Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಮದುವೆ ಮನೆಯ ಪೈನಾಪಲ್ ಕೇಸರಿ ಬಾತ್ ಮಾಡಿ, ಬಾಯಲ್ಲಿ ಕರಗುವ ಸಿಹಿ ಇದು!
ಮನೆಯಲ್ಲಿ ಹಬ್ಬವಿದ್ದಾಗ, ಶುಭ ಕಾರ್ಯವಿದ್ದಾಗ ಇಲ್ಲವೆ ಅತಿಥಿಗಳು, ಸಂಬಂಧಿಕರು ಬರುವ ಸೂಚನೆ ಇದ್ದಾಗ ಅವರಿಗೆ ಸಿಹಿ ಮಾಡಿ ಸವಿಯಲು ನೀಡುವುದು ಸಾಮಾನ್ಯ. ಹಾಗೆ ಯಾವ ಸಿಹಿ ಮಾಡಬೇಕು? ಸುಲಭವಾಗಿ ಮಾಡುವ ಸಿಹಿಗಳ ಸಾಲಿನಲ್ಲಿ ಕೇಸರಿಬಾತ್ ಸಹ ಒಂದಾಗಿರಲಿದೆ. ಆದ್ರೆ ಅದನ್ನು ರವೆ ಮೂಲಕ ಮಾಡುವುದು ಒಂದು ಕಡೆಯಾದರೆ ನಾವಿಂದು ವಿಶೇಷ ಕೇಸರಿಬಾತ್ ಮಾಡುವ ಕುರಿತು ತಿಳಿಯೋಣ.
ನೀವು ಪೈನಾಪಲ್ ಹಣ್ಣಿನಿಂದ ಮಾಡುವ ಕೇಸರಿ ಬಾತ್ ಸವಿದಿರುತ್ತೀರಿ. ಮದುವೆ ಮನೆಯಲ್ಲಿ ಅಥವಾ ವಿಶೇಷ ಕಾರ್ಯಕ್ರಮಗಳಲ್ಲಿ ಈ ಪೈನಾಪಲ್ ಕೇಸರಿಬಾತ್ ಸವಿದಿರಬಹುದು. ಇದರ ರುಚಿಯ ಮುಂದೆ ಬೇರೆಲ್ಲಾ ಸಿಹಿಗಳ ಹೆಸರು ಮರೆತುಹೋಗಲಿದೆ. ಬಹಳ ರುಚಿಯಾದ ಯಾಗೆ ನಾಲಗೆ ಮೇಲೆ ಇಟ್ಟರೆ ಕರಗುವಂತಹ ಈ ಸಹಿ ಎಲ್ಲರಿಗೂ ಇಷ್ಟವಾಗುತ್ತೆ.

ಮಕ್ಕಳು ಹಾಗೆ ಹಿರಿಯರು ಸಹ ಈ ಪೈನಾಪಲ್ ಕೇಸರಿಬಾಯ್ ಬಾಯಿ ಚಪ್ಪರಿಸಿ ಸವಿಯೋದು ನೋಡಬಹುದು. ಹಾಗೆ ಇದನ್ನು ಮಾಡುವುದು ಸಹ ಬಹಳ ಸುಲಭ. ಹಾಗಾದ್ರೆ ಈ ರುಚಿ ರುಚಿಯ ಪೈನಾಪಲ್ ಕೇಸರಿಬಾತ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಪೈನಾಪಲ್ ಕೇಸರಿಬಾತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪೈನಾಪಲ್
- ಸಕ್ಕರೆ
- ತುಪ್ಪ
- ಗೋಡಂಬಿ
- ರವೆ
- ದ್ರಾಕ್ಷಿ
ಪೈನಾಪಲ್ ಕೇಸರಿಬಾತ್ ಮಾಡುವ ವಿಧಾನವೇನು?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅರ್ಧ ಕಪ್ ತುಪ್ಪ ಹಾಕಿ ಬಿಸಿಯಾದ ಬಳಿಕ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಈಗ ಇದೇ ತುಪ್ಪಕ್ಕೆ ಉಪ್ಪಿಟ್ಟು ರವೆಯನ್ನು ಹಾಕಿಕೊಂಡು ಹುರಿದುಕೊಳ್ಳಬೇಕು. 1 ಕಪ್ ರವೆ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದು ಘಮ ಘಮ ಎನ್ನುವಂತೆ ಹುರಿಯಬೇಕು.
