉದ್ದಿನ ಬೇಳೆ
ಎಣ್ಣೆ
ಉಪ್ಪು
ರಾಗಿ ಇಡ್ಲಿ ಮಾಡುವುದು ಹೇಗೆ?
ಒಂದು ಬೌಲ್ಗೆ ಅರ್ಧ ಗ್ಲಾಸ್ ಉದ್ದಿನ ಬೇಳೆ ಹಾಕಿ ಹಾಗೆ ಅದೇ ಗ್ಲಾಸ್ನಲ್ಲಿ ಕಾಲು ಗ್ಲಾಸ್ ಅವಲಕ್ಕಿ ಹಾಕಿ ನೀರು ಹಾಕಿ ತೊಳೆದುಕೊಳ್ಳಬೇಕು. ನಂತರ ಇದಕ್ಕೆ ನೀರು ಹಾಕಿ ನೆನೆಸಿಡಬೇಕು. ಇದು ಸುಮಾರು 5 ಗಂಟೆ ನೆನೆಯಬೇಕು. ನಂತರ ಇದನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಎಷ್ಟು ನುಣ್ಣಗೆ ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಬೇಕು.
ಈಗ ಅದೇ ಮಿಕ್ಸಿ ಜಾರ್ಗೆ 2 ಗ್ಲಾಸ್ ರಾಗಿ ಹಿಟ್ಟು ಹಾಕಿ ನೀರು ಹಾಕಿ ರುಬ್ಬಿಕೊಳ್ಳಬೇಕು. ಇದನ್ನು ಕೂಡ ಉದ್ದಿನ ಬೇಳೆ ಹಿಟ್ಟಿಗೆ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಎನ್ನಾಗಿ ಮಿಶ್ರಣ ಮಾಡಿಕೊಂಡ ಬಳಿಕ ಮುಚ್ಚಳ ಮುಚ್ಚಿ ಭಾರವಾದ ವಸ್ತು ಮೇಲೆ ಇಟ್ಟು 1 ರಾತ್ರಿ ಹಾಗೆಯೇ ಬಿಡಿ. ಬೆಳಗ್ಗೆ ಅದನ್ನು ಮತ್ತೆ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಸೋಡಾ ಹಾಕುವ ಅಗತ್ಯವಿಲ್ಲ. ಹಾಗೆ ಹಿಟ್ಟು ರೆಡಿ ಮಾಡಿಕೊಳ್ಳಿ. ಈಗ ಇಡ್ಲಿ ತಟ್ಟೆಯನ್ನು ಅಥವಾ ಕಪ್ ಅನ್ನು ತೆಗೆದುಕೊಂಡು ಎಣ್ಣೆ ಹಚ್ಚಿಕೊಂಡು ಹಿಟ್ಟು ಹಾಕಿಕೊಳ್ಳಿ. ನಂತರ ಸುಮಾರು 15 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಇದು ಬೇಯುತ್ತದೆ. ಇಷ್ಟಾದರೆ ಬೆಳಗ್ಗೆ ಸವಿಯಲು ನಿಮ್ಮ ಮುಂದೆ ರುಚಿ ರುಚಿಯ ಈ ರಾಗಿ ಇಡ್ಲಿ ರೆಡಿಯಾಗುತ್ತದೆ.
ಈ ರಾಗಿ ಇಡ್ಲಿ ಮಾಡೋದು ಬಹಳ ಸುಲಭ ಹಾಗೆ ಬಹಳ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ಸವಿದು ನೋಡಿ. ನೀವು ಈ ರಾಗಿ ಇಡ್ಲಿಗೆ ಹುರಿಗಡಲೆ ಚಟ್ನಿ, ತೆಂಗಿನಕಾಯಿ ಚಟ್ನ, ಕಾಳು ಪಲ್ಯಗಳು, ಸಾಂಬಾರ್, ಶೇಂಗಾ ಚಟ್ನಿಯಂತಹ ಯಾವುದಾದರು ಖಾದ್ಯ ಸೈಡ್ ಡಿಶ್ ಆಗಿ ಬಳಸಬಹುದು. ಆರೋಗ್ಯದ ದೃಷ್ಟಿಯಲ್ಲಿ ಇದು ಬಹಳ ಉತ್ತಮ ಖಾದ್ಯವಾಗಿದೆ.



Click it and Unblock the Notifications