ಇನ್ನೊಂದು ಒಲೆಯಲ್ಲಿ 3 ಕಪ್ ನೀರು ಹಾಕಿ ಕುದಿಬರಲು ಬಿಡಬೇಕು. ಈಗ ಹುರಿದ ಈ ರವೆಗೆ ಪಕ್ಕದಲ್ಲಿ ಕುದಿಯುತ್ತಿರುವ ನೀರನ್ನು ತೆಗೆದು ಈ ರವೆಗೆ ಹಾಕಿಕೊಳ್ಳಬೇಕು. ಹಾಗೆ ಕುದಿಬರಲು ಬಿಡಬೇಕು. ಈಗ ಸಣ್ಣದಾಗಿ ಹೆಚ್ಚಿಕೊಂಡಿರುವ ಅರ್ಧ ಕಪ್ ಪೈನಾಪಲ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
ಈಗ ಇದಕ್ಕೆ ಹಳದಿ ಅಥವಾ ಕೇಸರಿ ಬಣ್ಣ ಸೇರಿಸಿಕೊಂಡು ಮಿಕ್ಸ್ ಮಾಡಿ. ಇದಕ್ಕೆ ಮತ್ತೆ ಅರ್ಧ ಕಪ್ ತುಪ್ಪ ಸೇರಿಸಿಕೊಳ್ಳಬೇಕು. ಹಾಗೆ ಹುರಿದುಕೊಂಡಿದ್ದ ಗೋಡಂಬಿ ದ್ರಾಕ್ಷಿ ಹಾಕಿ ಮುಚ್ಚಳ ಮುಚ್ಚಿ 2 ನಿಮಿಷ ಬಿಡಬೇಕು. ಅನಂತರ ಮುಚ್ಚಳ ತೆಗೆದರೆ ರವೆ ಸ್ವಲ್ಪ ಗಟ್ಟಿಯಾಗಿರಲಿದೆ. ಈಗ ಇದಕ್ಕೆ ರವೆ ತೆಗೆದುಕೊಂಡ ಕಪ್ನಲ್ಲಿಯೇ ಅರ್ಧ ಕಪ್ ಸಕ್ಕರೆಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಚೆನ್ನಾಗಿ ಸಕ್ಕರೆ ಕರಗುವಂತೆ ಮಿಶ್ರಣ ಮಾಡಬೇಕು. ಒಂದೆರಡು ನಿಮಿಷದಲ್ಲಿ ಸಕ್ಕರೆ ಕರಗಲಿದೆ.
ನಂತರ ಮುಚ್ಚಳ ಮುಚ್ಚಿ 1 ನಿಮಿಷ ಬಿಡಿ. ಸಣ್ಣ ಉರಿಯಲ್ಲಿ ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಮೃದುವಾದ ಪೈನಾಪಲ್ ಕೇಸರಿ ಬಾತ್ ಸಿದ್ದವಾಗುತ್ತೆ, ನೀವು ಸಹ ಮನೆಯಲ್ಲಿ ವಿಶೇಷ ದಿನದಂದು ಇದನ್ನು ಮಾಡಿ ಸವಿದು ನೋಡಿ. ಬಹಳ ಸುಲಭದ ಹಾಗೆ ಎಲ್ಲರಿಗೂ ಇಷ್ಟವಾಗುವ ಸಿಹಿ ತಿಂಡಿ ಇದು. ಸುಲಭವಾಗಿ ಮಾಡಬಹುದು. ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಇಟ್ಟರೆ ಇದನ್ನು ಬಹಳ ದಿನ ಇಟ್ಟು ಕೂಡ ಸವಿಯಬಹುದು. ಫ್ರಿಡ್ಜ್ನಲ್ಲಿ ಸುಮಾರು 15 ದಿನಕ್ಕಿಂತ ಹೆಚ್ಚು ದಿನ ಇಟ್ಟು ಸವಿಯಬಹುದು.



Click it and Unblock the Notifications